Tag: Coronavirus

ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು
ಮೈಸೂರು

ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು

March 15, 2020

ಮೈಸೂರು, ಮಾ.14(ಆರ್‍ಕೆ) ಕೋವಿಡ್-19 ಮಾರಣಾಂತಿಕ ರೋಗದ ಭೀತಿಯಿಂ ದಾಗಿ ಸರ್ಕಾರ ಒಂದು ವಾರ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯಾ ದ್ಯಂತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆ, ವಿವಿಧ ಇಲಾಖೆಗಳ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಇಂದು ಅವರ ಮನೆಗಳಿಗೆ ಸುರಕ್ಷಿತ ವಾಗಿ ಕಳುಹಿಸಿಕೊಡ ಲಾಯಿತು. ಜಿಲ್ಲಾಧಿ ಕಾರಿಗಳ ಸೂಚನೆ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗಳ ವಿದ್ಯಾರ್ಥಿ ಗಳು (ಹೊರ ದೇಶ ಮತ್ತು ರಾಜ್ಯದವ ರನ್ನು ಹೊರತು ಪಡಿಸಿ) ಖಾಸಗಿ…

ಕೊರೊನಾ ಭೀತಿ’: ಹಾಸ್ಟೆಲ್ ತೊರೆಯಲು ವಿದ್ಯಾರ್ಥಿಗಳಿಗೆ ಸೂಚನೆ
ಮೈಸೂರು

ಕೊರೊನಾ ಭೀತಿ’: ಹಾಸ್ಟೆಲ್ ತೊರೆಯಲು ವಿದ್ಯಾರ್ಥಿಗಳಿಗೆ ಸೂಚನೆ

March 15, 2020

ಬೆಂಗಳೂರು: ಕೋವಿಡ್-19 ವೈರಸ್ ನಿಯಂತ್ರಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳ ವಸತಿ ನಿಲಯಗಳಿಗೆ ಸೋಮವಾರ ದಿಂದ ಮಾಸಾಂತ್ಯದವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಭಾನುವಾರ ಸಂಜೆಯೊಳಗಾಗಿ ವಸತಿ ನಿಲಯ ಗಳನ್ನು ತೊರೆಯಬೇಕು. ಮತ್ತೆ ಏಪ್ರಿಲ್ 1 ರಿಂದ ವಸತಿ ನಿಲಯಕ್ಕೆ ವಾಪಸ್ ಅಗುವಾಗ ತಮಗೆ ಕೋವಿಡ್ -19 ಸೋಂಕು ವ್ಯಾಪಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಶನಿವಾರದಿಂದ ಜಾರಿಗೆ ಬರುವಂತೆ ಉನ್ನತ…

ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ: ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
ಮೈಸೂರು

ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ: ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ

March 15, 2020

ಬೆಂಗಳೂರು: ಇಂದು ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಇಂದು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಯಾವುದೇ ಹೊಸ ಕೊರೊನಾ ಪಾಸಿ ಟಿವ್ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊಸದಾಗಿ 11 ಮಂದಿ ಸೋಂಕು ಶಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಲಾ ಗಿದೆ. ಒಟ್ಟು 32 ಮಂದಿ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡ ಲಾಗುತ್ತಿದೆ. ಬೆಂಗಳೂರಿನಲ್ಲಿ 9, ಹಾಸನದಲ್ಲಿ 4, ದಕ್ಷಿಣ ಕನ್ನಡ ದಲ್ಲಿ…

ಕೊರೊನಾ ವೈರಸ್ ಆತಂಕ: ಮದ್ದೂರು ಖಾಸಗಿ ಶಾಲೆಯಲ್ಲಿ ಗ್ಲೌಸ್, ಮಾಸ್ಕ್ ಧರಿಸಿ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ
ಮಂಡ್ಯ

ಕೊರೊನಾ ವೈರಸ್ ಆತಂಕ: ಮದ್ದೂರು ಖಾಸಗಿ ಶಾಲೆಯಲ್ಲಿ ಗ್ಲೌಸ್, ಮಾಸ್ಕ್ ಧರಿಸಿ ಬರುವಂತೆ ವಿದ್ಯಾರ್ಥಿಗಳಿಗೆ ಸೂಚನೆ

March 12, 2020

ಮಂಡ್ಯ,ಮಾ.11(ನಾಗಯ್ಯ)-ಕೊರೊನಾ ಭೀತಿ ಹಿನ್ನಲೆಯಲ್ಲಿ ಮದ್ದೂರು ಪಟ್ಟಣದ ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಮಾಸ್ಕ್, ಗ್ಲೌಸ್ ಧರಿಸಿ ಬರುವಂತೆ ಆಡಳಿತ ಮಂಡಳಿ ಸೂಚಿಸಿದೆ. ಮದ್ದೂರು ಪಟ್ಟಣ್ಣದಲ್ಲಿರುವ ಸೆಂಟ್ ಆನ್ಸ್ ಕಾನ್ವೆಂಟ್ ಆಡಳಿತ ಮಂಡಳಿ ಈ ಸೂಚನೆ ನೀಡಿದ್ದು ಒಂದು ವೇಳೆ ಮಾಸ್ಕ್, ಗ್ಲೌಸ್ ಧರಿಸಿಕೊಂಡು ಬರದಿದ್ದರೆ ಅಂತಹ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸುವುದಿಲ್ಲ ಎಂದು ತಿಳಿಸಲಾಗಿದೆ. ಒಂದರಿಂದ 10ನೇ ತರಗತಿಯವರೆಗೆ ಸುಮಾರು 1 ಸಾವಿರ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಶಾಲೆ ಆಡಳಿತ ಮಂಡಳಿಯ ಈ ನಿರ್ಧಾರ ದಿಂದ ವಿದ್ಯಾರ್ಥಿಗಳ…

ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆ: ಚೀನಾದಿಂದ  ಬಂದ ವಿದ್ಯಾರ್ಥಿಯಲ್ಲಿ ದೃಢ
ಮೈಸೂರು

ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ಕೇರಳದಲ್ಲಿ ಪತ್ತೆ: ಚೀನಾದಿಂದ ಬಂದ ವಿದ್ಯಾರ್ಥಿಯಲ್ಲಿ ದೃಢ

January 31, 2020

ತಿರುವನಂತಪುರ: ಭಾರತದಲ್ಲಿ ಮೊದಲ ಕೊರೋನಾ ವೈರಸ್ ಸೋಂಕು ತಗುಲಿರುವುದು ಪತ್ತೆಯಾಗಿದೆ. ಚೀನಾದ ವುಹಾನ್‍ನಿಂದ ಕೇರಳಕ್ಕೆ ಹಿಂತಿರುಗಿರುವ ವಿದ್ಯಾರ್ಥಿಯಲ್ಲಿ ಕೊರೋನಾ ವೈರಸ್ ಇಂದು ಪರೀಕ್ಷೆ ವೇಳೆ ದೃಢವಾಗಿದೆ. ಆಸ್ಪತ್ರೆಯಲ್ಲಿ ವಿದ್ಯಾರ್ಥಿಯನ್ನು ಪ್ರತ್ಯೇಕ ವಾರ್ಡ್‍ನಲ್ಲಿ ಇರಿಸಲಾಗಿದೆ. ಆತನ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಚೀನಾದಿಂದ ಕರ್ನಾಟಕ ಮತ್ತು ಕೇರಳದ ಹಲವು ವಿದ್ಯಾರ್ಥಿಗಳು ಹಿಂತಿರು ಗುತ್ತಿದ್ದಾರೆ ಎಂದು ವರದಿಗಳು ಬರುತ್ತಿರುವ ಮಧ್ಯೆಯೇ ವೈರಸ್ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಕರೋನಾ ವೈರಸ್ ಆತಂಕ: ಆಸ್ಪತ್ರೆಗೆ ದಾಖಲಾದ ಇಬ್ಬರು ಬೆಂಗಳೂರಿಗರು
ಮೈಸೂರು

ಕರೋನಾ ವೈರಸ್ ಆತಂಕ: ಆಸ್ಪತ್ರೆಗೆ ದಾಖಲಾದ ಇಬ್ಬರು ಬೆಂಗಳೂರಿಗರು

January 28, 2020

ಬೆಂಗಳೂರು: ಚೀನಾ ಪ್ರವಾಸ ಹೋಗಿದ್ದ ಇಬ್ಬರು ಭಾರತೀಯರನ್ನು ಕರೋನಾ ವೈರಸ್ ಸೋಂಕು ತಗಲಿದ ಶಂಕೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಸರಕಾರಿ ಆಸ್ಪತ್ರೆ ಯೊಂದಕ್ಕೆ ದಾಖಲಿಸಲಾಗಿದೆ. ಚೀನಾಕ್ಕೆ ಪ್ರವಾಸಕ್ಕೆ ತೆರಳಿದ್ದ ಈ ಇಬ್ಬರು ಜ.18ರಂದು ನಗರಕ್ಕೆ ಮರಳಿದ್ದರು. ಭಾನುವಾರ ರಾತ್ರಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ರಕ್ತದ ಮಾದರಿಯನ್ನು ಪುಣೆಯ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‍ಐವಿ) ಸಂಸ್ಥೆಗೆ ಕಳುಹಿಸಿದ್ದು, ವರದಿಗೆ ಕಾಯಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಚೀನಾದಿಂದ ರಾಜ್ಯಕ್ಕೆ ಬರುತ್ತಿರುವವರ ಮೇಲೆ…

1 5 6 7
Translate »