Uncategorized

ಶಿಕ್ಷಣಕ್ಕೆ ಆದ್ಯತೆ ನೀಡಿ, ಮೂಢನಂಬಿಕೆ ಬಿಡಿ ಉಪ್ಪಾರ ಸಮುದಾಯಕ್ಕೆ ಸಚಿವ ಸಿ.ಪುಟ್ಟರಂಗಶೆಟ್ಟಿ ಕರೆ

October 24, 2018

ಚಾಮರಾಜನಗರ: ನನ್ನ ಉಪ್ಪಾರ ಸಮಾಜದ ಬಂಧುಗಳೇ, ಶಿಕ್ಷಣಕ್ಕೆ ಆದ್ಯತೆ ನೀಡಿ.., ಮೂಢನಂಬಿಕೆ, ಕಂದಾಚಾರ ಬಿಡಿ.., ಬಾಲ್ಯ ವಿವಾಹ ಪದ್ಧತಿಯನ್ನು ಹೋಗಲಾಡಿಸಿ… ಹೀಗೆ ಉಪ್ಪಾರ ಸಮಾಜಕ್ಕೆ ಕರೆ ಮತ್ತು ಸಲಹೆ ನೀಡಿದವರು ಜಿಲ್ಲಾ ಉಸ್ತುವಾರಿ ಸಚಿ ವರೂ ಆದ ಉಪ್ಪಾರ ಸಮಾಜದ ಗಡಿ ಯಜ ಮಾನರಾದ ಸಿ.ಪುಟ್ಟರಂಗಶೆಟ್ಟಿ.

ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಆಶ್ರಯದಲ್ಲಿ ನಗ ರದ ಸರ್ಕಾರಿ ಪೇಟೆ ಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯ. ಹೀಗಾಗಿ ಉಪ್ಪಾರ ಸಮಾಜ ದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡ ಬೇಕು. ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸಲು ಗಮನ ಹರಿಸಬೇಕು ಎಂದು ಕರೆ ನೀಡಿದರು.

ನಮ್ಮ ಉಪ್ಪಾರ ಸಮಾಜದಲ್ಲಿ ಮೂಢ ನಂಬಿಕೆ, ಕಂದಾಚಾರ ಇನ್ನೂ ಜೀವಂತ ವಾಗಿದೆ. ಇದನ್ನು ಬಿಡಬೇಕು. ಬಾಲ್ಯ ವಿವಾಹ ಪದ್ಧತಿ ನಮ್ಮ ಅಭಿವೃದ್ಧಿಗೆ ಅಡ್ಡಿಯಾಗಿದೆ. ಇದನ್ನು ಹೋಗಲಾಡಿಸಬೇಕು. ಸಮಾಜದ ಎಲ್ಲಾ ಗಡಿ ಯಜಮಾನರು ಹೆಣ್ಣಿಗೆ 18 ವರ್ಷ, ಗಂಡಿಗೆ 21 ವರ್ಷ ವಯಸ್ಸಾಗಿ ದ್ದರೆ ಮಾತ್ರ ಮದುವೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಆ ಮದುವೆಗೆ ಒಪ್ಪಿಗೆ ಸೂಚಿಸಬಾರದು ಎಂದು ಸಚಿ ವರು ಸಲಹೆ ನೀಡಿದರು.

ಛಲದಿಂದ ಗಂಗೆಯನ್ನು ಧರೆಗೆ ತಂದು ಸಕಲ ಜೀವರಾಶಿಗಳನ್ನು ಕಾಪಾಡಿದ ಪುಣ್ಯಾತ್ಮ ಶ್ರೀಭಗೀರಥರು ಎಂದು ಸ್ಮರಿ ಸಿದ ಸಿ.ಪುಟ್ಟರಂಗಶೆಟ್ಟಿ, ಛಲ ಇದ್ದರೆ ಏನ ನ್ನಾದರೂ ಸಾಧಿಸಬಹುದು ಎಂಬುದಕ್ಕೆ ಭಗೀರಥರೇ ಉದಾಹರಣೆ ಎಂದರು.
ನಾನು ಸಚಿವನಾಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ನಿಮ್ಮೆಲ್ಲರ ಹಾಗೂ ಕ್ಷೇತ್ರದ ಜನತೆಯ ಆಶೀರ್ವಾದದಿಂದ 3 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಸಚಿವ ನಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಇದೂ ಸಹ ಒಂದು ತರಹ ಛಲವೇ ಎಂದರು.

ಹಿಂದುಳಿದ ಜನಾಂಗವಾದ ಉಪ್ಪಾರ ರನ್ನು ಮೊದಲು ಗುರುತಿಸಿದ್ದು ಡಿ.ದೇವ ರಾಜ ಅರಸು, ನಂತರ ಬಂಗಾರಪ್ಪ, ವೀರಪ್ಪ ಮೊಯ್ಲಿ ಗುರುತಿಸಿದರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನಮ್ಮ ಜನಾಂಗದ ಬಹುತೇಕ ಬೇಡಿಕೆಗಳನ್ನು ಈಡೇರಿಸಿ ದರು. ಉಪ್ಪಾರರನ್ನು ಎಸ್‍ಟಿಗೆ ಸೇರಿಸ ಬೇಕು ಎಂಬ ಬೇಡಿಕೆ ಬಾಕಿ ಉಳಿದಿದೆ. ಈ ಬಗ್ಗೆ ಪ್ರಯತ್ನ ಮುಂದುವರೆಸೋಣ ಎಂದರು.
ಒಗ್ಗಟ್ಟು ಪ್ರದರ್ಶಿಸಿ: ಭಗೀರಥರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂಸದ ಆರ್.ಧ್ರುವನಾರಾಯಣ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ವಾಗಿ ಉಪ್ಪಾರ ಸಮಾಜ ಹಿಂದುಳಿದಿದೆ. ರಾಜಕೀಯವಾಗಿ ಸ್ಥಾನಮಾನ ದೊರೆಯ ದಿದ್ದರೆ ಸಮಾಜದ ಅಭಿವೃದ್ಧಿ ಕಷ್ಟ ಎಂಬುದನ್ನು ಪ್ರತಿಯೊಬ್ಬರೂ ಅರಿಯ ಬೇಕು. ಈ ಮೂಲಕ ತಾವು ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.

ಉಪ್ಪಾರ ಸಮಾಜದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಆಗ ಮಾತ್ರ ಏನನ್ನಾದರೂ ಸಾಧಿಸಬಹುದು. ಈ ಸಮಾಜದಲ್ಲಿ ಮೌಢ್ಯತೆ, ಕಂದಾಚಾರ ತುಂಬಿ ತುಳುಕುತ್ತಿದೆ. ಇದನ್ನು ತೊಲಗಿಸಬೇಕು. ಮದ್ಯಪಾನ ಬಿಟ್ಟು ಏನಾ ದರೂ ಸಾಧಿಸಿ ತೋರಿಸಬೇಕು. ಆಗ ಭಗೀರಥರು ಒಪ್ಪಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಸಮಾಜದ ಮುಖಂಡರು ಹಾಗೂ ಯುವಕರು ಚಿಂತಿಸಬೇಕು ಎಂದು ಕರೆ ನೀಡಿದರು.

ಉಪ್ಪಾರ ಸಮಾಜದವರೇ ಆದ ಪುಟ್ಟ ರಂಗಶೆಟ್ಟಿ ಅವರಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ದೊರೆತಿದೆ. ಸಮಾಜದ ಹೆಣ್ಣು ಮಕ್ಕಳಿಗೆ ಹಾಸ್ಟೆಲ್ ತೆರೆಯಲು ಕ್ರಮ ಕೈಗೊಳ್ಳಬೇಕು. ಅಲ್ಲದೇ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡುವಂತೆ ಧ್ರುವ ನಾರಾಯಣ್, ಪುಟ್ಟರಂಗಶೆಟ್ಟಿ ಅವರಲ್ಲಿ ಮನವಿ ಮಾಡಿದರು.

ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಮಾತ ನಾಡಿ, ಉಪ್ಪಾರ ಸಮಾಜವನ್ನು ಎಸ್‍ಟಿಗೆ ಸೇರಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಮಲೈಮಹದೇಶ್ವರ ಬೆಟ್ಟದ ದೇವಸ್ಥಾನ ದಲ್ಲಿ ಉಪ್ಪಾರರಿಗೆ ಎಣ್ಣೆಮಜ್ಜನ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು. ಮಹದೇಶ್ವರ ಬೆಟ್ಟದಲ್ಲಿ ಉಪ್ಪಾರರಿಗೆ ಭವನವೊಂದನ್ನು ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಮೈಸೂರು ಕಸಾಪ ಮಾಜಿ ಅಧ್ಯಕ್ಷ ಪ್ರೊ.ನೀ.ಗಿರಿಗೌಡ ಪ್ರಧಾನ ಭಾಷಣ ಮಾಡಿದರು. ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ರಾದ ಕೆ.ಪಿ.ಸದಾಶಿವಮೂರ್ತಿ, ಕೆರಹಳ್ಳಿ ನವೀನ್, ಶಶಿಕಲಾ ಸೋಮಲಿಂಗಪ್ಪ, ತಾಪಂ ಅಧ್ಯಕ್ಷೆ ದೊಡ್ಡಮ್ಮ, ಮಾಜಿ ಅಧ್ಯಕ್ಷರಾದ ಹೆಚ್.ವಿ.ಚಂದ್ರು, ಬಿ.ಕೆ.ರವಿಕುಮಾರ್, ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಜಿಪಂ ಸಿಇಓ ಡಾ.ಕೆ.ಹರೀಶ್‍ಕುಮಾರ್, ಎಸ್ಪಿ ಧರ್ಮೆಂಧರ್ ಕುಮಾರ್ ಮೀನಾ, ಮುಖಂಡರಾದ ಹನು ಮಂತಶೆಟ್ಟಿ, ಮಂಗಲ ಶಿವಕುಮಾರ್, ಮಧು ವನಹಳ್ಳಿ ಶಿವಕುಮಾರ್, ಕಾವೇರಿ ಶಿವ ಕುಮಾರ್, ಪಿ.ಮರಿಸ್ವಾಮಿ, ಚಿಕ್ಕಮಹದೇವು, ಸಿ.ಎ.ಮಹದೇವಶೆಟ್ಟಿ, ಕಾಮರಾಜು, ಲಿಂಗ ರಾಜು, ಬಾಗಳಿ ರೇವಣ್ಣ, ಬಸವಣ್ಣ, ಚಿಕ್ಕಅಂಕ ಶೆಟ್ಟಿ, ಜಯಸ್ವಾಮಿ, ಕೃಷ್ಣ, ಜಯಕುಮಾರ್ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಚೆನ್ನಪ್ಪ ಸ್ವಾಗತಿ ಸಿದರು. ಸಿ.ಎಸ್.ಮಂಜುಳಾ ನಿರೂಪಿಸಿದರು.

ಅದ್ಧೂರಿ ಮೆರವಣಿಗೆ
ಚಾಮರಾಜನಗರ: ಭಗೀರಥ ಜಯಂತಿ ಅಂಗವಾಗಿ ನಗರದಲ್ಲಿ ಮಂಗಳವಾರ ಭಗೀರಥರ ಭಾವಚಿತ್ರದ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ನಂತರ ಮೆರವಣಿಗೆಯು ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಭುವನೇಶ್ವರಿ ವೃತ್ತದ ಮೂಲಕ ವೇದಿಕೆ ಕಾರ್ಯಕ್ರಮ ಆಯೋಜಿಸಿದ್ದ ಸರ್ಕಾರಿ ಪೇಟೆ ಶಾಲೆ ಆವರಣದಲ್ಲಿ ಕೊನೆಗೊಂಡಿತು. ಮಂಗಳವಾದ್ಯ, ಡೊಳ್ಳು ಕುಣಿತ, ವೀರಗಾಸೆ, ಸತ್ತಿಗೆಗಳು, ಕಂಸಾಳೆ, ಗೊರವರ ಕುಣಿತ, ಗಾಡಿ ಗೊಂಬೆ, ಕಲಾ ತಂಡಗಳು ಮೆರವಣಿಗೆಗೆ ಶೋಭೆ ತಂದವು. ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು.

Translate »