ಶ್ರೀರಂಗಪಟ್ಟಣ, ಮಾ. 14- ತಾಲೂ ಕಿನ ಬೆಳಗೊಳ ಬಳಿ ಕಾವೇರಿ ತೀರದಲ್ಲಿ ರುವ 11ನೇ ಶತಮಾನದ ಶ್ರೀನಿವಾಸ ಸನ್ನಿಧಿಯಲ್ಲಿ ಶನಿವಾರ ಅಷ್ಠಬಂಧನ ಮಹಾ ಸಂಪ್ರೋಕ್ಷಣಾ ಪೂಜೆ ಭಕ್ತಿ ಭಾವದಿಂದ ನೆರವೇರಿತು.
ಮೈಸೂರಿನ ಒರಿಸ್ಸಾ ಮೈಸೂರು ಸಂಘ ದಿಂದ ಪುನರುಜ್ಜೀವನಗೊಳಿಸಲ್ಪಟ್ಟಿರುವ ಈ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯೇ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಇವರ ಜೊತೆ ಗ್ರಾಮದ ಯಜಮಾನರೂ ಸೇರಿಕೊಂ ಡರು. ಮೊದಲಿಗೆ ಬೆಳಗೊಳ ಶ್ರೀ ಪರಾಶರ ಗುರುಕುಲಂ ಮಕ್ಕಳಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ಮೈಸೂರಿನ ಮಹಾರಾಜ ಕಾಲೇಜಿನ ಪ್ರೊ. ಸತ್ಯನಾರಾಯಣ ಮತ್ತು ಅವರ ತಂಡದಿಂದ ಬೆಳಿಗ್ಗೆ 9 ಗಂಟೆ ಸುಮಾ ರಿನಲ್ಲಿ ಪ್ರಾರಂಭವಾದ ಅಷ್ಠಬಂಧನ ಮಹಾ ಸಂಪ್ರೋಕ್ಷಣಾ ಪೂಜೆ ಮಧ್ಯಾಹ್ನ 12.30ರವರೆಗೆ ನಡೆಯಿತು.
ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಈ ಮಧ್ಯೆ ಅಧಿತಿ ಗೋಪಿನಾಥ್ ಅವರ ಭರತನಾಟ್ಯ ಭಕ್ತಿ ಸನ್ನಿಧಿಯಲ್ಲಿ ಕಲಾಧಾರೆ ಹರಿಸಿದಂತಿತ್ತು.
11ನೇ ಶತಮಾನದೆಂದು ಹೇಳಲಾಗುವ ಈ ಪುರಾತನ ದೇವಸ್ಥಾನ ಶಿಥಿಲಾವಸ್ಥೆ ತಲುಪಿತ್ತು. ಈ ದೇವಾಲಯವನ್ನು 2006 ರಲ್ಲಿ ಒರಿಸ್ಸಾ ಮೈಸೂರು ಸಂಘದಿಂದ ಡಿ.ಕೆ. ಮಿಶ್ರ ನೇತೃತ್ವದಲ್ಲಿ ಪುನರುಜ್ಜೀವನ ಕಾರ್ಯ ಆರಂಭವಾಯಿತು.
ಇಲ್ಲಿ ಮೊದಲ ದರ್ಶನದಲ್ಲೇ ಭಕ್ತಿಭಾವ ಬಿಂಬಿಸುವ ಬೋಗ ನಂದೀಶ್ವರ, ಶ್ರೀದೇವಿ -ಭೂದೇವಿ, ಶ್ರೀನಿವಾಸಮೂರ್ತಿ, ವೇದಾಂತ ದೇಶಿಕ ಮೂರ್ತಿಗಳಿವೆ. ಇನ್ನೂ ಕೆಲ ಮೂರ್ತಿಗಳು ಇರುವ ಕುರುಹುಗಳು ಕಾಣುತ್ತಿವೆ. ಕೆಲವು ನಶಿಸಿಹೋಗಿವೆ. ಆಗಮ, ಭಾರತೀಯ ಪುರಾತತ್ವ ನಿಯಮಾವಳಿ ಪ್ರಕಾರ ಈ ದೇವಸ್ಥಾನದ ಸಂರಕ್ಷಣಾ ಕಾರ್ಯವನ್ನು ಒರಿಸ್ಸಾ ಮೈಸೂರು ಸಂಘ ಕೈಗೊಂಡಿದ್ದು, ಪೂಜಾ, ಪುನಸ್ಕಾರಗಳು ಧಾರ್ಮಿಕ ನಿಯಮದಂತೆ ನಡೆಯುತ್ತಿವೆ.
ಇಂದು ನಡೆದ ಅಷ್ಠಬಂಧನ ಮಹಾ ಸಂಪ್ರೋಕ್ಷಣಾ ಪೂಜೆಯಲ್ಲಿ ಬೆಳಗೊಳ ಶ್ರೀ ಪರಾಶರ ಗುರುಕುಲಂನ ವಿದ್ವಾನ್ ರಾಘವಾಚಾರ್, ಡಿ.ಕೆ.ಮಿಶ್ರಾ, ನಾರಾ ಯಣ ಹೃದಯಾಲಯದ ನಿರ್ದೇಶಕ ಡಾ. ಮುರಳೀಧರ್ ಹಾಗೂ ಗ್ರಾಮದ ಯಜ ಮಾನರುಗಳಲ್ಲದೆ ಒರಿಸ್ಸಾ ಮೈಸೂರು ಸಂಘದ ಪದಾಧಿಕಾರಿಗಳು ಭಾಗವಹಿಸಿ ದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರ ವಿಧಿಸಿದ್ದ ನಿರ್ಬಂಧ ಹಾಗೂ ನಿಯಮಗಳಡಿಯೇ ಸರಳ ಪೂಜೆ ಪುನ ಸ್ಕಾರ ನೆರವೇರಿತು. ಪೂಜೆ ವೇಳೆ ಮೈಕ್ ಬಳಸಿಲ್ಲ. ಯಾವುದೇ ರೀತಿಯ ಅಬ್ಬರ-ಆಡಂಬರವಿರಲಿಲ್ಲ. ಒಟ್ಟಾರೆ ಭಕ್ತಿ ಪ್ರಧಾನವಾಗಿ ಪೂಜೆಯನ್ನು ಸರಳವಾಗಿ ನೆರವೇರಿಸಲಾಯಿತು.