Tag: Coronavirus Mysuru

ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ
ಮೈಸೂರು

ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ

July 20, 2020

ಮೈಸೂರು, ಜು.19(ಎಂಟಿವೈ)-ಮೈಸೂರಿನಲ್ಲಿ ಭಾನುವಾರ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 70ಕ್ಕೆ ಏರಿಕೆ ಯಾಗಿದೆ. ಹೊಸದಾಗಿ 110 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1624ಕ್ಕೆ ಏರಿದೆ. ಹೊಸದಾಗಿ 110 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ. ಮೈಸೂರಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ 10 ದಿನಗಳಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಯಲ್ಲಿ…

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ
ಮೈಸೂರು

ಸಮುದಾಯದತ್ತ ಕೊರೊನಾ ಸೋಂಕು: ಬಲವಾದ ಶಂಕೆ ಮೂಡಿಸಿದೆ ಸೋಂಕಿತರ ಟ್ರಾವೆಲ್ ಹಿಸ್ಟರಿ

June 24, 2020

ಮೈಸೂರು, ಜೂ. 23 (ಆರ್‍ಕೆ)- ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ಮಹಾಮಾರಿ ಸೋಂಕು ಸಾಂಸ್ಕೃತಿಕ ನಗರಿ ಮೈಸೂ ರಿಗರನ್ನು ಭಯಭೀತ ರನ್ನಾಗಿ ಮಾಡಿದೆ. ಸೋಂಕಿತರ ಟ್ರಾವೆಲ್ ಹಿಸ್ಟರಿ ನೋಡಿದರೆ, ಕೊರೊನಾ ಸೋಂಕು ಸಮುದಾಯಕ್ಕೆ ಹರಡುತ್ತಿದೆಯೇ ಎಂಬ ಶಂಕೆ ಮೂಡುತ್ತಿರುವುದು ಮೈಸೂರು ಜನತೆ ಬೆಚ್ಚಿ ಬೀಳಲು ಕಾರಣವಾಗಿದೆ. ಕೋವಿಡ್-19 ಲಾಕ್‍ಡೌನ್ ನಿರ್ಬಂಧ ತೆರವು ಗೊಂಡು ಎಲ್ಲಾ ವಾಣಿಜ್ಯ ವಹಿವಾಟು, ರಸ್ತೆ, ರೈಲು ಮತ್ತು ವಾಯು ಮಾರ್ಗ ಮುಕ್ತಗೊಂಡಿರುವ ಕಾರಣ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಆತಂಕ ಮನೆ…

ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ
ಮೈಸೂರು

ಕೋವಿಡ್-19: ಕೆ.ಆರ್.ಆಸ್ಪತ್ರೆ ಓಪಿಡಿ ಸ್ಥಗಿತ

April 10, 2020

1050 ಹಾಸಿಗೆ ಸಾಮಥ್ರ್ಯದ ದೊಡ್ಡಾಸ್ಪತ್ರೆಯಲ್ಲೀಗ ಕೇವಲ 50 ಒಳ ರೋಗಿಗಳಿದ್ದಾರೆ ಸದಾ ರೋಗಿಗಳಿಂದ ಕಿಕ್ಕಿರಿಯುತ್ತಿದ್ದ ಆಸ್ಪತ್ರೆ ಈಗ ಮರುಭೂಮಿಯಂತಿದೆ ಎಲ್ಲಾ ಓಟಿ, ಸಿಓಟಿ, ಎಮರ್ಜೆನ್ಸಿ ವಾರ್ಡ್, ಅಪಘಾತ ತುರ್ತು ಚಿಕಿತ್ಸಾ ವಿಭಾಗ ಸಂಪೂರ್ಣ ಬಂದ್ ಮಾ.25ರ ನಂತರ ಒಂದೇ ಒಂದು ಎಂಎಲ್‍ಸಿ ಕೇಸ್ ಬಂದಿಲ್ಲ, ಒಂದೂ ಮರಣೋತ್ತರ ಪರೀಕ್ಷೆ ನಡೆದಿಲ್ಲ ಮೈಸೂರು, ಏ.9-ಹಳೇ ಮೈಸೂರು ಭಾಗದಲ್ಲೇ ಅತೀ ದೊಡ್ಡ ಆಸ್ಪತ್ರೆ ಎಂದು ಕರೆಯಲ್ಪಡುವ ಮೈಸೂರಿನ ಕೆಆರ್ (ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್) ಆಸ್ಪತ್ರೆಯು ಶತಮಾನ ಕಾಲದ ಅತೀ ಪ್ರಮುಖ…

ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ
ಮೈಸೂರು

ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಲಾಗಿದೆ: ಡಿಸಿ

March 30, 2020

ವದಂತಿ, ಭಯ ಹುಟ್ಟಿಸುವವರ ವಿರುದ್ದ ಕ್ರಮ ಜಿಲ್ಲೆಯಲ್ಲಿ 1702 ಮಂದಿ ಕ್ವಾರಂಟೇನ್ ನಲ್ಲಿದ್ದು, 766 ಮಂದಿ ಪೂರ್ಣಗೊಳಿಸಿದ್ದಾರೆ ಮೈಸೂರು,ಮಾ.29( MTY) – ಒಂದೇ ಸ್ಥಳದಲ್ಲಿ ಆರು ಮಂದಿಗೆ ನೊವೆಲ್ ಕೊರೊನಾ ಸೋಂಕು ದೃಡಪಟ್ಟ ಹಿನ್ನೆಲೆಯಲ್ಲಿ ಕೇಂದ್ರದ ಕಂಟೇನ್ಮೆಂಟ್ ಪ್ಲಾನ್ ನಿಯಮಾನುಸಾರ ನಂಜನಗೂಡನ್ನು ಕ್ಲಸ್ಟರ್ ಕೇಸ್ ಆಗಿ ಪರಿಗಣಿಸಿ, ತೀವ್ರ ಕಟ್ಟೆಚ್ಚರವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಮಂದಿಯಲ್ಲಿ ಕೊರೊನಾ…

ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ
ಮೈಸೂರು

ನಂಜನಗೂಡಿಗೆ ಬರುವ ವಾಹನಗಳ ಜಪ್ತಿಗೆ ಸೂಚನೆ: ಎಸ್ ಪಿ ಎಚ್ಚರಿಕೆ

March 30, 2020

220 ವಾಹನ ವಶ ಪಟ್ಟಣದ ಜನತೆ ಆತಂಕ ಬೇಡ* ಮೈಸೂರು,ಮಾ.29( MTY )- ನಂಜನಗೂಡು ಪಟ್ಟಣದಲ್ಲಿ ಐದು ಮಂದಿಗೆ ನೊವೆಲ್ ಕೊರೊನಾ ಸೋಂಕು ಇರುವುದು ದೃಡಪಟ್ಟಿರುವ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರ ನಿಷೇಧಿಸಲಾಗಿದೆ. ಈಗಾಗಲೇ 220 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, ಸೋಮವಾರದಿಂದ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವುದಾಗಿ ಎಸ್ ಪಿ ಸಿ.ಬಿ. ರಿಷ್ಯಂತ್ ಎಚ್ಚರಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮ ಕುರಿತಂತೆ ಭಾನುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ 1372 ನೌಕರರು ಕೆಲಸ ಮಾಡುತ್ತಿದ್ದು,…

ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಸಿಬ್ಬಂದಿಗೆ ಸೆಲ್ಫ್ ಪ್ರೊಟೆಕ್ಷನ್ ಇಲ್ಲ
ಮೈಸೂರು

ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಸಿಬ್ಬಂದಿಗೆ ಸೆಲ್ಫ್ ಪ್ರೊಟೆಕ್ಷನ್ ಇಲ್ಲ

March 30, 2020

ಮೈಸೂರು ಮಾ. 29 (ಆರ್ ಕೆಬಿ)- ಕೋವಿದ್-19 ರೋಗಿಗಳ ಜೀವರಕ್ಷಣೆಗೆ ಹೋರಾಡುತ್ತಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಸೆಲ್ಫ್ ಪ್ರೊಟಕ್ಷನ್ ಇಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 8 ಜನರಿಗೆ ಕೋವಿದ್ 19 ಚಿಕಿತ್ಸೆ ನೀಡಲಾಗುತ್ತಿದೆ. ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಬೇಸಿಕ್ ಮೆಡಿಕಲ್ ಫೆಸಿಲಿಟಿ ಕೊರತೆ ಇದೆ ಎನ್ನಲಾಗಿದೆ. ಇವರಿಗೆ ಚಿಕಿತ್ಸೆಗೆ ಅಗತ್ಯವಾದ ನಾಲ್ಕು ಪ್ರಮುಖ…

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ
ಮೈಸೂರು

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ

March 27, 2020

ಮೈಸೂರು, ಮಾ.27(ಎಸ್ ಬಿಡಿ)- ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಟಿ.ಕೆ.ಲೇಔಟ್, ಗಂಗೋತ್ರಿ ಬಡಾವಣೆಯ ಮಾರುತಿ ದೇವಾಲಯ ರಸ್ತೆಯಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ನೆರವು ಕೇಂದ್ರ ತೆರೆಯಲಾಗಿದ್ದು, ನಿರ್ಬಂಧ ಅವಧಿ ಮುಗಿಯುವವರೆಗೂ ಮುಂದುವರೆಯಲಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಜನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಹೋಟೆಲ್ ಗಳನ್ನೂ ಮುಚ್ಚಿಸಲಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿರಾಶ್ರಿತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ….

ಮೈಸೂರಲ್ಲಿ 3ನೇ ಕೊರೊನಾ ಧೃಡ: ಕಾರ್ಮಿಕರಿಗೆ ಹೊರಬಾರದಂತೆ ಸೂಚನೆ
ಮೈಸೂರು

ಮೈಸೂರಲ್ಲಿ 3ನೇ ಕೊರೊನಾ ಧೃಡ: ಕಾರ್ಮಿಕರಿಗೆ ಹೊರಬಾರದಂತೆ ಸೂಚನೆ

March 27, 2020

ಮೈಸೂರು, ಮಾ.27(ಆರ್ ಕೆಬಿ)- ಮೈಸೂರಲ್ಲಿ 3ನೇ ವ್ಯಕ್ತಿಗೆ ಕೊರೋನಾ ವೈರಸ್ ಧೃಡವಾಗಿದ್ದು, ಆತ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಇತರ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಲಾಗಿದೆ. ಕೊರೋನಾ ವೈರಸ್ ಪತ್ತೆಯಾದ ಮೂರನೇ ವ್ಯಕ್ತಿ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಿಯಂಟ್ ಕಾರ್ಖಾನೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಕಾರ್ಖಾನೆಯ ಔಷಧಿ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರಿಂದ ಸೋಂಕು ತಗುಲಿರಬಹುದು ಎನ್ನಲಾಗಿದೆ. ಈತ ಔಷಧಿ ಕಂಪನಿಯ…

Translate »