ಸಾಂಸ್ಕೃತಿಕ ನಗರಿಯಲ್ಲಿ 2ನೇ ‘ಮೈಸೂರು ಲಿಟರರಿ ಫೆಸ್ಟ್’
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ 2ನೇ ‘ಮೈಸೂರು ಲಿಟರರಿ ಫೆಸ್ಟ್’

August 13, 2018

ಮೈಸೂರು:  ಮೈಸೂರು ಲಿಟರರಿ ಅಸೋಸಿಯೇಷನ್(ಒಐಂ) ವತಿ ಯಿಂದ ಮೈಸೂರಿನ ಮಾನಸ ಗಂಗೋತ್ರಿ ಯಲ್ಲಿರುವ ಸೆನೆಟ್ ಭವನದಲ್ಲಿ ಇಂದು 2ನೇ ‘ಮೈಸೂರು ಲಿಟರರಿ ಫೆಸ್ಟ್-2018’ ಯಶಸ್ವಿ ಯಾಗಿ ನಡೆಯಿತು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಮೈಸೂರು ಲಿಟರರಿ ಫೆಸ್ಟ್ ಅನ್ನು ಖ್ಯಾತ ಸಾರೋದ್ ವಾದಕ ಮತ್ತು ಸಾಹಿತಿ ನಾಡೋಜ ಪಂಡಿತ್ ರಾಜೀವ್ ತಾರಾನಾಥ್ ಅವರು ದೀಪ ಬೆಳಗಿ ಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕನ್ನಡ ಸುಂದರ ಭಾಷೆ, ಬಾಳೆಹಣ್ಣು ಸುಲಿದಷ್ಟು ಸುಲಭವಾಗಿರುವ ಈ ಭಾಷೆ ಅಡಿಗೆ ಮನೆಯಿಂದ ಹೊರಗೆ ಬಾರದಿರು ವುದು ದುರಾದೃಷ್ಟಕರ ಎಂದರು.

ಪ್ರೊ.ಸಿ.ಡಿ.ನರಸಿಂಹಯ್ಯ ಅವರ ಕೊಡುಗೆ ಯನ್ನು ಸ್ಮರಿಸಿಕೊಂಡ ಪಂಡಿತ್ ರಾಜೀವ್ ತಾರಾನಾಥ್, ನನ್ನ ಗುರುಗಳಾಗಿದ್ದ ಪ್ರೊ.ಸಿ.ಡಿ.ಎನ್ ಅವರು ದೇಶದಲ್ಲಿ ಇಂಗ್ಲೀಷ್ ಭಾಷೆ ಬೆಳವಣಿಗೆಗೆ ಕಾರಣರಾಗಿದ್ದರು ಎಂದು ನುಡಿದರು.


ಅತ್ಯುತ್ತಮ ಇಂಗ್ಲೀಷ್ ಶಿಕ್ಷಕರಾದ ಪ್ರೊ.ಕೆ. ನರಸಿಂಹಮೂರ್ತಿ ಅವರಿಂದ ಇಂಗ್ಲೀಷ್ ಕಲಿತಿ ದ್ದರಿಂದ ನನಗೆ ಈ ಭಾಷೆ ಮೇಲೆ ಆಸಕ್ತಿ, ಉತ್ಸಾಹ ಉಂಟಾಯಿತು. ದುರಾದೃಷ್ಟವಶಾತ್ ಅವರನ್ನು ಸರಿಯಾಗಿ ಗುರುತಿಸಲಾಗಲಿಲ್ಲ ಎಂದ ಅವರು, ಪ್ರೊ.ಎ.ಎನ್.ಮೂರ್ತಿರಾವ್, ಪ್ರೊ.ಅನಂತ ರಾಮಯ್ಯ ಹಾಗೂ ಪ್ರೊ.ಗುರುರಾಜ್‍ರಾವ್ ಅವರು ಇಂಗ್ಲೀಷ್ ಅನ್ನು ಸರಿಯಾಗಿ ಮಾತ ನಾಡಲು ಹೇಳಿಕೊಟ್ಟರು ಎಂಬುದನ್ನು ನೆನಪಿಸಿ ಕೊಳ್ಳಲು ಮರೆಯಲಿಲ್ಲ.

ಸಾಹಿತ್ಯ ಉತ್ಸವ ಆರಂಭವಾಗುತ್ತಿದ್ದಂತೆಯೇ ಮೈಸೂರು ಲಿಟರರಿ ಅಸೋಸಿಯೇಷನ್ ಅಧ್ಯಕ್ಷ ಪ್ರೊ.ಕೆ.ಸಿ.ಬೆಳ್ಳಿಯಪ್ಪ ಅವರು ನೊಬೆಲ್ ಲಾರೇಟ್ ವಿ.ಎಸ್.ನೈಯಪಾಲ್ ಅವರ ನಿಧನ ಸುದ್ದಿಯನ್ನು ಪ್ರಕಟಿಸಿ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ವೇದಿಕೆ ಯಲ್ಲಿದ್ದ ಗಣ್ಯರು ಹಾಗೂ ಸಭಿಕರೆಲ್ಲರೂ ಎದ್ದು ನಿಂತು ಎರಡು ನಿಮಿಷ ಮೌನಾಚರಣೆ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಕೆ.ಸಿ. ಬೆಳ್ಳಿಯಪ್ಪ ಅವರು ಆರಂಭದಲ್ಲಿ ಪರಿಚಯಾತ್ಮಕ ಭಾಷಣ ಮಾಡಿ, 2016ರಲ್ಲಿ ಕಲವೇ ಇಂಗ್ಲೀಷ್ ಶಿಕ್ಷಕರನ್ನೊಳಗೊಂಡ ಸದಸ್ಯರೊಂದಿಗೆ ಆರಂಭ ವಾದ ಮೈಸೂರು ಲಿಟರರಿ ಅಸೋಸಿಯೇಷನ್ ನಲ್ಲಿ 15 ಪ್ಯಾಟ್ರನ್ ಮೆಂಬರ್‍ಗಳು, 55 ಅಜೀವ ಸದಸ್ಯರು ಮಾತ್ರ ಇದ್ದರು. ಈಗ ಸದಸ್ಯರ ಸಂಖ್ಯೆ 214ಕ್ಕೇರಿದೆ ಎಂದು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷರಾದ ಡಾ. ಹೆಚ್.ಎಸ್.ಶಿವಣ್ಣ ಅವರು ಗಣ್ಯರನ್ನು ಸ್ವಾಗತಿಸಿ ದರೆ, ಕಾರ್ಯದರ್ಶಿ ರೆಜಿನಾಲ್ಡ್ ವೆಸ್ಲಿ ಅವರು ವಂದಿಸಿದರು. ಗಣೇಶ್‍ಪ್ರಸಾದ್ ಪ್ರಾರ್ಥಿಸಿದರೆ, ಮಹಾಜನ ಕಾಲೇಜಿನ ಪ್ರೊ.ಡಿ.ಗೀತಾ ಅವರು ಕಾರ್ಯಕ್ರಮ ನಿರೂಪಿಸಿದರು.

Translate »