ಮೈಸೂರು: ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಘಟಕಗಳಲ್ಲಿ ಮುದ್ರಣವಾಗುವ ನೋಟುಗಳ ಸಾಮಥ್ರ್ಯ ಅರಿಯದೆ 500 ರೂ ಹಾಗೂ 1000 ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಪರಿಣಾಮವಾಗಿ ನಿಷೇಧದ ಉದ್ದೇಶ ಈಡೇರಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್‍ನ ಮಾಜಿ ಗವರ್ನರ್ ಡಾ.ವೈ.ವಿ.ರೆಡ್ಡಿ ವಿಷಾದಿಸಿದ್ದಾರೆ.
ಮೈಸೂರಿನ ನಜರ್‍ಬಾದ್‍ನಲ್ಲಿರುವ ವಿಂಡ್ ಚೈಮ್ಸ್ ಆವರಣದಲ್ಲಿ ಭಾನುವಾರ ಮೈಸೂರು ಲಿಟರರಿ ಫೋರಮ್ ಚಾರಿ ಟಬಲ್ ಟ್ರಸ್ಟ್ ಹಾಗೂ ಮೈಸೂರು ಬುಕ್ ಕ್ಲಬ್-2015ರ ಸಂಯುಕ್ತಾಶ್ರಯದಲ್ಲಿ ನಡೆದ ಎರಡನೇ `ಮೈಸೂರು ಸಾಹಿತ್ಯ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂವಾದ ಕಾರ್ಯಕ್ರಮದಲ್ಲಿ ಪ್ರಶ್ನೆಯೊಂದಕ್ಕೆ ಉತ್ತ ರಿಸಿದ ಅವರು, ನೋಟು ಅಮಾನ್ಯೀಕರ ಣದ ಉದ್ದೇಶ ಪೂರ್ಣಪ್ರಮಾಣವಾಗಿ ಈಡೇರದೆ ಇರುವುದನ್ನು ಬೆಳಕಿಗೆ ಚೆಲ್ಲಿದರು.
ಬಹು ನಿರೀಕ್ಷೆಯೊಂದಿಗೆ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಮಾಡಿತ್ತು. ಆದರೆ ಸರ್ಕಾ ರದ ಉದ್ದೇಶ ಇದುವರೆಗೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ. ಇದಕ್ಕೆ ಕಾರಣ ಭಾರತೀಯ ರಿಸರ್ವ್ ಬ್ಯಾಂಕಿನ ನೋಟು ಮುದ್ರಣ ಘಟಕಗಳಲ್ಲಿನ ಮುದ್ರಣ ಸಾಮಥ್ರ್ಯ ಅರಿಯದೆ ಅಮಾನ್ಯೀಕರಣ ಮಾಡಿರು ವುದೇ ಆಗಿದೆ. ಅಮಾನ್ಯೀಕರಣ ಮಾಡಿ ದಾಗ ಶೇ.70ರಷ್ಟು ನೋಟುಗಳು ವಾಪಸ್ಸಾ ಗುತ್ತಿತ್ತು. ಅಷ್ಟು ಪ್ರಮಾಣದ ನೋಟನ್ನು ಮುದ್ರಿಸಬೇಕಾಗಿತ್ತು. ಆದರೆ ಆ ಕೆಲಸ ಆಗದೆ ಇರುವುದರಿಂದ ಸಮಸ್ಯೆಗಳ ಸೃಷ್ಟಿಗೆ ಕಾರಣ ವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನೋಟು ಅಮಾನ್ಯೀಕರಣದ ಹಿನ್ನೆಲೆ ಯಲ್ಲಿ ವಾಪಸ್ಸಾದ ಹಣದಲ್ಲಿ ಎಷ್ಟು ಪ್ರಮಾ ಣದ ಕಪ್ಪು ಹಣ, ಎಷ್ಟು ಪ್ರಮಾಣದ ಸಕ್ರಮ ಹಣ ಬಂದಿದೆ ಎಂಬ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ಗುರುತಿಸಬೇಕು. ಅಲ್ಲದೆ ಅದರ ಮಾಹಿತಿಯನ್ನು ಬಹಿರಂಗ ಪಡಿಸಬೇಕು. ಕೇಂದ್ರ ಸರ್ಕಾರದ ನೋಟು ರದ್ದತಿ ನಿರ್ಧಾರದ ಬಳಿಕ ಭಾರಿ ಪ್ರಮಾಣ ದಲ್ಲಿ ಹಳೆಯ ನೋಟುಗಳು ಬ್ಯಾಂಕುಗಳಿಗೆ ವಾಪಸಾಗಿವೆ. ಅದರಲ್ಲಿ ಕಪ್ಪುಹಣ ಎಷ್ಟಿದೆ ಎಂಬುದನ್ನು ಆದಾಯ ತೆರಿಗೆ ಇಲಾಖೆ ಇನ್ನಷ್ಟೇ ಲೆಕ್ಕಹಾಕಬೇಕಾಗಿದೆ ಎಂದರು.
15ನೇ ವಯಸ್ಸಿನಲ್ಲಿ ಬರೆದದ್ದು ಇಂದಿಗೂ ಪ್ರಸ್ತುತ: ನನಗೆ 15 ವರ್ಷವಾಗಿದ್ದಾಗ `ಇವಿಲ್ಸ್ ಆಫ್ ಕ್ಯಾಸ್ಟಿಸಮ್’ (ಜಾತಿಯತೆಯ ದುಷ್ಪರಿಣಾಮ) ಕುರಿತು ಲೇಖನವೊಂ ದನ್ನು ಬರೆದಿದ್ದೆ. ಈ ಲೇಖನ ಇಂದಿಗೂ ಪ್ರಸ್ತುತವಾಗಿದೆ. ಬಹುತೇಕ ಕಡೆ ಜಾತಿಯತೆ ಇಂದಿಗೂ ತಾಂಡವವಾಡುತ್ತಿರುವುದನ್ನು ಗಮನಿಸಿದಾಗ ನಾನು 1952ರಲ್ಲಿ ಬರೆದ ಲೇಖನ ದಲ್ಲಿ ಜಾತಿಯತೆಯ ಪಿಡುಗಿನ ಮೇಲೆ ಬೆಳಕು ಚೆಲ್ಲಲಾಗಿದೆ ಎಂದು ಅವರು ಹೇಳಿದರು.
ಜೈಲಿನಲ್ಲಿದ್ದ ಅನುಭವ: ನಾನು 14ನೇ ಹಣಕಾಸು ಆಯೋಗದ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಜೈಲಿನಲ್ಲಿರುವ ಅನುಭವ ಉಂಟಾಯಿತು. ಇದರಿಂದ ವಿದೇಶಿ ಪ್ರವಾಸವನ್ನು ಮಾಡುವಂತಿರಲಿಲ್ಲ. ದೇಶದ ಆರ್ಥಿಕತೆಯ ರಹಸ್ಯ ಬಹಿರಂಗವಾಗಬಹುದು ಎಂಬ ಕಾರಣದಿಂದ ವಿದೇಶಿ ಪ್ರವಾಸಿಕ್ಕೆ ತಡೆ ನೀಡಲಾಗಿತ್ತು. ಅಲ್ಲದೆ ಪುಸ್ತಕ ಬರೆಯುವುದಕ್ಕೂ ಅನುಮತಿ ನೀಡಲಿಲ್ಲ ಎಂದು ಅವರು ವಿಷಾಧಿಸಿದರು.
ನಾನು ಮೊದಲು ಕನ್ನಡ ಕಲಿತ್ತಿದ್ದೆ: ನಾನು ಈ ಹಿಂದೆ ಕನ್ನಡ ಬಲ್ಲವನಾಗಿದ್ದೆ. ನನ್ನ ತಂದೆ ಬಳ್ಳಾರಿಯಲ್ಲಿ ನೆಲೆಸಿದ್ದರು. ಇದರಿಂದ ಕನ್ನಡ ಕಲಿತ್ತಿದ್ದೆ. ಆ ನಂತರ ತಮಿಳು ಹಾಗೂ ತೆಲಗು ಭಾಷೆಯನ್ನು ಕಲಿತೆ. ಮೂರು ಭಾಷೆಯನ್ನು ಬಲ್ಲವನಾಗಿದ್ದೇನೆ. ಆದರೆ ನಾನು ಯಾವಾಗಲೂ ತೆಲುಗು ಭಾಷೆಯಲ್ಲಿ ಬರೆಯಲು ಬಯಸುತ್ತೇನೆ ಎಂದು ಅವರು ಹೇಳಿದರು. ಕಾರ್ಯ ಕ್ರಮದಲ್ಲಿ ಲಿಟರರಿ ಫೋರಮ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್, ಕಾರ್ಯದರ್ಶಿ ವಿನಯಾ ಪ್ರಭಾವತಿ, ಮೈಸೂರು ಲಿಟರರಿ ಫೋರಮ್ ಚಾರಿಟೇಬಲ್ ಟ್ರಸ್ಟ್ ಪೆÇೀಷಕ ರಯಾನ್ ಇರಾನಿ, ಲೇಖಕ ಅರುಣ್ ರಾಮನ್ ಪಾಲ್ಗೊಂಡಿದ್ದರು.