ಆಹಾರ ವಿತರಣೆ ಭಾಗ್ಯ ಕೆಎಫ್‍ಸಿಗೆ ಹಸ್ತಾಂತರ
ಚಾಮರಾಜನಗರ

ಆಹಾರ ವಿತರಣೆ ಭಾಗ್ಯ ಕೆಎಫ್‍ಸಿಗೆ ಹಸ್ತಾಂತರ

September 25, 2018

ಟಿಎಪಿಸಿಎಂಎಸ್ ಅವ್ಯವಹಾರ: ಆದೇಶ ರದ್ದುಗೊಳಿಸಿದ ಆಹಾರ ಇಲಾಖೆ
ಕೊಳ್ಳೇಗಾಲ: ಕೊಳ್ಳೇಗಾಲದ ವ್ಯವಸಾಯೋತ್ವನ್ನ ಮಾರುಕಟ್ಟೆ ಸಹಕಾರ ಸಂಘದ ವತಿಯಿಂದ ನೀಡಲಾಗು ತ್ತಿರುವ ಪಡಿ ತರ ಆಹಾರ ಪದಾರ್ಥವನ್ನು ಸಾರ್ವಜನಿಕ ದೂರಿನ ಹಾಗೂ ವಿತರಣೆ ಲೋಪದ ಹಿನ್ನೆಲೆ ಕೆಎಫ್‍ಸಿ ಕೊಳ್ಳೇಗಾಲ ವಿಭಾಗಕ್ಕೆ ಹಸ್ತಾಂ ತರಿಸಿ ಆಹಾರ ಇಲಾಖೆಯ ಉಪನಿರ್ದೇ ಶಕ ರಾಜಪ್ಪ ಆದೇಶಿಸಿದ್ದಾರೆ.

ಹನೂರು ಕ್ಷೇತ್ರ ವ್ಯಾಪ್ತಿಯ ಲೊಕ್ಕನಹಳ್ಳಿ ಹೋಬಳಿಯ 25 ನ್ಯಾಯ ಬೆಲೆ ಅಂಗಡಿಗಳಿಗೆ ಟಿಎಪಿಸಿಎಂಎಸ್ ಮೂಲಕ ವಿತರಿಸಲಾಗುತ್ತಿದ್ದ ಅನ್ನ ಭಾಗ್ಯದ ಪಡಿತರ ಆಹಾರ ಪದಾರ್ಥವನ್ನು ಹಾಲಿ ವಿತರಿಸಲಾಗುತ್ತಿದ್ದ ಟಿಎಪಿಸಿಎಂಎಸ್ ಮೂಲಕ ವ್ಯಾಪಾರ ಲೋಪ ಎಸಗಿ ಸಾರ್ವಜನಿಕ ವಲಯದಿಂದ ಪ್ರತಿಭಟನೆ ಹಾಗೂ ಸಾಕಷ್ಟು ದೂರಿನ ಹಿನ್ನೆಲೆ ಸ್ಥಗಿತ ಗೊಳಿಸಿ ಕೆಎಫ್‍ಸಿ ಮೂಲಕ ವಿತರಣೆಗೆ ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಅವರಿಗೆ ಆದೇಶದಲ್ಲಿ ಸೂಚಿಸಲಾಗಿದೆ.
ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಧುವನಹಳ್ಳಿಯ ಮೂರು ನ್ಯಾಯ ಬೆಲೆ ಅಂಗಡಿ, ಲೊಕ್ಕನಹಳ್ಳಿಯ ಮೂರು, ಸಿಂಗಾನಲ್ಲೂರಿನ ಎರಡು ಹಾಗೂ ಪಿಜಿಪಾಳ್ಯ, ಹಿರಿಯಂಬಲ, ಉದ್ದಟ್ಟಿ, ಪಿಜಿ ಪಾಳ್ಯ, ದೊಡ್ಡಿಂದು ವಾಡಿ, ಹುತ್ತೂರು ಒಳಗೊಂಡಂತೆ 25 ನ್ಯಾಯಬೆಲೆ ಅಂಗಡಿಗಳಿಗೆ ಇನ್ನು ಮುಂದೆ ಕೆಎಫ್‍ಸಿ ಮೂಲಕವೇ ಅನ್ನಭಾಗ್ಯದ ಆಹಾರ ಪದಾರ್ಥ ವಿತರಣೆಯಾಗಲಿದೆ.

ಈ ಸಂಬಂಧ ತಹಶೀಲ್ದಾರ್ ಅವರು ಕಟ್ಟುನಿಟ್ಟಿನ ಕ್ರಮ ವಹಿಸಲಿದ್ದಾರೆ. ಆಹಾರ ಪದಾರ್ಥ ಪೂರೈಕೆಯಲ್ಲಿ ಲೋಪವಾದ ಹಿನ್ನೆಲೆ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಅವ್ಯವಹಾರ ಕುರಿತು ತನಿಖೆ ನಡೆಸಲಾಗು ವುದು ಯಾರೇ ಈ ಪ್ರಕರಣದಲ್ಲಿ ಭಾಗಿ ಯಾಗಿದ್ದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆಯ ಉಪನಿರ್ದೇಶಕ ರಾಜಪ್ಪ ‘ಮೈಸೂರುಮಿತ್ರ’ನಿಗೆ ತಿಳಿಸಿದರು. ಈ ಕುರಿತು ‘ಮೈಸೂರು ಮಿತ್ರ’ ಸೆ. 23ರಂದು ‘4,000 ಕ್ವಿಂಟಾಲ್ ಅಕ್ಕಿ ಗೋಡೌನ್ ಸೇರಿಲ್ವಂತೆ!’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Translate »