ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ
ಮೈಸೂರು

ಮೈಸೂರಲ್ಲಿ ಕೊರೊನಾ ಸಾವಿನ ಸರಣಿ ಮುಂದುವರಿಕೆ

July 20, 2020

ಮೈಸೂರು, ಜು.19(ಎಂಟಿವೈ)-ಮೈಸೂರಿನಲ್ಲಿ ಭಾನುವಾರ ಕೊರೊನಾ ಸಾವಿನ ಸರಣಿ ಮುಂದುವರೆದಿದ್ದು, 11 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 70ಕ್ಕೆ ಏರಿಕೆ ಯಾಗಿದೆ. ಹೊಸದಾಗಿ 110 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 1624ಕ್ಕೆ ಏರಿದೆ. ಹೊಸದಾಗಿ 110 ಪ್ರದೇಶಗಳನ್ನು ಕಂಟೇನ್ಮೆಂಟ್ ಜೋನ್ ಗಳಾಗಿ ಘೋಷಿಸಲಾಗಿದೆ.

ಮೈಸೂರಲ್ಲಿ ಕಳೆದ 15 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಕಳೆದ 10 ದಿನಗಳಿಂದ ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಆತಂಕವನ್ನು ಹೆಚ್ಚಿಸಿದೆ.

ಕೊರೊನಾ ವಾರಿಯರ್ಸ್ ಆದ ಪೊಲೀಸ್ ಇಲಾಖೆಯ ಅರಣ್ಯ ಸಂಚಾರಿ ದಳದ ಮುಖ್ಯ ಪೇದೆಯೊಬ್ಬರು (54 ವರ್ಷ), ನಂಜನಗೂಡಿನ ಚಾಮುಂಡೇಶ್ವರಿ ದೇವಾಲಯದ 59 ವರ್ಷದ ಸಹಾಯಕ ಅರ್ಚಕರೊಬ್ಬರು ಸೇರಿದಂತೆ ವಿವಿಧ ಬಡಾವಣೆಗಳ 11 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ. ಇಂದಿನ ಹೊಸ ಸೋಂಕಿತರಲ್ಲಿ ಪಾಲಿಕೆ ಸಿಬ್ಬಂದಿ, ಪೊಲೀಸ್ ಪೇದೆ, ಪೊಲೀಸ್ ಇಲಾಖೆಯ ಅರಣ್ಯ ಸಂಚಾರ ದಳ ಸಿಬ್ಬಂದಿ ಸೇರಿದಂತೆ ಕೊರೊನಾ ವಾರಿಯರ್ಸ್ ಗಳಲ್ಲೂ ಸೋಂಕು ಪತ್ತೆಯಾಗಿದೆ. ಮೈಸೂರು ನಗರದ ಮೂಲೆ-ಮೂಲೆಗೂ ಕೊರೊನಾ ವಕ್ಕರಿಸಿದ್ದು, ಬಹುತೇಕ ಎಲ್ಲಾ ಬಡಾವಣೆಗಳಲ್ಲೂ ಸೋಂಕು ಪತ್ತೆಯಾಗಿರುವುದು ಆತಂಕ ಮೂಡಿಸಿದೆ. ಇಂದು ಪತ್ತೆಯಾದ ಹೊಸ ಸೋಂಕಿ ತರಲ್ಲಿ 40 ಮಂದಿ ಸೋಂಕಿತರ ಸಂಪರ್ಕ ಇದ್ದವರಾಗಿ ದ್ದರೆ, 49 ಮಂದಿ ಐಎಲ್‍ಐ,

11 ಮಂದಿ ಸಾರಿ, ಸಮಸ್ಯೆಯಿಂದ ಬಳಲುತ್ತಿದ್ದವರೇ ಆಗಿದ್ದಾರೆ. ಮಹಿಳೆಯರು, ಯುವತಿಯರು, ಯುವಕರು, ವೃದ್ಧರು ಒಳಗೊಂಡಂತೆ ಎಲ್ಲಾ ವಯೋಮಾನದ ವರಲ್ಲೂ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 17,396 ಮಂದಿ ಮೇಲೆ ನಿಗಾ ಇಡಲಾಗಿತ್ತು. ಅದರಲ್ಲಿ 14,915 ಮಂದಿ 14 ದಿನಗಳ ಐಸೊಲೇಷನ್ ಕ್ವಾರಂಟೈನ್ ಮುಗಿಸಿದ್ದಾರೆ. ಪ್ರಸ್ತುತ 1,900 ಮಂದಿ 14 ದಿನಗಳ ಹೋಂ ಕ್ವಾರಂಟೈನ್‍ನಲ್ಲಿದ್ದಾರೆ. ಒಟ್ಟು 1624 ಸೋಂಕಿತರಲ್ಲಿ ಇಂದು 23 ಮಂದಿ ಸೇರಿ ಈವರೆಗೆ ಒಟ್ಟು 598 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡು ಗಡೆಯಾಗಿದ್ದಾರೆ. ಪ್ರಸ್ತುತ 956 ಮಂದಿ ಸಕ್ರಿಯ ಪ್ರಕರಣಳಿದ್ದು, ಅದರಲ್ಲಿ 240 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 77 ಮಂದಿ ಕೋವಿಡ್ ಡೆಡಿಕೇಟೆಡ್ ಹೆಲ್ತ್ ಕೇರ್ ಸೆಂಟರ್‍ನಲ್ಲಿ, 145 ಮಂದಿ ಐಸೊಲೇಟೆಡ್ ಕೋವಿಡ್ ಕೇರ್ ಸೆಂಟರ್‍ನಲ್ಲಿ 157 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 335 ಮಂದಿ ಹೋಂ ಐಸೊಲೇಷನ್‍ನಲ್ಲಿದ್ದಾರೆ.

Translate »