ಚಿಕ್ಕಹೊನ್ನೇನಹಳ್ಳಿ ಕೆರೆಗಳ ಪುನಶ್ಚೇತನಕ್ಕೆ ಚಾಲನೆ
ಹಾಸನ

ಚಿಕ್ಕಹೊನ್ನೇನಹಳ್ಳಿ ಕೆರೆಗಳ ಪುನಶ್ಚೇತನಕ್ಕೆ ಚಾಲನೆ

October 5, 2018

ಹಾಸನ: ನಗರದ ಸಮೀಪವಿರುವ ಚಿಕ್ಕಹೊನ್ನೇನಹಳ್ಳಿ ಗ್ರಾಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಸಹಯೋಗದಲ್ಲಿ ರಚಿಸ ಲಾಗಿರುವ ಗ್ರಾಮ ಸ್ವರಾಜ್ಯ ಸಮಿತಿ ಯ ನೇತೃತ್ವದಲ್ಲಿ ಕೆರೆಗಳ ಪುನಶ್ಚೇತನ ಕಾಮ ಗಾರಿಗೆ ಚಾಲನೆ ನೀಡಲಾಯಿತು.
ಮುಖಂಡ ಆರ್.ಪಿ.ವೆಂಕಟೇಶ್‍ಮೂರ್ತಿ ಮಾತನಾಡಿ, ಕೆರೆಗಳ ಅಭಿವೃದ್ಧಿಯಾಗದೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿ ಸಲು ಸಾಧ್ಯವಿಲ್ಲ. ಇರುವ ಕೆರೆಗಳನ್ನೆ ಪುನಶ್ಚೇ ತನ ಮಾಡುವ ನಿಟ್ಟಿನಲ್ಲಿ ಹಸಿರುಭೂಮಿ ಪ್ರತಿಷ್ಠಾನದ ಸಹಯೋಗದಲ್ಲಿ ಗ್ರಾಮ ಸ್ವರಾಜ್ಯ ಸಮಿತಿ ರಚಿಸಲಾಗಿದೆ ಎಂದರು.

ಈ ಸಮಿತಿಯ ನೇತೃತ್ವದಲ್ಲಿ ಚಿಕ್ಕ ಹೊನ್ನೇ ನಹಳ್ಳಿ ಗ್ರಾಮದ ಮೂರು ಕೆರೆಗಳ ಪುನಶ್ಚೇ ತನ ಕಾಮಗಾರಿಗಳಿಗೆ ಸಾಮೂಹಿಕವಾಗಿ ಚಾಲನೆ ನೀಡಲಾಗಿದೆ. ಹಸಿರುಭೂಮಿ ಪ್ರತಿ ಷ್ಠಾನದ ಹೆಸರಿನಲ್ಲಿ ಇದುವರೆಗೂ 35 ಕಲ್ಯಾಣಿ, ಮೂರು ಕೆರೆಗಳ ಅಭಿವೃದ್ಧಿ, 5 ಸಾವಿರ ಗಿಡ ನೆಟ್ಟು ಪೋಷಣೆ ಮಾಡ ಲಾಗಿದೆ ಎಂದು ತಿಳಿಸಿದರು.

ಗ್ರಾಮಗಳ ಕೆರೆಗಳಲ್ಲಿ ನೀರು ಬಂದರೇ ನಗರದ ಕೊಳವೆ ಬಾವಿಗಳಲ್ಲಿ ನೀರು ಬರು ತ್ತದೆ. ಇದರಿಂದ ನೀರಿನ ಕೊರತೆಗಳ್ನು ಸಲ್ಪವಾ ದರೂ ನಿವಾರಿಸಲು ಸಾಧ್ಯ. ಆರು ತಿಂಗಳಲ್ಲಿ ಚಿಕ್ಕಹೊನ್ನೇನಹಳ್ಳಿ ಗ್ರಾಮವನ್ನು ಮಾದÀರಿ ಗ್ರಾಮವನ್ನಾಗಿ ಮಾಡುವ ಉದ್ದೇಶ ಹೊಂದಿ ದ್ದೇವೆ. ಇದಕ್ಕಾಗಿ ಗ್ರಾಮದ ಪ್ರಮುಖರು ಸೇರಿ 2.80 ಲಕ್ಷ ದೇಣಿಗೆ ನೀಡಲಿದ್ದಾರೆ ಎಂದು ತಿಳಿಸಿದರು.

ಹರಳಹಳ್ಳಿ ಗ್ರಾಮ ಪಂಚಾಯಿತಿ ಯಿಂದ 4 ಲಕ್ಷ ರೂಗಳು, ಮಹಾವೀರ್ ಬನ್ಸಾಲೆ 10 ಸಾವಿರ ರೂ, ಜನಪ್ರಿಯ ಆಸ್ಪತ್ರೆ ಯ ಚೇರ್ಮನ್ ಡಾ.ಬಷೀರ್ ಅಹಮದ್ ಅವರಿಂದ 25 ಸಾವಿರ ರೂ, ಡಾ.ಸಾವಿತ್ರಿ ಅವರು 10 ಸಾವಿರ ರೂ, ವಿಜಯ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಿಂದ 1 ಲಕ್ಷ ರೂ. ನೀಡುವುದಾಗಿ ಇದೆ ವೇಳೆ ಸ್ಥಳದಲ್ಲಿ ಘೋಷಣೆ ಮಾಡಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಸ್ವರಾಜ್ಯ ಸಮಿತಿಯ ಅಧ್ಯಕ್ಷ ಪುಟ್ಟಸ್ವಾಮಿ, ಹಣ ಕಾಸು ಸಮಿತಿಯ ಮುಖ್ಯಸ್ಥ ತಾರಾ ಸುಬ್ಬ ಸ್ವಾಮಿ, ಹಸಿರು ಭೂಮಿ ಪ್ರತಿಷ್ಟಾನದ ಅಧ್ಯಕ್ಷ ಸುಬ್ಬ ಸ್ವಾಮಿ, ಉಪಾಧ್ಯಕ್ಷೆ ಡಾ.ಸಾವಿತ್ರಿ, ಪರಿಸರ ವಾದಿ ಎಚ್.ಪಿ.ಮೋಹನ್, ಸಮಾಜ ಸೇವಕ ಡಾ.ಗುರುರಾಜು ಹೆಬ್ಬಾರ್, ಒಕ್ಕಲಿಗ ಸಂಘದ ಜಿ.ಎಲ್.ಮುದ್ದೇಗೌಡ, ವೈದ್ಯ ಹಾರೋನ್, ಸಂಚಾಲಕ ಶಿವ ಕುಮಾರ್, ಹರಳಹಳ್ಳಿ ಗ್ರಾಪಂನ ಮಂಜು ನಾಥ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಉದಯ ಕುಮಾರ್, ಮುಖಂಡ ಮಂಜುನಾಥ್ ಮೊರೆ ಇದ್ದರು.

Translate »