ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು
ಮೈಸೂರು

ಕೋವಿಡ್-19 ಭೀತಿ: ಮನೆಗಳಿಗೆ ಹಿಂದಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳು

March 15, 2020

ಮೈಸೂರು, ಮಾ.14(ಆರ್‍ಕೆ) ಕೋವಿಡ್-19 ಮಾರಣಾಂತಿಕ ರೋಗದ ಭೀತಿಯಿಂ ದಾಗಿ ಸರ್ಕಾರ ಒಂದು ವಾರ ಕಾಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿರುವ ಹಿನ್ನೆಲೆ ಯಲ್ಲಿ ಮೈಸೂರು ಜಿಲ್ಲೆಯಾ ದ್ಯಂತ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಸತಿ ಶಾಲೆ, ವಿವಿಧ ಇಲಾಖೆಗಳ ಹಾಸ್ಟೆಲ್ ವಿದ್ಯಾರ್ಥಿ ಗಳನ್ನು ಇಂದು ಅವರ ಮನೆಗಳಿಗೆ ಸುರಕ್ಷಿತ ವಾಗಿ ಕಳುಹಿಸಿಕೊಡ ಲಾಯಿತು. ಜಿಲ್ಲಾಧಿ ಕಾರಿಗಳ ಸೂಚನೆ ಮೇರೆಗೆ ಮೈಸೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್‍ಗಳ ವಿದ್ಯಾರ್ಥಿ ಗಳು (ಹೊರ ದೇಶ ಮತ್ತು ರಾಜ್ಯದವ ರನ್ನು ಹೊರತು ಪಡಿಸಿ) ಖಾಸಗಿ ಸಂಘ ಸಂಸ್ಥೆ, ಟ್ರಸ್ಟ್‍ಗಳು ನಡೆಸುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿದ್ದ ವಿದ್ಯಾರ್ಥಿ ಗಳನ್ನು ಸಹ ತಂತಮ್ಮ ಊರುಗಳಿಗೆ ಕಳುಹಿಸಲಾಯಿತು.

ಉತ್ತರ ಕರ್ನಾಟಕದ ಜಿಲ್ಲೆಗಳು, ದೂರದ ಊರುಗಳ ಹಾಗೂ ಎಸ್‍ಎಸ್‍ಎಲ್‍ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆ ಎದುರಿಸು ವವರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಸ್ಟೆಲ್ ವಿದ್ಯಾರ್ಥಿಗಳನ್ನೂ ಇಂದು ಬೆಳಿಗ್ಗೆ ಮುಚ್ಚಳಿಕೆಗೆ ಸಹಿ ಮಾಡಿಸಿಕೊಂಡು ಹಾಸ್ಟೆಲ್ ವಾರ್ಡನ್‍ಗಳು ಕಳುಹಿಸಿಕೊಟ್ಟರು.

ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾ ತರ ಅಭಿವೃದ್ಧಿ ಇಲಾಖೆಯಡಿ ಮೈಸೂರು ಜಿಲ್ಲೆಯಲ್ಲಿರುವ 92 ವಿದ್ಯಾರ್ಥಿ ನಿಲಯ ಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 2000 ವಿದ್ಯಾರ್ಥಿಗಳ ಪೈಕಿ ಒಟ್ಟು 600 ಮಂದಿ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ ಎಂದು ಇಲಾಖೆ ಜಿಲ್ಲಾ ಅಧಿಕಾರಿ ಬಿಂದ್ಯಾ ಅವರು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಪರೀಕ್ಷೆ ಬರೆಯಬೇಕಾಗಿರುವುದರಿಂದ ಉಳಿದುಕೊಂಡಿರುವ ವಿದ್ಯಾರ್ಥಿಗಳನ್ನು ಖಾಲಿ ಇರುವ ಕೊಠಡಿಗಳಲ್ಲಿ (ಒಂದು ಕೊಠ ಡಿಗೆ ಒಬ್ಬರಂತೆ) ಇರಿಸಿ ಅವರಿಗೆ ಪ್ರತ್ಯೇಕ ಸೋಪು, ಟವಲ್‍ಗಳನ್ನು ಒದಗಿಸಿ ಪ್ರತೀ 2 ಗಂಟೆಗೊಮ್ಮೆ ಕೈಗಳನ್ನು ತೊಳೆದು ಕೊಂಡು ಸ್ವಚ್ಛವಾಗಿರುವಂತೆ ಸಲಹೆ ನೀಡ ಲಾಗಿದೆ ಎಂದು ಅವರು ತಿಳಿಸಿದರು.

ಒಂದು ವೇಳೆ ಹಾಸ್ಟೆಲ್ ವಾಸಿಗಳಿಗೆ ಕೆಮ್ಮು, ನೆಗಡಿ, ಶೀತ, ಜ್ವರ, ಮೈ ಕೈ ನೋವು ಕಾಣಿಸಿಕೊಂಡಿರುವುದು ಗೊತ್ತಾದರೆ, ತಕ್ಷಣ ಆ ವಿದ್ಯಾರ್ಥಿ ನಿರಾಕರಿಸಿದರೂ ಹತ್ತಿ ರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯ ಬೇಕೆಂದು ಹಾಸ್ಟೆಲ್ ವಾರ್ಡನ್‍ಗಳಿಗೆ ತಾಕೀತು ಮಾಡಲಾಗಿದೆ ಎಂದೂ ತಿಳಿಸಿದರು.

ಅದೇ ರೀತಿ ಸಮಾಜ ಕಲ್ಯಾಣ ಇಲಾಖೆ, ಡಿ. ದೇವರಾಜ ಅರಸು ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಹಾರಾಣಿ ಪಿಯು ಮತ್ತು ಪದವಿ ಕಾಲೇಜು ಗಳ ಹಾಸ್ಟೆಲ್ ವಿದ್ಯಾರ್ಥಿನಿಯರನ್ನೂ ಸಹ ಮುಂದಿನ ಸೂಚನೆವರೆಗೆ ತಮ್ಮ ಮನೆಗಳಿಗೆ ಕಳುಹಿಸಲಾಯಿತು.

 

 

 

 

 

 

 

Translate »