ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?
ಮಂಡ್ಯ

ಸಿಎಂ ಕುಮಾರಸ್ವಾಮಿ ಹತ್ರ ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ?

November 19, 2018

ಮಂಡ್ಯ:  ಮುಖ್ಯಮಂತ್ರಿ ಕುಮಾರಣ್ಣನ ಹತ್ರ ಏನು ಹಣ ಪ್ರಿಂಟ್ ಮಾಡೋ ಮೆಷಿನ್ ಇದ್ಯಾ. ಎಲ್ಲದಕ್ಕೂ ಕುಮಾರಸ್ವಾಮಿಯನ್ನೇ ಹಿಡಿದುಕೊಂಡರೆ ಏನು ಪ್ರಯೋಜನ ಎಂದು ಸಚಿವ ಹೆಚ್.ಡಿ.ರೇವಣ್ಣ ಪ್ರಶ್ನಿಸಿದರು.

ನಗರದಲ್ಲಿಂದು ಖಾಸಗಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಕಬ್ಬು ಹೋರಾಟ ಗಾರರ ಪ್ರತಿಭಟನೆ ವಿಚಾರವಾಗಿ ಪ್ರಸ್ತಾ ಪಿಸಿ, ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಕಬ್ಬು ಬೆಳೆಗಾರರನ್ನು ರಕ್ಷಣೆ ಮಾಡ ಬೇಕು ಎಂದರು. ಪ್ರತಿಭಟನೆ ಮಾಡುವ ರೈತರು ಶಾಂತಿಯುತವಾಗಿ ಕುಳಿತು ಪ್ರತಿ ಭಟನೆ ನಡೆಸಬೇಕು.

ಆದರೆ ಪ್ರತಿಭ ಟನಾಕಾರರು ಟ್ರ್ಯಾಕ್ಟರ್ ಸುಡೋದು, ಫ್ಯಾಕ್ಟ ರಿಗೆ ರೈತರು ತೆಗೆದುಕೊಂಡು ಹೋಗುವ ಕಬ್ಬನ್ನ ತಡೆಯೋದು, ಕಲ್ಲು ಹೊಡೆ ಯೋದು ಎಷ್ಟು ಸರಿ? ರೈತರಿಗೆ ಕಾರ್ಖಾನೆ ಕೂಡ ಮುಖ್ಯ ಆಗುತ್ತದೆ. ಅಂತಹದ್ದ ನ್ನೆಲ್ಲಾ ಮಾಡಬಾರದು. ಈ ರೀತಿಯ ಅಹಿತಕರ ಘಟನೆಗೆ ಮುಂದಾಗಬಾರದು, ಈ ಪ್ರತಿಭಟನೆ ಹಿಂದೆ ಯಾರಿದ್ದಾರೆ ಅನ್ನೋದು ನಮಗೆ ಗೊತ್ತಿದೆ ಎಂದು ರೇವಣ್ಣ ಹೇಳಿದರು. ಇನ್ನು, ಕಬ್ಬು ಬೆಳೆ ಗಾರರಿಗೆ ಸಮಸ್ಯೆ ಇರೋದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಕಬ್ಬು ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು. ಎಲ್ಲದಕ್ಕೂ ಕುಮಾರಸ್ವಾಮಿಯನ್ನು, ರಾಜ್ಯ ಸರ್ಕಾರವನ್ನ ಹಿಡಿದುಕೊಂಡ್ರೆ ಹೇಗೆ? ರಾಜ್ಯ ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮಿಷನ್ ಇದೀಯಾ? ಎಂದು ಪ್ರಶ್ನಿಸಿದರು. ಇನ್ನು ಜಿ.ಪರಮೇಶ್ವರ್ ಸಿಎಂ ಆಗಬೇಕು ಅನ್ನೋ ಕೂಗು ಕೇಳಿ ಬಂದ ವಿಚಾರದ ಬಗ್ಗೆ ಮಾತನಾಡಿದ ಸಚಿವ ರೇವಣ್ಣ, ಯಾರು ಸಿಎಂ ಆಗಬೇಕು ಅನ್ನೋದು ನನಗೆ ಸಂಬಂಧವಿಲ್ಲದ ವಿಚಾರ. ಆ ಕುರಿತು ಏನಿದ್ರೂ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ, ಇದು ದೇವೇಗೌಡರಿಗೆ ಬಿಟ್ಟ ವಿಚಾರ, ಸಚಿವ ಸಂಪುಟ ವಿಸ್ತರಣೆಯನ್ನು ನಾವ್ ಏನಾದ್ರೂ ಮಾಡುವುದು ಬೇಡ ಎಂದು ಹಿಡ್ಕೊಂಡಿದ್ದೀವಾ? ಒಪ್ಪಿಗೆ ಕೊಡಲು ನಾನೇನು ರಾಷ್ಟ್ರೀಯ ಅಧ್ಯಕ್ಷನಾ? ಎಂದು ಅವರು ಪ್ರಶ್ನಿಸಿದರು.

Translate »