ಬಿಪಿಎಲ್ ಕಾರ್ಡ್ ಸಮೀಕ್ಷೆ
ಮೈಸೂರು

ಬಿಪಿಎಲ್ ಕಾರ್ಡ್ ಸಮೀಕ್ಷೆ

September 25, 2018

ಮೈಸೂರು:  ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಈ ಹಿಂದೆ ಧನಸಹಾಯ ಸ್ವರೂಪ ಹಾಗೂ ಸಮೂಹ ಬ್ಯಾಂಕ್ ಯೋಜನೆಯಡಿ ವಿವಿಧ ಉದ್ದಿಮೆಗಳಿಗೆ ಸಾಲ ಪಡೆದು, ಸಾಲವನ್ನು ಮರುಪಾವತಿ ಮಾಡದೇ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಸಮೀಕ್ಷೆ ನಡೆಸಲಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಧನಸಹಾಯ ಸ್ವರೂಪ ಹಾಗೂ ಸಮೂಹ ಬ್ಯಾಂಕ್ ಯೋಜನೆಯಡಿ ಸಾಲ ಪಡೆದು, ಸಾಲವನ್ನು ಮರುಪಾವತಿ ಮಾಡದೇ ಇರುವ ಫಲಾನುಭವಿಗಳು ಬಿಪಿಎಲ್ ಕಾರ್ಡ್‍ನ ಪ್ರತಿಯನ್ನು, ಒಂದು ವೇಳೆ ಫಲಾನುಭವಿಗಳು ಮೃತರಾಗಿದ್ದಲ್ಲಿ ಸದರಿಯವರ ಮರಣ ಪ್ರಮಾಣ ಪತ್ರದ ಪ್ರತಿ ಹಾಗೂ ವಾರಸುದಾರರು ಬಿಪಿಎಲ್ ಕಾರ್ಡ್‍ನ ಪ್ರತಿಯನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ದೃಢೀಕರಿಸಿ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಜಿಲ್ಲಾ ಕಛೇರಿ, ಸಿ.ಟಿ.ಐ ಕಟ್ಟಡ, ಮೊದಲನೆ ಮಹಡಿ, ಸಯ್ಯಾಜಿರಾವ್ ರಸ್ತೆ, (ಕಾವೇರಿ ಎಂಪೋರಿಯಂ ಹಿಂಭಾಗ,) ಮೈಸೂರು-01 ಇಲ್ಲಿಗೆ ಸೆ.30ರೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821 2566428/ 9480825633ಗೆ ಸಂಪರ್ಕಿಸುವುದು.

Translate »