ಚಾಮರಾಜನಗರ

ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ

October 5, 2018

ಚಾಮರಾಜನಗರ:  ಅಕ್ರಮ ಗಣಿಗಾರಿಕೆ ಚಟುವಟಿಕೆ ಹಾಗೂ ಪರ ವಾನಗಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ, ರೈತ ಕೂಲಿ ಸಂಗ್ರಾಮ ಸಮಿತಿ ಜಿಲ್ಲಾ ಘಟಕ ದಿಂದ ಚಾ.ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಜಿಲ್ಲಾಡಳಿತ ಭವನದ ಮುಂಭಾಗ ಸೇರಿದ ಪ್ರತಿಭಟನಾಕಾರರು ಧರಣಿ ನಡೆಸಿ, ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವ ರಿಗೆ ಮನವಿ ಸಲ್ಲಿಸಿದರು.ಅಕ್ರಮ ಗಣಿಗಾರಿಕೆ ಸಮಾಜಘಾತುಕ ಚಟುವಟಿಕೆಯಿಂದ ರೈತರಿಗೆ ಹಾಗೂ ಪರಿ ಸರಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಗಣಿಗಾರಿಕೆಯನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾಯ ಗುಂಡ್ಲುಪೇಟೆ ತಾಲೂಕಿನ ಹಿರಿ ಕಾಟಿ ಗ್ರಾಮದ ಸರ್ವೆ ನಂ. 108ರ 110 ಎಕರೆ ಸರ್ಕಾರಿ ಗೋಮಾಳವಾಗಿದೆ ಮತ್ತು ದಲಿತರ ಕೃಷಿ ಜಮೀನಿನಲ್ಲಿ ಸುಮಾರು 10-12 ವರ್ಷದಿಂದ ಅಕ್ರಮ ಕಲ್ಲು ಗಣಿ ಗಾರಿಕೆ ನಡೆಯುತ್ತಿದೆ. ಇದರಿಂದ ಸುತ್ತಮು ತ್ತಲ ಗ್ರಾಮದ ಜನರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಕಲ್ಲು ಗಣಿಗಾರಿಕೆಯಿಂದ ಹೊರ ಬರುವ ಧೂಳು, ತ್ಯಾಜ್ಯ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ತಾಲೂಕಿನ ಸುಮಾರು 100 ಗ್ರಾಮ ಗಳಿಗೆ ನೀರು ಸರಬರಾಜು ಯೋಜನೆಯಡಿ ಕೈಗೊಂಡಿರುವ ಕೊಳವೆ ಮಾರ್ಗಗಳು ಇವೆ. ಗಣಿಗಾರಿಕೆ ಅಬ್ಬರದಿಂದ ಕುಡಿ ಯುವ ನೀರಿಗೆ ಕಂಟಕ ಎದುರಾಗಿದೆ. ರೈತರು ಬೆಳೆದ ಬೆಳೆಗೂ ಕುತ್ತು ಬಂದಿದೆ. ಸರ್ಕಾರಿ ಶಾಲೆ, ಸಾರ್ವಜನಿಕ ಆಸ್ಪತ್ರೆ, ದೇವಸ್ಥಾನಗಳು ಭಾರಿ ವಾಹನಗಳ ಸಂಚಾ ರದ ಶಬ್ದಕ್ಕೆ ಬಿರುಕು ಮೂಡುತ್ತಿವೆ. ಅಲ್ಲದೆ ಗಣಿಗಾರಿಕೆಯಿಂದ ಉಂಟಾದ ಆಳವಾದ ಕಂದಕಗಳಿಂದ ಸಾವು ಸಂಭವಿಸುತ್ತಿದೆ ಎಂದು ಆರೋಪಿಸಿದರು.

ಈ ಗಣಿಗಾರಿಕೆಯಿಂದ ರೈತರ ಬೆಳೆ ಗಳಿಗೆ ಹಾನಿಯಾಗಿದೆ. ಅಲ್ಲದೆ ಸುತ್ತ ಮುತ್ತಲ ಗ್ರಾಮಗಳ ಜನರು ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಇವ ರಿಗೆ ಸೂಕ್ತ ನಿವೇಶನ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.

ಸಿಪಿಐಎಂಎಲ್ ಲಿಬರೇಷನ್ ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ, ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಕೆ.ಎಂ. ಶಿವಣ್ಣ, ಕಾರ್ಯದರ್ಶಿ ಜಯರಾಮ್, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಸಂಚಾಲಕ ಗಂಗಾ ಧರ, ಮಂಜು ಬೋವಿ, ಸಿ.ಚಂದ್ರ ಶೇಖರ್, ಭಾಗ್ಯಮ್ಮ, ಜ್ಯೋತಿ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬೇಡಿಕೆಗಳು:

  • ಜಿಲ್ಲಾಯ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿನ ಸರ್ವೆ ನಂ.108ರಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಮತ್ತು ಪರವಾನಗಿಯನ್ನು ಕೂಡಲೇ ರದ್ದುಗೊಳಿಸಬೇಕು.
  • ಬಡವರಿಗೆ ವಸತಿ, ನಿವೇಶನ, ಶೌಚಾಲಯ, ಮನೆ ಮತ್ತು ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಷೇಧ ಕಾಯಿದೆಯನ್ನು ಪ್ರಬಲ ಹಾಗೂ ಕಾನೂನು ರೀತಿಯಲ್ಲಿ ಅನುಷ್ಠಾನಗೊಳಿಸಬೇಕು.

Translate »