ಎಪಿಎಂಸಿ: ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಬೆಲೆ
ಕೊಡಗು

ಎಪಿಎಂಸಿ: ಆನ್‍ಲೈನ್ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಬೆಲೆ

October 5, 2018

ಗೋಣಿಕೊಪ್ಪಲು: ಪ್ರಧಾನಿ ನರೇಂದ್ರ ಮೋದಿ ಚಿಂತನೆಯಂತೆ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಆನ್‍ಲೈನ್ ವ್ಯವಸ್ಥೆ ಯಿಂದಾಗಿ ಮಾರುಕಟ್ಟೆ ಆವರಣ ದಲ್ಲಾಳಿ ಗಳಿಂದ ಮುಕ್ತವಾಗುವಂತಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಗತಿಪರ ರೈತರು ಹಾಗೂ ವರ್ತಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರಿಗೆ ಮಾರುಕಟ್ಟೆಯಿಂದ ಉತ್ತಮ ಧಾರಣೆ ದೊರಕುವಂತಾಗಬೇಕು, ದಲ್ಲಾಳಿ ಗಳ ಮಧ್ಯಸ್ಥಿಕೆಯಿಂದ ಅನುಭವಿಸುತ್ತಿದ್ದ ನಷ್ಟವನ್ನು ಹೋಗಲಾಡಿಸಲು ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯವನ್ನು ಮಾದರಿ ಪ್ರಯೋಗವನ್ನಾಗಿಸಿ ಆನ್‍ಲೈನ್ ಮಾರು ಕಟ್ಟೆ ವ್ಯವಸ್ಥೆ ಜಾರಿಗೆ ತಂದಿತು. ಇದರಿಂದ ರೈತರಿಗೆ ದಲ್ಲಾಳಿ ಮುಕ್ತ ಮಾರುಕಟ್ಟೆ ವ್ಯವಸ್ಥೆ ಲಭಿಸಿದ್ದರಿಂದ ದೇಶಾದ್ಯಂತ ಈ ಯೋಜನೆಯನ್ನು ಜಾರಿಗೆ ತರುವ ಮೂಲಕ ಉತ್ತಮ ಬೆಲೆ ದೊರಕಲು ಕಾರಣವಾಯಿತು ಎಂದರು.

ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಗೋದಾ ಮುಗಳು ನಿರ್ಮಾಣವಾಗಿವೆ. ರಾಜ್ಯದಲ್ಲಿಯೇ ಕೊಡಗು ಹೆಚ್ಚು ಗೋದಾಮು ನಿರ್ಮಾಣವಾಗಿರುವ ಜಿಲ್ಲೆಯಾಗಿ ಅಭಿವೃದ್ಧಿಯಾಗುತ್ತಿದೆ. ಬೆಂಬಲ ಬೆಲೆಯಿಂದಾಗಿ ಕೃಷಿ ಚಟುವಟಿಕೆ ಹೆಚ್ಚಾಗುತ್ತಿದೆ. 2022ಕ್ಕೆ ಕೃಷಿಕರು ಆದಾಯ ಧ್ವಿಗುಣಗೊಳ್ಳಲು ಕೃಷಿಯಲ್ಲಿನ ಆಸಕ್ತಿಗೆ ನೀಡುತ್ತಿರುವ ಬೆಂಬಲ ಬೆಲೆ ಕಾರಣವಾಗಲಿದೆ ಎಂದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಗೋಣಿಕೊಪ್ಪ ಕೃಷಿ ಮಾರುಕಟ್ಟೆಯಲ್ಲಿ ಉತ್ತಮ ಆಡಳಿತದಿಂದ ಹೆಚ್ಚು ಸೆಸ್ ಪಡೆಯಲು ಸಹಕಾರಿಯಾಗುತ್ತಿದೆ. ಇದರ ಫಲವಾಗಿ ಕೃಷಿಕರಿಗೆ ಮೂಲಭೂತ ಸೌಕರ್ಯವಾಗಿ ಅನುಕೂಲವಾಗುವಂತೆ ಗೋದಾಮುಗಳ ನಿರ್ಮಾಣದ ಮೂಲಕ ಅಭಿವೃದ್ಧಿ ಕಾಣುವಂತಾಗಿದೆ ಎಂದರು.

ಕೇಂದ್ರದಿಂದ ಉತ್ತಮ ದರದಲ್ಲಿ ರಸ ಗೊಬ್ಬರ ದೊರೆಯುತ್ತಿದೆ. ಕೊಡಗಿನಲ್ಲಿ ಪೊಟಾಶ್ ಗೊಬ್ಬರ ಪೂರೈಕೆ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗಿದ್ದು, ಸಧ್ಯದಲ್ಲೇ ಪೂರೈಕೆಯಾಗಲಿದೆ ಎಂದರು.

ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟದ ಬಗ್ಗೆ ಕೇಂದ್ರ ಸರ್ಕಾರದಿಂದ ಪರಿಶೀಲನೆ ನಡೆಯುತ್ತಿದೆ. ಈಗಾಗಲೇ ಕೇಂದ್ರದಿಂದ ಘೋಷಣೆಯಾಗಿರುವ 200 ಕೋಟಿ ಅನುದಾನ ಜತೆಗೆ ಮತ್ತಷ್ಟು ಅನುದಾನ ಸಧ್ಯದಲ್ಲೇ ಘೋಷಣೆಯಾಗಲಿದೆ. ಜಿಲ್ಲೆಯಲ್ಲಿ ಶೇ. 50 ರಷ್ಟು ಬೆಳೆ ಕಳೆದುಕೊಂಡಿರು ವುದರಿಂದ ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗಿದೆ ಎಂದರು.ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರು ಕಟ್ಟೆ ಸಮಿತಿ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಸಮಿತಿ ವತಿ ಯಿಂದ ನಡೆಯುತ್ತಿರುವ ಅಭಿವೃದ್ಧಿ ಕಾಮ ಗಾರಿಗಳ ಬಗ್ಗೆ ಮಾಹಿತಿ ನೀಡಿದರು.

ಭೂಮಿ ಪೂಜೆ: ನಬಾರ್ಡ್ ಹಾಗೂ ಡಬ್ಲ್ಯುಐಎಫ್ ಯೋಜನೆಯಡಿ ಗೋಣಿ ಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಸುಮಾರು 2.70 ಕೋಟಿ ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಕೆ. ಜಿ. ಬೋಪಯ್ಯ ಭೂಮಿ ಪೂಜೆ ನೆರವೇರಿಸಿದರು.

7 ಗ್ರಾಮಗಳಲ್ಲಿ ಸುಮಾರು 100 ಮೆಟ್ರಿಕ್ ಟನ್ ಸಾಮಥ್ರ್ಯದ ಗೋದಾಮು ನಿರ್ಮಾಣ ಹಾಗೂ 1 ಗ್ರಾಮದಲ್ಲಿ ಕೃಷಿ ಕಣ ನಿರ್ಮಾ ಣಕ್ಕೆ ಪೂಜೆ ನೆರವೇರಿಸಲಾಯಿತು. ಕಾವಾಡಿ ಭಗವತಿ ದೇವಸ್ಥಾನ ಆವರಣದಲ್ಲಿ ಕೃಷಿ ಕಣ, ಅಮ್ಮತ್ತಿ ಎಪಿಸಿಎಂಎಸ್, ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ, ಗೋಣಿ ಕೊಪ್ಪ ಎಪಿಸಿಎಂಎಸ್, ಕಿರುಗೂರು ಕೃಷಿ ಪತ್ತಿನ ಸಹಕಾರ ಸಂಘ, ಕಾನೂರು ಕೃಷಿ ಪತ್ತಿನ ಸಹಕಾರ ಸಂಘ, ಕಾಕೂರು ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಹುದಿ ಕೇರಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗೋದಾಮು ನಿರ್ಮಾಣಕ್ಕೆ ಪೂಜೆ ನೆರ ವೇರಿಸಲಾಯಿತು. ನಂತರ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 4 ಪ್ರಗತಿಪರ ರೈತರು ಹಾಗೂ ವರ್ತಕರನ್ನು ಸನ್ಮಾನಿಸಲಾಯಿತು.

ಈಚೂರು ಗ್ರಾಮದ ಪ್ರಗತಿಪರ ಕಾಲು ಮೆಣಸು ಕೃಷಿಕ ತೀತಮಾಡ ಕೆ. ರಮೇಶ್, ಅಮ್ಮತ್ತಿ ಗ್ರಾಮದ ಭತ್ತ ಬೆಳೆ ಕೃಷಿಕ ಕೇಚಂಡ ಎಂ. ಕುಶಾಲಪ್ಪ, ಬೀರುಗ ಗ್ರಾಮದ ಅಡಕೆ ಬೆಳೆಗಾರ ಅಜ್ಜಮಾಡ ಪ್ರಮೀಳ ಕರುಂಬಯ್ಯ ಹಾಗೂ ಗೋಣಿ ಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿ ತಿಯ ಹಿರಿಯ ವರ್ತಕ ಕೆ. ಕೆ. ಬೆಳ್ಯಪ್ಪ ಸನ್ಮಾನ ಸ್ವೀಕರಿಸಿದರು.

ಈ ಸಂದರ್ಭ ಸಮಿತಿ ಉಪಾಧ್ಯಕ್ಷ ಬಾಲ ಕೃಷ್ಣ, ಸಮಿತಿ ಸದಸ್ಯರುಗಳು, ತಾಪಂ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಸಮಿತಿ ಪ್ರ. ಕಾರ್ಯದರ್ಶಿ ಸಿ.ಎಂ.ರಾಣಿ, ಕಾರ್ಯ ಪಾಲಕ ಅಭಿಯಂತರ ಎಸ್.ಎಂ.ನಟ ರಾಜ್ ಸಹಾಯಕ ನಿರ್ದೇಶಕ ಚಿಕ್ಕಜ್ಜ ನವರ್, ಜಿಪಂ ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ ಉಪಸ್ಥಿತರಿದ್ದರು.

Translate »