ಜೆಡಿಎಸ್‍ನಲ್ಲಿ ರಾಜಪ್ರಭುತ್ವವಿದೆ ಎಂಬ ವಿಶ್ವನಾಥ್ ಹೇಳಿಕೆಗೆ ಖಂಡನೆ
ಮೈಸೂರು

ಜೆಡಿಎಸ್‍ನಲ್ಲಿ ರಾಜಪ್ರಭುತ್ವವಿದೆ ಎಂಬ ವಿಶ್ವನಾಥ್ ಹೇಳಿಕೆಗೆ ಖಂಡನೆ

July 21, 2020

ಮೈಸೂರು, ಜು.20(ಪಿಎಂ)- ಜೆಡಿಎಸ್ ಪಕ್ಷ ಹಾಗೂ ಪಕ್ಷದ ರಾಷ್ಟ್ರಾಧ್ಯಕ್ಷರೂ ಆದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಕುರಿತು ಮಾಜಿ ಸಚಿವ, ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ತೀರಾ ಹಗುರವಾಗಿ ಮಾತನಾಡಿದ್ದಾರೆ ಎಂದು ಖಂಡಿಸಿರುವ ಜೆಡಿಎಸ್ ಮುಖಂಡರು, ಜೆಡಿಎಸ್ ತಮಗೆ ರಾಜಕೀಯ ಪುನರ್‍ಜನ್ಮ ನೀಡಿದೆ ಎಂಬುದನ್ನು ಮರೆಯಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಮೈಸೂರಿನ ಸೀತಾವಿಲಾಸ ರಸ್ತೆಯಲ್ಲಿ ರುವ ಶಾಸಕ ಸಾ.ರಾ.ಮಹೇಶ್ ಕಚೇರಿ ಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ನರಸಿಂಹ ಸ್ವಾಮಿ, ವಿಶ್ವನಾಥ್ ಮಾಧ್ಯಮಗಳಲ್ಲಿ ಜೆಡಿಎಸ್ ಹಾಗೂ ನಮ್ಮ ಪಕ್ಷದ ವರಿಷ್ಠರ ಬಗ್ಗೆ ಹಗುರ ವಾಗಿ ಮಾತನಾಡಿದ್ದಾರೆ. ಇದು ಖಂಡ ನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಮೂಲೆಗುಂಪಾಗಿದ್ದ ಇವರನ್ನು ಜೆಡಿಎಸ್‍ಗೆ ಕರೆತಂದು ಶಾಸಕ ರನ್ನಾಗಿ ಮಾಡಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟರೂ ಕಿಂಚಿತ್ತೂ ಕೃತಜ್ಞತೆ ಇಲ್ಲದೇ ಮೈತ್ರಿ ಸರ್ಕಾರದಲ್ಲಿ ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಪಕ್ಷದಿಂದ ಹೊರ ಹೋದರು. ಆ ಮೂಲಕ ಮೈತ್ರಿ ಸರ್ಕಾರ ಬೀಳಲು ಕಾರಣರಾದರು. ಇವರಿಗೆ ಜೆಡಿಎಸ್ ಹಾಗೂ ಪಕ್ಷದ ವರಿಷ್ಠರ ಬಗ್ಗೆ ಮಾತನಾ ಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಜಿಪಂ ಮಾಜಿ ಸದಸ್ಯ ಎಂ.ಟಿ.ಕುಮಾರ್ ಮಾತನಾಡಿ, ಜೆಡಿಎಸ್‍ನಲ್ಲಿ ರಾಜಪ್ರಭುತ್ವ ವಿದೆ ಎಂದು ವಿಶ್ವನಾಥ್ ಟೀಕಿಸಿದ್ದಾರೆ. ಜೊತೆಗೆ 40 ವರ್ಷಗಳ ಕಾಲ ವಿವಿಧ ಅಧಿ ಕಾರ ಅನುಭವಿಸಿದ ಕಾಂಗ್ರೆಸ್ ಪಕ್ಷವನ್ನೂ ಇದೇ ರೀತಿ ರಾಜಪ್ರಭುತ್ವದ ಪಕ್ಷ ಎಂದು ಟೀಕಿಸಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಪಕ್ಷವನ್ನೇ ಪಕ್ಷಾಂತರ ಮಾಡಿದರು ಎಂದು ಟೀಕೆ ಮಾಡಿದ್ದಾರೆ. ಸಾ.ರಾ. ಮಹೇಶ್ ಅವರ ಬಗ್ಗೆಯೂ ಬಹಳ ಹಗುರ ವಾಗಿ ಮಾತನಾಡಿದ್ದಾರೆ. ರಾಜಕೀಯ ಅಸ್ತಿತ್ವ ಕಳೆದುಕೊಂಡಿದ್ದ ಇವರಿಗೆ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಾ.ರಾ. ಮಹೇಶ್ ರಾಜಕೀಯ ಪುನರ್‍ಜನ್ಮ ನೀಡಿದ್ದಾರೆ ಎಂದು ತಿರುಗೇಟು ನೀಡಿದರು.

ಜೆಡಿಎಸ್ ರಾಜ್ಯ ವಕ್ತಾರ ರವಿಚಂದ್ರೇ ಗೌಡ, ಜಿಪಂ ಮಾಜಿ ಅಧ್ಯಕ್ಷ ದ್ವಾರಕೀಶ್, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಪಕ್ಷದ ಮುಖಂಡರಾದ ಕೆ.ವಿ.ಮಲ್ಲೇಶ್, ಸೋಮಣ್ಣ, ರಾಮು ಮತ್ತಿತರರು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »