ಕಾಂಗ್ರೆಸ್‍ಗೆ ಬಂಜಾರ ಸಮುದಾಯ ಬೆಂಬಲ
ಚಾಮರಾಜನಗರ

ಕಾಂಗ್ರೆಸ್‍ಗೆ ಬಂಜಾರ ಸಮುದಾಯ ಬೆಂಬಲ

May 5, 2018

ಚಾಮರಾಜನಗರ:  ಜಿಲ್ಲೆಯ ಬಂಜಾರ (ಲಂಬಾಣ ) ಸಮು ದಾಯವು ಕಾಂಗ್ರೆಸ್ ಪಕ್ಷ ಬೆಂಬಲಿಸಲು ತೀರ್ಮಾನಿಸಿದೆ ಎಂದು ಬಂಜಾರ ಶ್ರೀಸಂತ ಸೇವಾಲಾಲ್ ಬಳಗದ ಮೈಸೂರು ಜಿಲ್ಲಾ ಅಧ್ಯಕ್ಷ ಬಸವರಾಜ್ ನಾಯ್ಕ ತಿಳಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ಆಡಳಿತ ನಡೆಸಿದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಂಬಾಣ ಸಮುದಾಯಕ್ಕೆ ಬಹಳ ಪ್ರಾಮುಖ್ಯತೆ ನೀಡಿತ್ತು. ಹೀಗಾಗಿ ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿ ಸಲು ಲಂಬಾಣ ಸಮುದಾಯ ನಿರ್ಧರಿ ಸಿದೆ ಎಂದರು. ಹಟ್ಟಿ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಸರ್ಕಾರ, ಬಂಜಾರರ ಧರ್ಮ ಗುರುಗಳಾದ ಶ್ರೀ ಸಂತ ಸೇವಾಲಾಲ್ ಜಯಂತಿಯನ್ನು ಸರ್ಕಾರದ ಕಾರ್ಯ ಕ್ರಮವನ್ನಾಗಿ ಕಾಂಗ್ರೆಸ್ ಜಾರಿಗೊಳಿಸಿದೆ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ವನ್ನು ಸ್ಥಾಪಿಸಿ ಪ್ರಾದೇಶಿಕ ಕಚೇರಿಗಳನ್ನು ತೆರೆದು ಮೂಲಭೂತ ಸೌಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ಕಲ್ಪಿಸಿದೆ. ಹೀಗಾಗಿ ಜಿಲ್ಲೆಯಲ್ಲಿರುವ ಬಂಜಾರ ಸಮು ದಾಯದ ಬಂಧುಗಳು ಕಾಂಗ್ರೆಸ್ ಬೆಂಬಲಿ ಸಬೇಕು ಎಂದು ಮನವಿ ಮಾಡಿದರು.

ಬಳಗದ ಜಿಲ್ಲಾ ಅಧ್ಯಕ್ಷ ಪಿ.ಕುಮಾರ ನಾಯ್ಕ, ಜಿಲ್ಲಾ ಸಂಚಾಲಕ ಚಿನ್ನ ರಾಜುನಾಯ್ಕ, ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ನಾಯ್ಕ, ಪಿಎಸಿಸಿ ಬ್ಯಾಂಕ್ ನಿರ್ದೇಶಕ ಉಲ್ಲಾಸ ನಾಯ್ಕ, ಮುಖಂಡ ಗಜೇಂದ್ರ ನಾಯ್ಕ ಸುದ್ದಿ ಗೋಷ್ಟಿಯಲ್ಲಿ ಹಾಜರಿದ್ದರು.

Translate »