ಹೃದಯಾಘಾತ: ಬಸ್‍ನಲ್ಲಿಯೇ ಕಂಡಕ್ಟರ್ ಸಾವು
ಚಾಮರಾಜನಗರ

ಹೃದಯಾಘಾತ: ಬಸ್‍ನಲ್ಲಿಯೇ ಕಂಡಕ್ಟರ್ ಸಾವು

September 25, 2018

ಚಾಮರಾಜನಗರ: ಕರ್ತವ್ಯಕ್ಕೆ ಸಿದ್ಧವಾಗುತ್ತಿದ್ದ ವೇಳೆಯಲ್ಲಿ ಹೃದಯಾಘಾತವಾಗಿ ಬಸ್‍ನಲ್ಲಿಯೇ ಕಂಡಕ್ಟರ್ ಒಬ್ಬರು ಸಾವನ್ನಪ್ಪಿರುವ ಘಟನೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಬಿಜಾಪುರ ಮೂಲದ ಹಿರಾಗೋಪಾಲ್ ರಾಥೋಡ್(36) ಮೃತಪಟ್ಟವರು.

ಘಟನೆಯ ವಿವರ: ಹಿರಾಗೋಪಾಲ್ ರಾಥೋಡ್ ಬೆಳಿಗ್ಗೆ 6 ಗಂಟೆಗೆ ಗುಂಡ್ಲುಪೇಟೆಗೆ ತೆರಳಬೇಕಾಗಿದ್ದ ಬಸ್‍ನಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಾಗುತ್ತಿದ್ದರು. ಈ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ ಅವರು ಕುಸಿದು ಬಿದ್ದರು ಎನ್ನಲಾಗಿದೆ. ಕೂಡಲೇ ಸಹದ್ಯೋಗಿಗಳು ಅವರನ್ನು ನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಿಸದೆ ಹಿರಾಗೋಪಾಲ್ ರಾಥೋಡ್ ಅವರು ಮೃತಪಟ್ಟಿದ್ದಾರೆ.

Translate »