Tag: Belagavi

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ
ಮೈಸೂರು

ನಾಳೆಯಿಂದ ಬೆಳಗಾವಿ ಅಧಿವೇಶನ: ಜನಪರ ಚಿಂತನೆಗಿಂತ ಸರ್ಕಾರ ಉರುಳಿಸುವ, ಉಳಿಸಿಕೊಳ್ಳುವ ಕಸರತ್ತಿಗೆ ಮೀಸಲು ಸಾಧ್ಯತೆ

December 9, 2018

ಬೆಂಗಳೂರು: ಬೆಳಗಾವಿ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಜನಪರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕಿಂತ ಸರ್ಕಾರ ಉರುಳಿಸಲು ಮತ್ತು ಅಧಿಕಾರ ಉಳಿಸಿಕೊಳ್ಳುವತ್ತ ಹೆಚ್ಚು ಕಸರತ್ತು ನಡೆಯುವ ಸಾಧ್ಯತೆ ಇದೆ. ಸೋಮವಾರ ದಿಂದ ಆರಂಭವಾಗಲಿರುವ ಅಧಿವೇಶನ ಸಂದರ್ಭದಲ್ಲೇ ಕಾಂಗ್ರೆಸ್‍ನ ಕೆಲವು ಶಾಸಕರಿಂದ ರಾಜೀನಾಮೆ ಕೊಡಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಭಾರೀ ತಂತ್ರವನ್ನೆ ರೂಪಿಸಿದೆ. ಇದರ ಸುಳಿ ವರಿತ ಮುಖ್ಯಮಂತ್ರಿ ಅವರು, ತಮ್ಮ ಪಕ್ಷದವರಿರಲಿ, ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವುದಕ್ಕೆ ತಮ್ಮೆಲ್ಲಾ ಶ್ರಮ ಬಳಸುತ್ತಿದ್ದಾರೆ. ಅಧಿವೇಶನ…

4 ವರ್ಷ ನೀನೆಲ್ಲಿ ಮಲಗಿದ್ದೆ ತಾಯಿ? ರೈತ ಮಹಿಳೆ ಮೇಲೆ ಸಿಎಂ ಗರಂ
ಮೈಸೂರು

4 ವರ್ಷ ನೀನೆಲ್ಲಿ ಮಲಗಿದ್ದೆ ತಾಯಿ? ರೈತ ಮಹಿಳೆ ಮೇಲೆ ಸಿಎಂ ಗರಂ

November 19, 2018

ಬೆಂಗಳೂರು: ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ… ಸಕ್ಕರೆ ಕಾರ್ಖಾನೆ ಮಾಲೀಕನಿಗೆ ಓಟು ಒತ್ತುವಾಗ ಗೊತ್ತಾಗ್ಲಿಲ್ವಾ… ಸುವರ್ಣ ಸೌಧ ಗೇಟ್ ಮುರಿದವರು ರೈತರಲ್ಲ, ಗೂಂಡಾಗಳು… ಕೆಲವು ಮಾಧ್ಯಮ ಗಳು ಸಮ್ಮಿಶ್ರ ಸರ್ಕಾರ ಉರುಳಿಸಲು ನೋಡುತ್ತಿವೆ… ಇವು ಬೆಳ ಗಾವಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವ್ಯಕ್ತಪಡಿಸಿದ ಆಕ್ರೋಶದ ನುಡಿಗಳು. ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಸಂಪೂರ್ಣವಾಗಿ ಸಹನೆ ಕಳೆದುಕೊಂಡಿದ್ದರು. ತನ್ನ ವಿರುದ್ಧ ಟೀಕೆ ಮಾಡಿದ್ದ ರೈತ…

ರೈತ ಮಹಿಳೆ, ಹೋರಾಟಗಾರರನ್ನು ಅವಮಾನಿಸಿರುವುದು ಸಹಿಸಲಾಗಲ್ಲ
ಮೈಸೂರು

ರೈತ ಮಹಿಳೆ, ಹೋರಾಟಗಾರರನ್ನು ಅವಮಾನಿಸಿರುವುದು ಸಹಿಸಲಾಗಲ್ಲ

November 19, 2018

ಬೆಂಗಳೂರು: ರೈತ ಮಹಿಳೆ ಹಾಗೂ ರೈತ ಹೋರಾಟ ಗಾರರನ್ನು ಅವಮಾನಿಸಿರುವುದನ್ನು ಸಹಿಸಲಾಗಲ್ಲ ಎಂದು ಗುಡುಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಸಿಎಂ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇಂದು ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, `ನಾಲ್ಕು ವರ್ಷ ಎಲ್ಲಿ ಮಲಗಿದ್ದೆ’? ಎಂದು ಮುಖ್ಯಮಂತ್ರಿಗಳು ರೈತ ಮಹಿಳೆಯನ್ನು ಕೇಳಿದ್ದಾರಲ್ಲಾ, ಅದರ ಅರ್ಥವೇನು? ಎಂದು ಪ್ರಶ್ನಿಸಿದರು. ಪ್ರತಿಭಟನೆ ಮಾಡಿದ ರೈತರನ್ನು ಗೂಂಡಾಗಳು, ದರೋಡೆಕೋರರು ಎಂದೆಲ್ಲಾ ಕರೆದಿದ್ದಾರೆ. ಇಂತಹ ಧಿಮಾಕಿನ ಮಾತುಗಳು ಬೇಡ ಎಂದು ಕಿಡಿಕಾರಿದರು. `ನನಗೆ…

ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?
ಮಂಡ್ಯ

ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?

November 19, 2018

ಮಂಡ್ಯ:  ಮುಖ್ಯಮಂತ್ರಿ ಕುಮಾರಣ್ಣನ ಹತ್ರ ಏನು ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ. ಎಲ್ಲದಕ್ಕೂ ಕುಮಾರಸ್ವಾಮಿಯನ್ನೇ ಹಿಡಿದುಕೊಂಡರೆ ಏನು ಪ್ರಯೋಜನ ಎಂದು ಸಚಿವ ಹೆಚ್.ಡಿ.ರೇವಣ್ಣ ಪ್ರಶ್ನಿಸಿದರು. ನಗರದಲ್ಲಿಂದು ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಕಬ್ಬು ಹೋರಾಟ ಗಾರರ ಪ್ರತಿಭಟನೆ ವಿಚಾರವಾಗಿ ಪ್ರಸ್ತಾ ಪಿಸಿ, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡ ಬೇಕು ಎಂದರು. ಪ್ರತಿಭಟನೆ ಮಾಡುವ ರೈತರು ಶಾಂತಿಯುತವಾಗಿ ಕುಳಿತು ಪ್ರತಿ ಭಟನೆ ನಡೆಸಬೇಕು. ಆದರೆ…

ಡಿ.10ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ
ಮೈಸೂರು

ಡಿ.10ರಿಂದ ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ

November 15, 2018

ಬೆಂಗಳೂರು: ಚಳಿಗಾಲದ ವಿಧಾನಮಂಡಲದ ಅಧಿವೇಶನ ಬೆಳಗಾವಿಯ ಸುವರ್ಣ ಸೌಧದಲ್ಲಿ ಡಿಸೆಂಬರ್ 10ರಿಂದ 21ರವರೆಗೆ ನಡೆಸಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯ ಸಚಿವ ಸಂಪುಟ ನೀಡಿದ ಅಧಿಕಾರವನ್ನು ಬಳಕೆ ಮಾಡಿಕೊಂಡು ಮುಖ್ಯಮಂತ್ರಿ ಯವರು ಈ ದಿನಾಂಕದಲ್ಲಿ ಅಧಿವೇಶನ ಕರೆಯಲು ಅನುಮತಿ ನೀಡುವಂತೆ ರಾಜ್ಯಪಾಲರನ್ನು ಕೋರಿದ್ದಾರೆ.

ಸುವರ್ಣಸೌಧ ಎದುರು ಮಠಾಧೀಶರ ಧರಣಿ
ಮೈಸೂರು

ಸುವರ್ಣಸೌಧ ಎದುರು ಮಠಾಧೀಶರ ಧರಣಿ

August 1, 2018

ಬೆಳಗಾವಿ: ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿ ಹಾಗೂ ಸುವರ್ಣಸೌಧಕ್ಕೆ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಿ ಮಠಾಧೀಶರ ನೇತೃತ್ವದಲ್ಲಿ ಸುವರ್ಣಸೌಧದ ಎದುರು ಇಂದು ಧರಣಿ ನಡೆಯಿತು. ಧರಣಿ ವೇಳೆ ಕೆಲ ಕಿಡಿಗೇಡಿಗಳು ಪ್ರತ್ಯೇಕ ಧ್ವಜ ಹಾರಿಸುವುದರ ಜತೆಗೆ ಘೋಷಣೆ ಸಹ ಕೂಗಿದರು. ಪೊಲೀಸರು ಪ್ರತ್ಯೇಕ ಧ್ವಜ ವಶಪಡಿಸಿಕೊಂಡು, ಕಿಡಿಗೇಡಿಗಳನ್ನು ಬಂಧಿಸಿದರು. ಅಲ್ಲದೆ ವೇದಿಕೆ ಮೇಲೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ನಮ್ಮ ಬೆಂಬಲ ಇಲ್ಲ. ಗದ್ದಲ ಎಬ್ಬಿಸಿದರೆ ವೇದಿಕೆಯಿಂದ ನಿರ್ಗಮಿಸುವುದಾಗಿ ಸ್ವಾಮೀಜಿಗಳು ಹೇಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು….

Translate »