Tag: Chamarajanagar

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್
ಚಾಮರಾಜನಗರ

‘ಕೈ’ ಭದ್ರಕೋಟೆಯಲ್ಲಿ `ಕಮಲ’ ಅರಳಿಸಲು ಸರ್ಕಸ್

May 6, 2018

ಚಾಮರಾಜನಗರ:  ಜಿಲ್ಲೆಯು ಕಾಂಗ್ರೆಸ್‍ನ ಭದ್ರಕೋಟೆ. ಇದು 2008 ಮತ್ತು 2013ರಲ್ಲಿ ವಿಧಾನಸಭಾ ಚುನಾವಣೆ ಹಾಗೂ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಈ `ಕೈ’ ಕೋಟೆಯ ಮೇಲೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಾದರೂ ‘ಕಮಲ’ ವನ್ನು ಅರಳಿಸಬೇಕು ಎಂದು ಬಿಜೆಪಿ ಅವಿರತ ಪ್ರಯತ್ನ ನಡೆಸಿದೆ. ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರ `ಕೈ’ಯ ಕೋಟೆಯಾಗಿದೆ. 2008 ಮತ್ತು 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ 4 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿತ್ತು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ…

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ
ಚಾಮರಾಜನಗರ

ಬಿಜೆಪಿ ಬೆಂಬಲಿಸಲು ಬಿಎಸ್‍ವೈ ಅಭಿವೃದ್ಧಿ ಬಳಗ ಮನವಿ

May 6, 2018

ಚಾಮರಾಜನಗರ:  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಮನವಿ ಮಾಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ರೈತರಿಗೆ ಅನೇಕ ಉಪಯುಕ್ತವಾದ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಮಹಿಳೆಯರಿಗೆ, ಸ್ವ-ಸಹಾಯ ಸಂಘಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಎಲ್ಲಾ ವರ್ಗದ ಜನರಿಗೂ ಒಂದಲ್ಲ…

ಹೆಲ್ಮೇಟ್ ಬಳಸಲು ಸವಾರರಿಗೆ ಸಲಹೆ
ಚಾಮರಾಜನಗರ

ಹೆಲ್ಮೇಟ್ ಬಳಸಲು ಸವಾರರಿಗೆ ಸಲಹೆ

May 6, 2018

ಚಾಮರಾಜನಗರ:  ಪ್ರತಿ ಯೊಬ್ಬ ವಾಹನ ಸವಾರರು ಹೆಲ್ಮೇಟ್ ಅನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಪಿ.ಕೆ.ವೆಂಕಟೇಶ್ ಸಲಹೆ ನೀಡಿದರು. ನಗರದಲ್ಲಿ ಶನಿವಾರ ಜೆಎಸ್‍ಎಸ್ ಶಿಕ್ಷಣ ಮಹಾವಿದ್ಯಾಲಯ, ಜೆಎಸ್‍ಎಸ್ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಪಟ್ಟಣ ಸಂಚಾರಿ ಪೊಲೀಸ್ ಠಾಣೆಯಿಂದ ಹಮ್ಮಿ ಕೊಂಡಿದ್ದ 29ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಸಮರಾಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ್ವಿಚಕ್ರ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರು ಕಡ್ಡಾಯ ವಾಗಿ ಚಾಲನಾ ಪರವಾನಗಿ ಪಡೆದು, ರಸ್ತೆಯ…

ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು
ಚಾಮರಾಜನಗರ

ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟ ಜಿಲ್ಲೆಯಲ್ಲಿ ಒಟ್ಟು 8,30,887 ಮತದಾರರು

May 5, 2018

ಚಾಮರಾಜನಗರ: ಇದೇ ತಿಂಗಳ 12ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯ 4 ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಒಟ್ಟು 830887 ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 207603 ಮತದಾರರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 211522 ಮತದಾರರು, ಚಾಮರಾಜನಗರ ಕ್ಷೇತ್ರದಲ್ಲಿ ಒಟ್ಟು 206146 ಮತ ದಾರರು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 205616 ಮತದಾರರು (ಒಟ್ಟು 830887) ಹಕ್ಕು ಚಲಾ ಯಿಸಲಿದ್ದಾರೆ. ಒಟ್ಟು 830887…

ಕಾಂಗ್ರೆಸ್‍ಗೆ ಬಂಜಾರ ಸಮುದಾಯ ಬೆಂಬಲ
ಚಾಮರಾಜನಗರ

ಕಾಂಗ್ರೆಸ್‍ಗೆ ಬಂಜಾರ ಸಮುದಾಯ ಬೆಂಬಲ

May 5, 2018

ಚಾಮರಾಜನಗರ:  ಜಿಲ್ಲೆಯ ಬಂಜಾರ (ಲಂಬಾಣ ) ಸಮು ದಾಯವು ಕಾಂಗ್ರೆಸ್ ಪಕ್ಷ ಬೆಂಬಲಿಸಲು ತೀರ್ಮಾನಿಸಿದೆ ಎಂದು ಬಂಜಾರ ಶ್ರೀಸಂತ ಸೇವಾಲಾಲ್ ಬಳಗದ ಮೈಸೂರು ಜಿಲ್ಲಾ ಅಧ್ಯಕ್ಷ ಬಸವರಾಜ್ ನಾಯ್ಕ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಂಬಾಣ ಸಮುದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡಿತ್ತು. ಹೀಗಾಗಿ ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿ…

ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ, ಯುವಕ ಸಾವು
ಚಾಮರಾಜನಗರ

ಬೈಕ್‍ಗೆ ಪೊಲೀಸ್ ಜೀಪ್ ಡಿಕ್ಕಿ, ಯುವಕ ಸಾವು

May 5, 2018

ಚಾಮರಾಜನಗರ: ಬೈಕ್ ಗೆ ಪೊಲೀಸ್ ಜೀಪ್ ಡಿಕ್ಕಿಯಾಗಿ ತೀವ್ರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ತಾಲೂಕು ಬಸವಟ್ಟಿ ಗ್ರಾಮದಲ್ಲಿ ನಡೆದಿದೆ. ಸಂತೇಮರಹಳ್ಳಿ ಮೈಸೂರು ರಸ್ತೆಯ ಬಸವಟ್ಟಿ ಗೇಟ್ ಸಮೀಪ ಬೈಕ್‍ನಲ್ಲಿ ಬರುತ್ತಿದ್ದ ಶಂಭುಲಿಂಗಪ್ಪ (ಚಿಕ್ಕಣ್ಣ) ಅವರ ವಾಹನಕ್ಕೆ ಡಿವೈಎಸ್‍ಪಿ ಜಯಕುಮಾರ್ ಪ್ರಯಾಣ ಸುತ್ತಿದ್ದ ಪೆÇಲೀಸ್ ಜೀಪ್ ಡಿಕ್ಕಿಯಾಗಿದೆ. ಶುಕ್ರವಾರ ನಡೆದ ಘಟನೆಯಲ್ಲಿ ಶಂಭುಲಿಂಗಪ್ಪ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಸ್ಥಳೀಯರೆಲ್ಲ ಸೇರಿ ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ…

ಇಂದು ಶಿಕ್ಷಕರ ಸಂಘದ ಸಭೆ
ಚಾಮರಾಜನಗರ

ಇಂದು ಶಿಕ್ಷಕರ ಸಂಘದ ಸಭೆ

May 5, 2018

ಚಾಮರಾಜನಗರ: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ತರಬೇತಿ ಹೊಂದದ ಶಿಕ್ಷಕರುಗಳ (ಪ.ಜಾತಿ ಮತ್ತು ಪಂಗಡ) ಸಂಘದ ಸಭೆಯನ್ನು ಸಂತೇಮರಹಳ್ಳಿಯಲ್ಲಿ ನಾಳೆ (ಮೇ 5) ಎಪಿಎಂಸಿ ಸಂತೇ ಮೈದಾನದ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ. ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ಹೊಂದದ ಶಿಕ್ಷಕರು ಸಭೆಗೆ ಆಗಮಿಸುವಂತೆ ಸಂಘದ ಅಧ್ಯಕ್ಷ ಬಿ.ಸುಂದರ, ಜಂಟಿ ಕಾರ್ಯದರ್ಶಿ ಬಿ.ನಾರಾಯಣಸ್ವಾಮಿ ಕೋರಿದ್ದಾರೆ.

ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. !  ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ
ಚಾಮರಾಜನಗರ

ಬರ ಪರಿಹಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಶಾಸಕ ನರೇಂದ್ರಗೆ 2 ಸಾವಿರ ರೂ. ಪರಿಹಾರ ನೀಡಿದ ಕಂದಾಯ ಇಲಾಖೆ.. ! ಶಾಸಕ ನರೇಂದ್ರರ ಸಹಿ ಫೋರ್ಜರಿ ಮಾಡಿರುವ ದಾಖಲೆ ಬಿಡುಗಡೆ ಮಾಡಿದ ಆರ್‍ಟಿಐ ಕಾರ್ಯಕರ್ತ

May 4, 2018

ಕೊಳ್ಳೇಗಾಲ: ಬರಪರಿಹಾರದಲ್ಲಿ ಹನೂರು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಶಾಸಕ ನರೇಂದ್ರ ಅವರಿಗೆ ಕಂದಾಯ ಇಲಾಖೆ 2014 ರಲ್ಲಿ 2ಸಾವಿರ ರೂ. ಪರಿಹಾರ ನೀಡಿದೆ. ಇದು ಮಾಹಿತಿ ಹಕ್ಕು ಕಾರ್ಯಕರ್ತ ಅಣಗಳ್ಳಿ ದಶರಥ್ ಪಡೆದಿರುವ ಮಾಹಿತಿಯಿಂದ ಬಹಿರಂಗಗೊಂಡಿದೆ. ಹನೂರು ಶಾಸಕ ನರೇಂದ್ರ ಅವರು ದೊಡ್ಡಿಂದುವಾಡಿ ಗ್ರಾಮದಲ್ಲಿ 1 ಎಕರೆ 89 ಸೆಂಟ್ ಜಮೀನು ಹೊಂದಿದ್ದಾರೆ. ಸರ್ವೆನಂಬರ್ 5ಎ, 6ಎರಲ್ಲಿ ನರೇಂದ್ರ ಲೇಟ್ ರಾಜೂಗೌಡ ಹೆಸರಿನಲ್ಲಿ ಜಮೀನು ಇದೆ. 2013-14ನೇ ಸಾಲಿ ನಲ್ಲಿ ನರೇಂದ್ರ ಅವರು 2ಸಾವಿರ ರೂ. ಬರ…

ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡಿಲ್ಲ
ಚಾಮರಾಜನಗರ

ಪ್ರಧಾನಿ ಹುದ್ದೆಗೆ ತಕ್ಕಂತೆ ಮಾತನಾಡಿಲ್ಲ

May 4, 2018

ಚಾಮರಾಜನಗರ: ಸಂತೇಮರಹಳ್ಳಿಯಲ್ಲಿ ನಡೆದ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿದ್ದಾರೆ. ಪ್ರಧಾನಿ ಹುದ್ದೆಯ ಘನತೆಗೆ ತಕ್ಕಂತೆ ಮಾತನಾಡಿಲ್ಲ ಎಂದು ಸಂಸದ ಆರ್.ಧ್ರುವನಾರಾಯಣ್ ತಿರುಗೇಟು ನೀಡಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಮೋದಿ ಅವರು ತಮ್ಮ ಭಾಷಣದ ಆರಂಭದಲ್ಲಿ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಾದ ಮಲೈಮಹದೇಶ್ವರ, ಬಿಳಿಗಿರಿ ರಂಗನಾಥ, ಹಿಮವದ್ ಗೋಪಾಲಸ್ವಾಮಿ ಪದಗಳನ್ನು ಹೇಳುವಾಗ ಸರಿಯಾಗಿ ಉಚ್ಛರಿಸಿಲ್ಲ. ಮೋದಿ ಅವರಿಗೆ ಹೋಲಿಸಿದರೆ. ಎಐಸಿಸಿ ಅಧ್ಯಕ್ಷ…

ಬಿಜೆಪಿ ಬೆಂಬಲಿಸಲು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಿರ್ಧಾರ
ಚಾಮರಾಜನಗರ

ಬಿಜೆಪಿ ಬೆಂಬಲಿಸಲು ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಿರ್ಧಾರ

May 4, 2018

ಚಾಮರಾಜನಗರ: ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿ ಅದನ್ನು ಈಡೇರಿಸದೆ ಇರುವ ಕಾಂಗ್ರೆಸ್‍ಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸು ವುದಾಗಿ ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಬಸವನಪುರ ರಾಜಶೇಖರ ಹೇಳಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಗುರುವಾರ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಅಧಿಕಾರ ನಡೆಸಿದ ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ತೀರ ಹಿಂದುಳಿದಿರುವ ಮಾದಿಗ ಸಮು ದಾಯಕ್ಕೆ ಒಳಮೀಸಲಾತಿ…

1 70 71 72 73 74
Translate »