ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಾರದಮ್ಮ ಅವರನ್ನೇ ಮುಂದುವರೆಸಲು ಆಗ್ರಹ
ಹಾಸನ

ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಾರದಮ್ಮ ಅವರನ್ನೇ ಮುಂದುವರೆಸಲು ಆಗ್ರಹ

October 5, 2018

ಹಾರನಹಳ್ಳಿ ಗ್ರಾಪಂ ಸದಸ್ಯರಿಂದ ಪ್ರತಿಭಟನೆ
ಅರಸೀಕೆರೆ:  ತಾಲೂಕಿನ ಹಾರನ ಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಯೋಜಿತದ ಪರ ವಿರೋಧ ಗಳ ಪ್ರತಿಭಟನೆಗಳು ರಾಜಕೀಯ ತಿರುವು ಪಡೆಯುತ್ತಿದ್ದು, ನೂತನ ಅಧಿಕಾರಿ ಶಾರ ದಮ್ಮ ಅವರನ್ನೇ ಮುಂದುವರೆಸಿಕೊಂಡು ಹೋಗಬೇಕು ಎಂದು ಆಗ್ರಹಿಸಿ ಉಪಾಧ್ಯಕ್ಷೆ ಸಾವಿತ್ರಮ್ಮ ಸಿದ್ದಪ್ಪ ನೇತೃತ್ವದಲ್ಲಿ ಹನ್ನೊಂದು ಸದಸ್ಯರ ತಂಡವು ಗ್ರಾಮಸ್ಥರೊಂದಿಗೆ ತಾಲೂಕು ಪಂಚಾಯಿತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಮ್ಮ ಮಾತ ನಾಡಿ, ಹಾಲಿ ಅಧ್ಯಕ್ಷರಾದ ನಂದೀಶ್ ಮತ್ತು ಬೆಂಬಲಿಗರು ನಿಯೋಜನೆಗೊಂಡಿರುವ ಅಧಿಕಾರಿಯ ಮೇಲೆ ವಿನಾಕಾರಣ ಆರೋಪ ಗಳನ್ನು ಮಾಡುತ್ತಾ ತಮ್ಮ ಅವಧಿಯಲ್ಲಿ ಆಗಿ ರುವ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ನಂದೀಶ್ ಮತ್ತು ರವಿ ಇವರ ಅಧಿಕಾರದ ಅವಧಿಯಲ್ಲಿ ವ್ಯವಹಾರ ಗಳನ್ನು ಸರ್ಕಾರವು ಒಂದು ಸಮಿತಿಯನ್ನು ರಚಿಸಿ ತನಿಖೆಗೆ ಒಳಪಡಿಸಬೇಕು. ಇಲ್ಲದಿ ದ್ದಲ್ಲಿ ಇಂತಹ ನೂರಾರು ಹಗರಣಗಳನ್ನು ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವ ಜನಿಕರು ಮುಂದಿನ ದಿನಗಳಲ್ಲಿ ಅನುಭವಿಸ ಬೇಕಾಗುತ್ತದೆ. ಅಭಿವೃದ್ಧಿ ಅಧಿಕಾರಿ ರವಿ ಅವರನ್ನು ಹಾರನಹಳ್ಳಿ ಗ್ರಾಮ ಪಂಚಾ ಯಿತಿ ಮತ್ತು ಇನ್ನಿತರೇ ಪಂಚಾಯಿತಿಗಳಲ್ಲಿ ಮಾಡಿರುವ ಹಗರಣಗಳನ್ನು ಸಂಪೂರ್ಣ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಸದಸ್ಯೆ ಪ್ರೇಮಾ ಧರ್ಮೇಶ್ ಮಾತ ನಾಡಿ, ನೂತನವಾಗಿ ನೇಮಕವಾಗಿರುವ ಹಾರನಹಳ್ಳಿ ಗ್ರಾಮ ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ಶಾರದಮ್ಮ ಅವರು ಈ ಹಿಂದೆಯೂ ಇದೇ ಗ್ರಾಮ ಪಂಚಾಯಿತಿ ಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆ ಸಮಯದಲ್ಲಿ ಅಧ್ಯಕ್ಷರಾದ ನಂದೀಶ್, ಕುಟುಂಬ ಹಾಗೂ ಬೆಂಬಲಿಗರು ಪಂಚಾಯಿತಿ ಆಸ್ತಿ ಮತ್ತು ಖಾತೆ ದುರುಪಯೋಗ ಮಾಡಿಕೊಂಡಿರುವ ಪ್ರಕರಣವನ್ನು ಬೆಳಕಿಗೆ ತಂದು ಆ ವರದಿ ಯನ್ನು ಅರಸೀಕೆರೆ ತಾಲೂಕು ಪಂಚಾ ಯಿತಿ ಕಾರ್ಯನಿರ್ವಹಣಾಧಿಕಾರಿ ಗಮನಕ್ಕೆ ತಂದಿದ್ದರು ಎಂದರು.

ಸದರಿ ಹಗರಣಗಳಲ್ಲಿ ಈಗಾಗಲೇ ವರ್ಗಾ ವಣೆ ಆಗಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಮತ್ತು ಅಧ್ಯಕ್ಷ ನಂದೀಶ್ ಅವರ ಪ್ರಮುಖ ಪಾತ್ರವಿದೆ ಎಂಬುದು ಎಲ್ಲರಿಗೂ ತಿಳಿದ ಸತ್ಯವಾಗಿದೆ. ಈ ಎಲ್ಲ ಪ್ರಕರಣಗಳಿಗೆ ಬೇಸತ್ತ ಸದಸ್ಯರು ಅವಿಶ್ವಾಸ ನಿಲುವಳಿ ಯನ್ನು ತರಲಾಗಿತ್ತು. ಆದರೆ ಅಧ್ಯಕ್ಷರು ಅವಿಶ್ವಾಸ ನಿಲುವಳಿ ವಿರುದ್ಧ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದು, ಅದರಲ್ಲೂ ನಮ್ಮ ಈ ಗ್ರಾಮ ಪಂಚಾ ಯಿತಿ ಸದಸ್ಯರ ಅವಿಶ್ವಾಸ ನಿರ್ಣಯಕ್ಕೆ ಜಯ ದೊರೆತಿದೆ. ಈ ಜಯದ ವಿರುದ್ಧ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದು ವಿಚಾರಣೆ ಕೂಡ ಮುಗಿದಿದೆ. ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.
ಇಷ್ಟೆಲ್ಲ ಹಗರಣ ಮತ್ತು ಆರೋಪ ಗಳನ್ನು ನಡೆಸಿರುವ ಈ ಹಿಂದಿನ ಪಂಚಾ ಯಿತಿ ಅಭಿವೃದ್ಧಿ ಅಧಿಕಾರಿ ರವಿ ಮತ್ತು ಅಧ್ಯಕ್ಷ ನಂದೀಶ್ ಅವರ ಬೆಂಬಲಿಗರು ವಿನಾಕಾರಣ ಗ್ರಾಮಗಳ ಅಭಿವೃದ್ಧಿಯಲ್ಲಿ ತೊಂದರೆಯನ್ನು ಉಂಟು ಮಾಡುತ್ತಿದ್ದು, ರವಿ ಅಧಿಕಾರದ ಅವಧಿಯಲ್ಲಿ ಆಗಿರುವ ಹಗರಣಗಳನ್ನು ನಿಯೋಜನೆಗೊಂಡಿರುವ ಶಾರದಮ್ಮ ಅವರು ಬಯಲಿಗೆ ಎಳೆದು ಬೆಳಕಿಗೆ ತರುತ್ತಾರೆಂಬ ಭಯದಿಂದ ರವಿ ಯವರನ್ನೇ ನಿಯೋಜನೆ ಮಾಡಬೇಕೆಂದು ರಾಜಕೀಯ ಪ್ರೇರಿತ ಪ್ರತಿಭಟನೆ ಮತ್ತು ಆರೋ ಪಗಳು ನಡೆಯುತ್ತಿದೆ ಎಂದು ದೂರಿದರು.

ಈ ವೇಳೆ ತಾ.ಪಂ ಅಧ್ಯಕ್ಷೆ ರೂಪಾಗುರು ಮೂರ್ತಿ ಮತ್ತು ವ್ಯವಸ್ಥಾಪಕ ರಾಜಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಧರ್ಮೇಶ್, ಹಾರನ ಹಳ್ಳಿ ಗ್ರಾಪಂ ಸದಸ್ಯರಾದ ಮಂಜುಳ, ಗಂಗಮ್ಮ, ರೂಪ, ಕವಿತಾ, ಜಯಣ್ಣ, ಮಲ್ಲೇಶ್, ಭಾರತಿ, ಮಹೇಶ್, ಅಪ್ಸರ್ ಸೇರಿದಂತೆ ಹಾರ ನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Translate »