ಮೈಸೂರಿನಲ್ಲಿ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಅಳವಡಿಕೆ
ಮೈಸೂರು

ಮೈಸೂರಿನಲ್ಲಿ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಅಳವಡಿಕೆ

March 15, 2020

ವಂಶಾವಳಿ, ಹಾಲಿನ ಇಳುವರಿ, ಮಾಲೀಕರ ವಿವರ ದಾಖಲಿಸಲು ಪಶುಪಾಲನಾ ಇಲಾಖೆಯಿಂದ ಹಸು-ಎಮ್ಮೆಗಳಿಗೆ ವಿಶಿಷ್ಟ ಮಾಹಿತಿ ಸಾಧನ

ಮೈಸೂರು, ಮಾ. 14- ಜನಸಂಖ್ಯೆಯಂತೆ ಸಾಕು ಪ್ರಾಣಿಗಳ ಮಾಹಿತಿ ಸಂಗ್ರಹಿಸಿ ಆಹಾರ, ಆರೋಗ್ಯ ರಕ್ಷಣೆಗಾಗಿ ಯೋಜನೆ ತಯಾರಿಸಲು ಅನುಕೂಲ ವಾಗುವಂತೆ ರಾಜ್ಯ ಸರ್ಕಾರ ಜಾನುವಾರುಗಳಿಗೆ ಇನಾಫ್ (Information Network for Animal Productivity and Health) ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ವಿನೂತನ ಯೋಜನೆ ಯನ್ನು ಜಾರಿಗೊಳಿಸುತ್ತಿದೆ.

ಜನಸಂಖ್ಯೆಗನುಗುಣವಾಗಿ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗಾಗಿ ರಾಜ್ಯ ಬಜೆಟ್‍ನಲ್ಲಿ ಅಗತ್ಯವಿ ರುವ ಅನುದಾನ ಮೀಸಲಿರಿಸಿ ಖರ್ಚು ಮಾಡು ವಂತೆಯೇ ರೈತರ ಜೀವನಾಡಿಯಾಗಿರುವ ಜಾನು ವಾರುಗಳಿಗೂ ಅಗತ್ಯವಿರುವ ಮೇವು, ಆಶ್ರಯ, ಆರೋಗ್ಯಕ್ಕಾಗಿ ಕಾರ್ಯಕ್ರಮ ರೂಪಿಸಲು ನಿಖರ ಮಾಹಿತಿಗಾಗಿ ‘ಪ್ರಾಣಿ ಉತ್ಪಾದಕತೆ ಮತ್ತು ಆರೋಗ್ಯ ಮಾಹಿತಿ ಜಾಲ’ (Information Network for Animal Productivity and Health) ರಾಷ್ಟ್ರೀಯ ಯೋಜನೆಯನ್ನು ಜಾರಿಗೆ ತರಲಾಗಿದೆ.

ವಂಶಾವಳಿ ದಾಖಲಾತಿ, ಹಾಲಿನ ಇಳುವರಿ, ಮಾಲೀಕರನ್ನು ಗುರುತಿಸುವುದು, ಉನ್ನತ ಹೋರಿ, ಹಸುಗಳ ಸಂತಾನೋತ್ಪತ್ತಿ ಮತ್ತು ಪೋಷಣೆ, ವಿವಿಧ ಪ್ರಭೇದ, ತಳಿ, ಗ್ರಾಮ, ಜಿಲ್ಲಾವಾರು ರೋಗ ಹರಡು ವಿಕೆಯ ಸಮೀಕ್ಷೆ, ಆರೋಗ್ಯಕರ ಉತ್ಪಾದಕ ಹಸುಗಳ ಮೂಲಕ ರೈತರ ಆದಾಯ ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಕೃತಕ ಗರ್ಭಧಾರಣೆ ಸೇವೆ, ಸಮತೋಲನ ಆಹಾರ ಪೂರೈಕೆ, ಪಶು ಆಸ್ಪತ್ರೆ ಮತ್ತು ಪ್ರಯೋಗಾಲಯಗಳನ್ನು ಒದಗಿಸಿ ಜಾನುವಾರುಗಳ ಆರೋಗ್ಯ ಸಂರಕ್ಷಿಸುವ ಸಲುವಾಗಿ ಪಶುಸಂಗೋಪನಾ ಮತ್ತು ಪಶುಪಾಲನಾ ಇಲಾಖೆ ತನ್ನ ಮಾಹಿತಿ ಜಾಲವನ್ನು ಬಲಪಡಿಸುತ್ತಿದೆ.

ಏಪ್ರಿಲ್ 15ರಂದು ಕೇಂದ್ರ ಸರ್ಕಾರವು ಜಾನು ವಾರುಗಳ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ದೇಶಾದ್ಯಂತ ಪ್ರಕಟಿಸಲಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ಜಾನು ವಾರುಗಳ ಸಮೀಕ್ಷೆ ನಡೆಸಿ ಎಷ್ಟು ಪ್ರಮಾಣದ ಲಸಿಕೆ ಅಗತ್ಯವಿದೆ ಎಂಬುದನ್ನು ಖಚಿತಪಡಿಸಬೇಕಾಗಿದೆ.

ಆ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ ಪಶುಪಾಲನಾ ಇಲಾಖೆ ಮೈಸೂರು ಜಿಲ್ಲೆಯಲ್ಲಿ ಇನಾಫ್ ಟ್ಯಾಗ್ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಕಾರ್ಯ ಆರಂಭಿಸಿದೆ. ಹಸು-ಎಮ್ಮೆಗಳ ಕಿವಿಗೆ ವಿಶಿಷ್ಟ ಗುರುತಿನ ಸಂಖ್ಯೆ (ಯೂನಿಕ್ ಐಡೆಂಟಿ ಫಿಕೇಷನ್ ನಂಬರ್)ಯೊಂದಿಗೆ ಟ್ಯಾಗ್ ಅನ್ನು ಇಲಾಖೆ ಸಿಬ್ಬಂದಿ ಅಳವಡಿಸುತ್ತಿದ್ದಾರೆ.

ಅದರಲ್ಲಿ ಜಾನುವಾರು ವಯಸ್ಸು, ತಳಿ, ಮಾಲೀಕನ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಸರ್ಕಾರದಿಂದ ಪಡೆದಿರುವ ಸೌಲಭ್ಯ, ವಿಮೆ ಮಾಡಿಸಿದ್ದರೆ ಸಂಖ್ಯೆ ಇತ್ಯಾದಿ ಅಗತ್ಯ ಮಾಹಿತಿಗಳನ್ನು ದಾಖಲಿಸಲಾಗು ತ್ತದೆ. ಅದಕ್ಕೆಂದೇ ಪ್ರತ್ಯೇಕ ಸಾಫ್ಟ್‍ವೇರ್ ಸಿದ್ಧಪಡಿ ಸಿದ್ದು, ಜಾನುವಾರಿನ ಯೂನಿಕ್ ಐಡೆಂಟಿಟಿ ಸಂಖ್ಯೆ ಬಳಸಿದಲ್ಲಿ ಅದರ ಸಂಪೂರ್ಣ ಮಾಹಿತಿ ದೊರೆಯು ವಂತೆ ಸಾಫ್ಟ್‍ವೇರ್ ಅಭಿವೃದ್ಧಿಪಡಿಸಲಾಗಿದೆ.

ಮೈಸೂರು ತಾಲೂಕೊಂದರಲ್ಲೇ ಈಗಾಗಲೇ 35,000 ಜಾನುವಾರುಗಳಿಗೆ ಯುಐ ಸಂಖ್ಯೆ ಹೊಂದಿ ರುವ ಟ್ಯಾಗ್ (ಕಿವಿ ಓಲೆ) ಅನ್ನು ಅಳವಡಿಸಲಾಗಿದ್ದು, ಮಾರ್ಚ್ ಅಂತ್ಯದಲ್ಲಿ ಜಿಲ್ಲೆಯಾದ್ಯಂತ ಜಾನು ವಾರುಗಳಿಗೆ ಈ ಕಿವಿ ಓಲೆ ಹಾಕಲಾಗುವುದು.

ಚಿಕಿತ್ಸೆ, ವ್ಯಾಕ್ಸಿನೇಷನ್, ಶಸ್ತ್ರಚಿಕಿತ್ಸೆ, ಗರ್ಭಧಾರಣೆ, ಸಾಲ ಸೌಲಭ್ಯ, ಪರಿಹಾರ, ವಿಮೆ, ದನಗಳ ಜಾತ್ರೆ ಯಲ್ಲಿ ಭಾಗವಹಿಸಲು ಈ ವಿಶಿಷ್ಟ ಗುರುತಿನ ಸಂಖ್ಯೆ ಅತ್ಯಗತ್ಯವಾಗುತ್ತದೆ.

ರೋಗ ರುಜಿನಗಳಿಂದ, ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಅಥವಾ ಅಪಘಾತಗಳಿಂದ ಜಾನುವಾರು ಗಳು ಮರಣ ಹೊಂದಿದರೆ ಪರಿಹಾರದ ಹಣ ಪಡೆಯಲು ಅಥವಾ ಜಾನುವಾರುಗಳ ಮೇಲೆ ಬ್ಯಾಂಕ್ ಸಾಲ ಪಡೆಯಲು ಇನಾಫ್ ಟ್ಯಾಗ್ ಕಡ್ಡಾಯವಾಗಿದೆ.

ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮನುಷ್ಯರಿಗೆ ‘ಆಧಾರ್’ ಕಾರ್ಡ್ ಎಷ್ಟು ಮುಖ್ಯವೋ ಹಾಗೆಯೇ ದನ-ಕರು, ಎತ್ತು, ಎಮ್ಮೆ, ಕೋಣಗಳ ಪಾಲನೆ-ಪೋಷಣೆ, ಚಿಕಿತ್ಸೆ, ಸಾಲ ಪಡೆಯಲು, ಇನ್ಷೂರೆನ್ಸ್, ನಷ್ಟ ಪರಿಹಾರ ಪಡೆಯಲು ಇನಾಫ್ ಟ್ಯಾಗ್ (ವಿಶಿಷ್ಟ ಗುರುತಿನ ಸಂಖ್ಯೆ)ಯನ್ನು ಜಾನು ವಾರುಗಳಿಗೆ ಹಾಕಿಸು ವುದೂ ಅಷ್ಟೇ ಮುಖ್ಯವಾಗಿರುವು ದರಿಂದ ಪಶುಪಾಲನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಮ್ಮ ಗ್ರಾಮಗಳಿಗೆ ಬಂದಾಗ ಜಾನುವಾರುಗಳಿಗೆ ಇನಾಫ್ ಟ್ಯಾಗ್ ಹಾಕಿಸಿಕೊಳ್ಳಬೇಕು.
-ಡಾ.ಎಸ್.ಸಿ.ಸುರೇಶ, ಸಹಾಯಕ ನಿರ್ದೇಶಕ, ಪಶುಪಾಲನಾ ಇಲಾಖೆ

 

ಎಸ್.ಟಿ.ರವಿಕುಮಾರ್

Translate »