ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಸಿಬ್ಬಂದಿಗೆ ಸೆಲ್ಫ್ ಪ್ರೊಟೆಕ್ಷನ್ ಇಲ್ಲ
ಮೈಸೂರು

ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಸಿಬ್ಬಂದಿಗೆ ಸೆಲ್ಫ್ ಪ್ರೊಟೆಕ್ಷನ್ ಇಲ್ಲ

March 30, 2020

ಮೈಸೂರು ಮಾ. 29 (ಆರ್ ಕೆಬಿ)- ಕೋವಿದ್-19 ರೋಗಿಗಳ ಜೀವರಕ್ಷಣೆಗೆ ಹೋರಾಡುತ್ತಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಸೆಲ್ಫ್ ಪ್ರೊಟಕ್ಷನ್ ಇಲ್ಲ ಎಂಬ ದೂರುಗಳು ಕೇಳಿಬರುತ್ತಿವೆ.

ಮೈಸೂರಿನ ಕೆ.ಆರ್.ಆಸ್ಪತ್ರೆ ಮತ್ತು ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಒಟ್ಟು 8 ಜನರಿಗೆ ಕೋವಿದ್ 19 ಚಿಕಿತ್ಸೆ ನೀಡಲಾಗುತ್ತಿದೆ.
ಕೋವಿದ್ 19 ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು, ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ ಬೇಸಿಕ್ ಮೆಡಿಕಲ್ ಫೆಸಿಲಿಟಿ ಕೊರತೆ ಇದೆ ಎನ್ನಲಾಗಿದೆ.

ಇವರಿಗೆ ಚಿಕಿತ್ಸೆಗೆ ಅಗತ್ಯವಾದ ನಾಲ್ಕು ಪ್ರಮುಖ ಸೌಲಭ್ಯಗಳಾದ PPE ಅಂದರೆ ಪರ್ಸನಲ್ ಪ್ರೋಟೆಕ್ಷನ್ ಎಕ್ವಿಪ್ಮೆಂಟ್ ಕೊರತೆ ಇದೆ. ಪೇಷಂಟ್ ಗೆ ಐದು ಜನ ವೈದ್ಯರು ನೋಡುತ್ತಾರೆ. ಅಷ್ಟೇ ಅಲ್ಲ, First line Doctors, 2nd line nurses, 3rd line Class 4. ಇಷ್ಟು ಜನರಿಗೂ PPE ಬೇಕು. ಪ್ರತಿ ರೋಗಿಯನ್ನು ನೋಡಿದ ನಂತರ ಅದನ್ನು ಮತ್ತೆ ಬಳಸುವಂತಿಲ್ಲ.

ಅದಿಲ್ಲದೆ ಪೇಷಂಟ್ ಬಳಿ ಹೋಗಲೂ ಆಗದು. ಅದಿಲ್ಲದೆ ರೋಗಿಯನ್ನು ನೋಡಿದರೆ ವೈದ್ಯರು, ನರ್ಸ್ ಗಳಿಗೂ ಕೊವಿದ್ 19 ಹರಡುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಇಲ್ಲಿ ಹಾಲಿ ನೀಡಲಾಗಿರುವ PPE ಕೊರತೆಯಾಗಿದೆ. ಇದು ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ರು, ನರ್ಸ್ ಗಳ ಆತಂಕಕ್ಕೆ ಕಾರಣವಾಗಿದೆ.
ಹಾಲಿ ಆಸ್ಪತ್ರೆಯಲ್ಲಿ ಕೇವಲ 40 PPE ಮಾತ್ರ ಉಳಿದಿವೆ.‌

N95 ಮಾಸ್ಕ್ ಕೊರತೆ: ಕೋವಿದ್ 19 ರೋಗಿಗಳ ಚಿಕಿತ್ಸೆ ವೇಳೆ ಅಗತ್ಯವಾಗಿ ಬೇಕಿರುವ N95 ಮಾಸ್ಕ್ ಕೊರತೆಯೂ ಇದೆ. ಸಾಮಾನ್ಯರಿಗೆ N95 ಮಾಸ್ಕ್ ಬೇಕಾಗಿಲ್ಲ. ಆದರೆ ಇಂದು ಎಲ್ಲರೂ N95 ಮಾಸ್ಕನ್ನೆ ಬಳಸಲು ಶುರು ಮಾಡಿದ್ದರಿಂದ ಚಿಕಿತ್ಸೆಯಲ್ಲಿ ತೊಡಗಿರುವವರಿಗೆ N95 ಮಾಸ್ಕ್ ಗಳ ಕೊರತೆ ಎದುರಾಗಿದೆ. ಅದರಲ್ಲೂ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರಿಗೆ ಸಿಕ್ತಿಲ್ಲ. ವೈದ್ಯರು ಸ್ವಂತ ಹಣದಿಂದ N95 ,ಮಾಸ್ಕ್ ತೆಗೆದುಕೊಂಡಿದ್ದಾರೆ. ಆದರೆ ನರ್ಸ್ ಗಳು, ಕ್ಲಾಸ್ 4 ಸಿಬ್ಬಂದಿಗೆ N95 ಮಾಸ್ಕ್ ಸಿಕ್ಕಿಲ್ಲ. ಇದು ಸಹಜವಾಗಿ ಅವರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಹ್ಯಾಂಡ್ ಸ್ಯಾನಿಟೈಸರ್: ವೈದ್ಯರು, ನರ್ಸ್ ಗಳಿಗೆ ಅಗತ್ಯವಾದ ಹ್ಯಾಂಡ್ ಸ್ಯಾನಿಟೈಜರ್ ಸರಿಯಾದ ಸಪ್ಲೈ ಇಲ್ಲ. ಪ್ಯಾನಿಕ್ ಆಗಿದ್ದರಿಂದ ಸಾಮಾನ್ಯ ಜನರೆಲ್ಲರೂ ಹ್ಯಾಂಡ್ ಸ್ಯಾನಿಟೈಜರ್ ಖರರೀದಿಸುತ್ತಿರುವುದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಸ್ಯಾನಿಟೈಜರ್ ನ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ವೈದ್ಯರಿಗೆ ತುರ್ತು ಅಗತ್ಯವಾದ ಸ್ಯಾನಿಟೈಜರ್ ಸಿಗದಂತಾಗಿದೆ. ಅಲ್ಲದೆ ಲಿಕ್ವಿಡ್ ಸೋಪ್ ಸಲುಷನ್ ಕೂಡ ಕೊರತೆ ಇದೆ ಎಂಬ ದೂರಿದೆ.

ಕೋವಿದ್ 19 ರೋಗಿಗಳನ್ನು ಟ್ರೀಟ್ ಮಾಡುವ ವೈದ್ಯರು, ನರ್ಸುಗಳು, ಕ್ಲಾಸ್ 4 ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ, ಎನ್95 ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್, ಲಿಕ್ವಿಡ್ ಸೋಪ್ ಸಲುಷನ್ ಈ ನಾಲ್ಕು ಪ್ರಮುಖ ವಿಚಾರಗಳಿಗೆ ಅಧಿಕಾರಿಗಳು ಆದ್ಯತೆ ನೀಡುತ್ತಿಲ್ಲ ಎಂಬುದು ಪ್ರಮುಖ ದೂರು.

ಇದಿಷ್ಟೇ ಅಲ್ಲದೆ ವೆಂಟಿಲೇಟರ್ ಗಳ ಕೊರತೆಯೂ ಇದೆ. ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ನಿಂದ 5 ವೆಂಟಿಲೇಟರ್ ಗಳು ಬಂದಿರುವುದು ಬಿಟ್ಟರೆ ವೆಂಟಿಲೇಟರ್ಗಳ ಕೊರತೆಯೂ ಇದೆ. ಈಗ ಕೊವಿದ್ 19 ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ವೆಂಟಿಲೇಟರ್ ಗಳ ಸಮಸ್ಯೆ ಉಂಟಾಗಬಹಯದು ಎಂಬುದು ತಜ್ಞ ವೈದ್ಯರಲ್ಲಿ ಆತಂಕಕ್ಕೀಡು ಮಾಡಿದೆ.

ಈ ಮಧ್ಯೆ ಖಾಸಗಿ ಆಸ್ಪತ್ರೆಗಳು ಸಹಾಯ ಸಹ ಸಿಗುತ್ತಿಲ್ಲ ಎಂಬ ದೂರುಗಳಿವೆ. ಖಾಸಗಿ ಆಸ್ಪತ್ರೆಗಳು ಬೇರೆ ಬೇರೆ ಕಾರಣಗಳಿಂದ ಬರುವ ಸಾಮಾನ್ಯ ಕೆಮ್ಮು ನೆಗಡಿ ಪ್ರಕರಣಗಳನ್ನು ಕೋವಿದ್ 9 ಎಂದು ಹೆದರಿ ಪ್ಯಾನಿಕ್ ಆಗಿ ಕೆ.ಆರ್.ಆಸ್ಪತ್ರೆಗೆ ಕಳಿಸುತ್ತಿದ್ದಾರೆ. ಹೀಗಾಗಿ ಕೆ ಆರ್ ಆಸ್ಪತ್ರೆಯಲ್ಲಿ ಓವರ್ಲೋಡ್ ಆಗಿ ಎರಡನ್ನು ಪರೀಕ್ಷಿಸುವ ಆತುರದಲ್ಲಿ ಕೋವಿದ್19 ಕೇಸ್ ಗಳತ್ತ ಕಾನ್ಸಂಟ್ರೇಟ್ ಮಾಡಲು ತೊಂದರೆಯಾಗುತ್ತಿದೆ ಎನ್ನುತ್ತಾರೆ ವೈದ್ಯರು.

ಹಾಲಿ 250 ವೈದ್ಯರು ದಿನದ 24 ಗಂಟೆಯೂ ಕರ್ತವ್ಯನಿರತರಾಗಿದ್ದಾರೆ. ಜೊತೆಗೆ post-graduate 150 ಜನ, ಹಾಗೂ ಪೆರಿಪರಿಯಿಂದಲೂ ಬರುತ್ತಿದ್ದಾರೆ. ಇಲ್ಲಿ ಪ್ರಮುಖವೆಂದರೆ ಸ್ಪೆಷಲಿಸ್ಟ್ ಡಾಕ್ಟರ್ಸ್ ಪ್ರಾಬ್ಲಮ್ ಆಗ್ತಿದೆ. ಫ್ರಂಟ್ಲೈನ್ ಡಾಕ್ಟರ್ಸ್ ರೆಸ್ಟ್ ಲೆಸ್ ಕೆಲಸ ನಿರ್ವಹಿಸುತ್ತಿದ್ದಾರೆ.

Translate »