ಬೇಲೂರು ಪುರಸಭೆ ಮಳಿಗೆಗಳ ವಿವಾದ:  ಬಾಡಿಗೆದಾರರು ಲಂಚ ನೀಡಿರುವ ಆರೋಪ: ಸತ್ಯಕ್ಕೆ ದೂರ
ಹಾಸನ

ಬೇಲೂರು ಪುರಸಭೆ ಮಳಿಗೆಗಳ ವಿವಾದ:  ಬಾಡಿಗೆದಾರರು ಲಂಚ ನೀಡಿರುವ ಆರೋಪ: ಸತ್ಯಕ್ಕೆ ದೂರ

October 5, 2018

ಬೇಲೂರು:  ಪಟ್ಟಣದ ಬಸ್ ನಿಲ್ದಾಣದ ಮುಂಭಾಗವಿರುವ ಪುರಸಭೆ ವಾಣಿಜ್ಯ ಮಳಿಗೆಗಳಲ್ಲಿ ನಾವು ಮುಂದುವರಿ ಯಲು ಪುರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳಿಗೆ ಹಣವನ್ನು ನೀಡಿರುವುದಿಲ್ಲ. ಉದ್ದೇಶ ಪೂರ್ವಕವಾಗಿ ಅಧ್ಯಕ್ಷರ ಮತ್ತು ಮುಖ್ಯಾಧಿಕಾರಿಗಳ ವಿರುದ್ಧ ನಡೆಸುತ್ತಿರುವ ಕುತಂತ್ರವಿದು ಎಂದು ಪುರ ಸಭೆ ವಾಣಿಜ್ಯ ಮಳಿಗೆಗಳ ಬಾಡಿಗೆದಾರರು ಸ್ಪಷ್ಟಪಡಿಸಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಾಡಿಗೆದಾರರಾದ ವೀರಭದ್ರೇಗೌಡ, ಅಬ್ದುಲ್ ರಿಜ್ವಾನ್, ರುಕ್ಮಿಣಿ, ಕುಮಾರ್ ಮಾತ ನಾಡಿ, ಅಂಗಡಿ ಮಳಿಗೆಯಲ್ಲಿ ನಾವು ಮುಂದುವರೆಯಲು ಅಧ್ಯಕ್ಷರು, ಉಪಾ ಧ್ಯಕ್ಷರು ಹಾಗೂ ಮುಖ್ಯಾಧಿಕಾರಿ ಗಳಿಗೆ 10 ಲಕ್ಷ ರೂ. ಲಂಚ ನೀಡಿದ್ದೇವೆ ಎಂದು ಕೆಲವರು ಆರೋಪಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಮಳಿಗೆಯಲ್ಲಿ ಮುಂದು ವರಿಯಲು ನಾವು ಯಾವುದೇ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದರು.

ಕಳೆದ 2 ವರ್ಷದಿಂದಲೂ ನಮ್ಮನ್ನು ಖಾಲಿ ಮಾಡಿಸುವಂತೆ ಹೇಳುತ್ತಿದ್ದಾರೆ. ಆದರೆ, ಅದಕ್ಕೆ ನಾವು ಒಪ್ಪಿಗೆ ಸೂಚಿಸಿಲ್ಲ. ಈ ಸಂಬಂಧ ಪುರಸಭೆಯ ವಿರುದ್ಧ ಹೈ ಕೋರ್ಟ್‍ನ ಮೋರೆ ಹೋಗಿದ್ದೇವೆ. ಆದರೆ, ಮೂರು-ನಾಲ್ಕು ತಿಂಗಳ ಹಿಂದೆ ಹೈಕೋರ್ಟ್ ನಲ್ಲಿ ಪುರಸಭೆ ಪರವಾಗಿ ತೀರ್ಪು ಬಂದಿತ್ತು. ಇದರಿಂದ ಬಾಡಿಗೆದಾರರೆಲ್ಲ್ಲರು ಅಸಮಾ ಧಾನಗೊಂಡು ಕಳೆದ ವಾರ ಹೈಕೋರ್ಟ್‍ನ 2ನೇ ಬೆಂಚ್‍ಗೆ ದಾವೆ ಸಲ್ಲಿಸಿದ್ದೇವೆ ಎಂದರು.

ಪುರಸಭೆಯ ಈ ಮಳಿಗೆಯಲ್ಲಿ ನಾವು ಕಳೆದ 15ವರ್ಷಗಳಿಂದ ವ್ಯಾಪಾರ ಮಾಡಿ ಕೊಂಡು ಬರುತ್ತಿದ್ದೇವೆ. ನಮ್ಮ ಜೀವನ ನಿರ್ವಹಣೆಗೆ ಇದೊಂದೇ ಆಧಾರವಾಗಿದೆ. ಹಾಗಾಗಿ, ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ಜೊತೆಗೆ ಈವರೆಗೆ ನಮಗೆ ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಮುಖ್ಯಾಧಿಕಾರಿಗಳು ಯಾವುದೇ ತೊಂದರೆ ನೀಡಿಲ್ಲ. ನಮಗೆ ಸಹಕಾರ ನೀಡಿ ದ್ದಾರೆ. ಆದರೆ, ಇತ್ತೀಚೆಗೆ ಕೆಲವರ ಮಾತು ಕೇಳಿಕೊಂಡು ಕೆಲವು ಸದಸ್ಯರು ಪುರಸಭೆ ಅಧಿಕಾರಿಗಳಿಗೆ ಮತ್ತು ಅಧ್ಯಕ್ಷರಿಗೆ 10 ಲಕ್ಷ ರೂ. ನೀಡಿ ಬಾಡಿಗೆದಾರರು ಮುಂದು ವರಿಯುತ್ತಿದ್ದಾರೆ ಎಂದು ನಮ್ಮ ಮೇಲೆ, ಪುರಸಭೆಯ ನೌಕರರು, ಅಧ್ಯಕ್ಷರು ಮತ್ತು ಸದಸ್ಯರ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ. ಈ ರೀತಿ ಆರೋ ಪಿಸುವವರು ತಾವು ಮಾಡುವ ಆರೋಪ ವನ್ನು ಸಾಕ್ಷ್ಯಾಧಾರಗಳಿಂದ ಸಾಬೀತು ಪಡಿಸ ಬೇಕು ಎಂದು ಸವಾಲು ಹಾಕಿದರು.

ಈ ಹಿಂದೆ ಪುರಸಭೆ ಅವರು ಬಹಿರಂಗ ಹರಾಜು ಮಾಡುವ ಸಂದರ್ಭದಲ್ಲಿ ನಾವುಗಳು ಕೋರ್ಟ್ ಮೆಟ್ಟಿಲು ಏರಿದ್ದರೂ ಕೂಡ ಹರಾಜು ಪ್ರಕ್ರಿಯೆಗೆ ಮುಂದಾಗಿ ದ್ದರು. ಬಹಿರಂಗ ಹರಾಜಿನಲ್ಲಿ ಮಳಿಗೆಗಳನ್ನು ಬೇರೆಯವರು ಕೂಗಿದ್ದು ನಾವು ಯಾವುದೇ ಕಾರಣಕ್ಕೂ ಹರಾಜಿನಲ್ಲಿ ಭಾಗಿಯಾಗಿಲ್ಲ. ತದನಂತರದಲ್ಲಿ ಪುರಸಭೆ ಅವರು ನೋಟಿಸ್ ನೀಡಿದಾಗಲೆಲ್ಲಾ ನಾವು ಕೋರ್ಟಿನ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದೇವೆ. ಈಗಲೂ ಸಹ ನಾವು ಹೈಕೋರ್ಟಿನ ಎರಡನೇ ಬೆಂಚಿಗೆ ಮೇಲ್ಮನವಿ ಸಲ್ಲಿಸಿದ್ದೇವೆ ಎಂದರು.

ನಮ್ಮ ಜೀವನ ನಿರ್ವಹಣೆಗೆ ಈ ಮಳಿಗೆ ವ್ಯಾಪಾರವೇ ಮುಖ್ಯವಾಗಿದೆ. ಹಾಗಾಗಿ, ನಮ್ಮನ್ನು ಅದೇ ಮಳಿಗೆಯಲ್ಲಿ ಮುಂದು ವರೆಯಲು ಅವಕಾಶ ಮಾಡಿಕೊಡಬೇಕು ಎಂದು ಪುರಸಭೆ ಅಧ್ಯಕ್ಷರು, ಸದಸ್ಯರು, ಮುಖ್ಯಾಧಿಕಾರಿಗಳು ಹಾಗೂ ಶಾಸಕರಲ್ಲಿ ಮನವಿ ಮಾಡಿದರು.

Translate »