4 ವರ್ಷ ನೀನೆಲ್ಲಿ ಮಲಗಿದ್ದೆ ತಾಯಿ? ರೈತ ಮಹಿಳೆ ಮೇಲೆ ಸಿಎಂ ಗರಂ
ಮೈಸೂರು

4 ವರ್ಷ ನೀನೆಲ್ಲಿ ಮಲಗಿದ್ದೆ ತಾಯಿ? ರೈತ ಮಹಿಳೆ ಮೇಲೆ ಸಿಎಂ ಗರಂ

November 19, 2018

ಬೆಂಗಳೂರು: ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ತಾಯಿ… ಸಕ್ಕರೆ ಕಾರ್ಖಾನೆ ಮಾಲೀಕನಿಗೆ ಓಟು ಒತ್ತುವಾಗ ಗೊತ್ತಾಗ್ಲಿಲ್ವಾ… ಸುವರ್ಣ ಸೌಧ ಗೇಟ್ ಮುರಿದವರು ರೈತರಲ್ಲ, ಗೂಂಡಾಗಳು… ಕೆಲವು ಮಾಧ್ಯಮ ಗಳು ಸಮ್ಮಿಶ್ರ ಸರ್ಕಾರ ಉರುಳಿಸಲು ನೋಡುತ್ತಿವೆ… ಇವು ಬೆಳ ಗಾವಿ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ವ್ಯಕ್ತಪಡಿಸಿದ ಆಕ್ರೋಶದ ನುಡಿಗಳು.

ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾನುವಾರ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಇಂದು ಸಂಪೂರ್ಣವಾಗಿ ಸಹನೆ ಕಳೆದುಕೊಂಡಿದ್ದರು. ತನ್ನ ವಿರುದ್ಧ ಟೀಕೆ ಮಾಡಿದ್ದ ರೈತ ಮಹಿಳೆ ಮೇಲೆ ಹರಿಹಾಯ್ದರು. ಪ್ರತಿಭಟನಾನಿರತ ರೈತರನ್ನು ಗೂಂಡಾಗಳೆಂದರು. ಮಾಧ್ಯಮಗಳನ್ನೂ ಬಿಡದೆ ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಬೆಳ ಗಾವಿಯಲ್ಲಿ ಮಹಿಳೆಯೊಬ್ಬಳು ಕತ್ತಿಗೆ ಹಸಿರು ಟವಲ್ ಹಾಕಿಕೊಂಡು ನನ್ನನ್ನು `ನಾಲಾ ಯಕ್ ಮುಖ್ಯಮಂತ್ರಿ’ ಎಂದಿದ್ದಾಳೆ. ಆಕೆ ಹೊಲದಲ್ಲಿ ಕೆಲಸ ಮಾಡಿದ್ದಾಳೋ ಇಲ್ಲವೋ ಗೊತ್ತಿಲ್ಲ. ಸಕ್ಕರೆ ಕಾರ್ಖಾನೆ ಮಾಲೀಕರು 4 ವರ್ಷದಿಂದ ಕಬ್ಬಿನ ಬಾಕಿ ಹಣ ಕೊಡಲಿಲ್ಲವಂತೆ. ನಾನು ಮುಖ್ಯಮಂತ್ರಿಯಾಗಿ 5 ತಿಂಗಳಾಗಿದೆ ಅಷ್ಟೇ. ನಾಲ್ಕು ವರ್ಷದಿಂದ ಪ್ರತಿಭಟನೆ ಮಾಡದೇ ಇದ್ದೀಯಲ್ಲಾ, 4 ವರ್ಷ ಎಲ್ಲಿ ಮಲಗಿದ್ದೆ ತಾಯಿ? ಎಂದು ರೈತ ಮಹಿಳೆ ಜಯಶ್ರೀ ವಿರುದ್ಧ ಮುಖ್ಯಮಂತ್ರಿಗಳು ಕಿಡಿಕಾರಿದರು. ಅವರ ಈ ಮಾತು ವಿವಾದಕ್ಕೆ ಕಾರಣವಾಯಿತು.

ನನ್ನ ರೈತರು ಶಾಂತಿಪ್ರಿಯರು. ನಾನು ಗ್ರಾಮಗಳಿಗೆ ಹೋದಾಗ ಅಪಾರ ಗೌರವ ದಿಂದ ನಡೆದುಕೊಳ್ಳುತ್ತಾರೆ. ಅವರು ಇಂತಹ ಕೆಲಸ ಮಾಡುವುದಿಲ್ಲ. ಸುವರ್ಣ ಸೌಧ ಗೇಟ್ ಒಡೆದವರು ರೈತರಲ್ಲ, ದರೋಡೆಕೋರರು. ರೈತರ ಹೆಸರಿನಲ್ಲಿ ರೈತರ ಕುಲಕ್ಕೆ ಅವಮಾನ ಮಾಡುತ್ತಿರುವ ಗೂಂಡಾಗಳು. ನಮ್ಮ ತಾಳ್ಮೆಗೂ ಮಿತಿ ಇದೆ. ಸುವರ್ಣ ಸೌಧ ಗೇಟ್ ಮುರಿದರೆ ಸುಮ್ಮನಿರಬೇಕೆ? ಎಂದು ಪ್ರತಿಭಟನಾ ನಿರತ ರೈತರ ವಿರುದ್ಧ ಕುಮಾರ ಸ್ವಾಮಿ ಹರಿಹಾಯ್ದರು. ಕೆಲವು ಮಾಧ್ಯಮಗಳು ಸಮ್ಮಿಶ್ರ ಸರ್ಕಾರವನ್ನು ಬೀಳಿಸಲು ಪ್ರಯತ್ನ ಮಾಡುತ್ತಿವೆ. ಇವರುಗಳೇ ಹೋಗಿ ಲಾರಿ ಮುಂದೆ ಮಲಗುವಂತೆ ರೈತರಿಗೆ ಹೇಳು ವುದು, ಅದನ್ನು ವೀಡಿಯೋ ಮಾಡಿ ದಿನಗಟ್ಟಲೇ ಟಿವಿಯಲ್ಲಿ ತೋರಿಸುವುದು ಮಾಡು ತ್ತಿದ್ದಾರೆ. ಇಂತಹ ಕೆಲಸಗಳ ಹಿಂದೆ ಯಾರಿದ್ದಾರೆ ಎಂಬುದು ನನಗೂ ಗೊತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಮಾಧ್ಯಮಗಳ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು.

Translate »