ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ
ಮೈಸೂರು

ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ

November 19, 2018

ಮೈಸೂರು: ಮೈಸೂ ರಿನ ರಾಮಕೃಷ್ಣ ವಿದ್ಯಾಶಾಲೆಯ ಸಂಸ್ಥಾ ಪಕ ಅಧ್ಯಕ್ಷ ಸ್ವಾಮಿ ಶಾಂಭವಾನಂದಜಿ ಸ್ಮರಣಾರ್ಥ ಭಾನುವಾರ ವಿದ್ಯಾಶಾಲೆಯಲ್ಲಿ 47ನೇ ಸಾಮಾನ್ಯ ಜ್ಞಾನ ಲಿಖಿತ ಸ್ಪರ್ಧೆ ನಡೆಸಲಾಯಿತು. ಮೈಸೂರಿನ ವಿವಿಧ 36 ಶಾಲೆಗಳ 9 ಮತ್ತು 10ನೇ ತರಗತಿಯ 699 ವಿದ್ಯಾರ್ಥಿಗಳು ಲಿಖಿತ ಸ್ಪರ್ಧೆಯಲ್ಲಿ ತಮ್ಮ ಜ್ಞಾನವನ್ನು ಒರೆಗೆ ಹಚ್ಚಿದರು.
ಒಟ್ಟು 16 ಕೊಠಡಿಗಳಲ್ಲಿ ಬೆಳಿಗ್ಗೆ 10ರಿಂದ 11.30ರವರೆಗೆ ನಡೆದ ಸ್ಪರ್ಧೆಗೆ ತೀರ್ಪು ಗಾರರಾದ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ವ್ಯವಸ್ಥಾಪಕ ಸಂಪಾ ದಕ ವಿಕ್ರಮ್ ಮುತ್ತಣ್ಣ, ರೋಟರಿ ಬೃಂದಾ ವನ ಶಾಲೆಯ ಮುಖ್ಯ ಶಿಕ್ಷಕಿ ಮಮತಾ ಹರೀಶ್, ಬೆಂಗಳೂರಿನ ಸಿ.ವಿ.ಶ್ರೀನಿವಾಸ್ ಲಿಖಿತ ಸ್ಪರ್ಧೆಯನ್ನು ಖುದ್ದು ಪರಿಶೀಲಿ ಸಿದರು. ಇವರೊಂದಿಗೆ ರಾಮಕೃಷ್ಣ ಆಶ್ರಮದ ಪ್ರತಿನಿಧಿ ಸ್ವಾಮಿ ಯುಕ್ತೇಶಾನಂದ, ಪ್ರಾಂಶು ಪಾಲ ಬಾಲಾಜಿ ಇನ್ನಿತರರು ಇದ್ದರು.

9ನೇ ತರಗತಿ ಮತ್ತು 10ನೇ ತರಗತಿ ವಿಭಾಗ ದಲ್ಲಿ ಕ್ರಮವಾಗಿ ಮೂರು ಹಾಗೂ ವಿಶೇಷ 5 ಬಹುಮಾನಗಳು ಮತ್ತು 5 ಶಿಕ್ಷಣ ಸಂಸ್ಥೆ ಗಳಿಗೆ ಪ್ರತ್ಯೇಕ ಬಹುಮಾನ, ರೋಲಿಂಗ್ ಶೀಲ್ಡ್ ನೀಡಲಾಗುವುದು. ಡಿ.22ರಂದು ರಾಮಕೃಷ್ಣ ವಿದ್ಯಾಶಾಲೆಯ 66ನೇ ಕಾಲೇಜು ದಿನಾಚರಣೆ ಸಂದರ್ಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

Translate »