ಪರಿಶ್ರಮಕ್ಕೆ ಫಲ ಪಡೆಯುವುದೇ ಪರೀಕ್ಷಾ ಪ್ರಕ್ರಿಯೆ
ಮೈಸೂರು

ಪರಿಶ್ರಮಕ್ಕೆ ಫಲ ಪಡೆಯುವುದೇ ಪರೀಕ್ಷಾ ಪ್ರಕ್ರಿಯೆ

March 15, 2020

ಮೈಸೂರು, ಮಾ.14- ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಭಯಗೊಳ್ಳಲು ಅದೇನೂ ಭೂತವಲ್ಲ. ಧೈರ್ಯದಿಂದ, ವೀರಾವೇಶ ದಿಂದ ಎದುರಿಸಲು ಅದು ಮಹಾ ಯುದ್ಧವೂ ಅಲ್ಲ. ವರ್ಷವಿಡೀ ಕಷ್ಟಪಟ್ಟು ಓದಿ ಪರಿಶ್ರಮದಿಂದ ಕಲಿತ ಜ್ಞಾನದ ಫಲವನ್ನು ಅಂಕಗಳ ಮೂಲಕ ಪಡೆಯು ವುದೇ ಪರೀಕ್ಷೆ ಎಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು.

ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನುಮಯ್ಯ ಬಾಲಕಿ ಯರ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿ ಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತ ವಾಗಿ ಆಯೋಜಿಸಿದ್ದ ಗಣಿತ ಪ್ರಪಂಚದ ಮಹತ್ವದ ದಿನಗಳಲೊಂದಾದ ಅಂತರ ರಾಷ್ಟ್ರೀಯ ಪೈ ದಿನಾಚರಣೆ ಹಾಗೂ ಪರೀ ಕ್ಷಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮ ದಲ್ಲಿ ಮಾತನಾಡಿದ, ಅವರು ನಮ್ಮಲ್ಲಿ ಬಹ ಳಷ್ಟು ಮಂದಿ ತಿಳಿವಳಿಕೆವುಳ್ಳ ದೊಡ್ಡವರೆ ನಿಸಿಕೊಂಡವರೇ ವಿದ್ಯಾರ್ಥಿಗಳಿಗೆ ಧೈರ್ಯ ದಿಂದ ಪರೀಕ್ಷೆಯನ್ನು ಎದುರಿಸಿ ಎಂದು ಪದೇಪದೆ ಹೇಳಿ ಮೊದಲೇ ಅಧೀರರಾಗಿ ರುವ ವಿದ್ಯಾರ್ಥಿಗಳು ಇನ್ನಷ್ಟು ಭಯ ಭೀತರಾಗುವಂತೆ ಮಾಡುತ್ತಾರೆ. ಇದು ಸರಿಯಲ್ಲ. ವಾಸ್ತವವಾಗಿ ಪರೀಕ್ಷೆ ಎದುರಿ ಸಲು ವಿದ್ಯಾರ್ಥಿಗಳಿಗೆ ಬಹುಮುಖ್ಯವಾಗಿ ಬೇಕಿರುವುದು ಧೈರ್ಯಕಿಂತ ಹೆಚ್ಚಾಗಿ ಆತ್ಮವಿಶ್ವಾಸವೆಂದು ತಿಳಿಸಿದರು.

ರೈತ ತನ್ನ ಹೊಲ ಅಥವಾ ಗದ್ದೆಯನ್ನು ಉತ್ತು-ಬಿತ್ತಿ ಅಗತ್ಯವಾದ ಒಳ್ಳೆ ಗೊಬ್ಬರ ಹಾಕಿ ವ್ಯವಸ್ಥಿವಾಗಿ ನೀರು ಹಾಯಿಸಿ ಬೆಳೆವ ಬೆಳೆಗೆ ರೋಗ ರುಜಿನ ಬಾರದಂತೆ ಫಸಲು ಒಣಗದಂತೆ ಮತ್ತು ಕೈತಪ್ಪಿ ಹೋಗದಂತೆ ಸಂರಕ್ಷಿಸಿ ವರ್ಷ ಪೂರ್ತಿ ಶ್ರಮಪಟ್ಟು ಕೃಷಿ ಮಾಡಿ ವರ್ಷದ ಕೊನೆಯಲ್ಲಿ ಬೆಳೆದ ಬೆಳೆಯ ಫಸಲಿನ ಫಲವನ್ನು ವ್ಯರ್ಥವಾಗದಂತೆ ಪಡೆದು ಸುಗ್ಗಿಯಲ್ಲಿ ಸಂಭ್ರಮಿಸುವಂತೆ ವಿದ್ಯಾ ರ್ಥಿಯ ಕಲಿಕೆಯ ಕೃಷಿಯೂ ಆಗಿರುತ್ತದೆ. ರೈತ ತನ್ನ ಕೃಷಿಗೆ ಪ್ರತಿಫಲ ಪಡೆಯುವಂ ತೆಯೇ ವಿದ್ಯಾರ್ಥಿಯಾದವರು ಶಾಲೆ ಎಂಬ ಭೂಮಿಯಲ್ಲಿ ಸರಿಯಾದ ರೀತಿಯಲ್ಲಿ ಕಲಿಕೆಯ ಕೃಷಿಮಾಡಿದ್ದರೆ, ಮಾಡಿದ್ದೇನೆಂಬ ಆತ್ಮ ವಿಶ್ವಾಸ ಇದ್ದರೆ ಅದಕ್ಕೆ ತಕ್ಕ ಪ್ರತಿಫಲ ಪರೀಕ್ಷೆ ಯಲ್ಲಿ ದೊರೆತೇ ದೊರೆಯುತ್ತದೆ. ಹಾಗಾಗಿ ಎಂಥಾ ಪರೀಕ್ಷೆಯೇ ಆಗಲಿ ಅದನ್ನು ಎದು ರಿಸಲು ಧೈರ್ಯ ಬೇಕಾಗಿಲ್ಲ. ಪರೀಕ್ಷೆಯನ್ನು ಗೆದ್ದೇ ಗೆಲ್ಲುವೆನೆಂಬ ಆತ್ಮ ವಿಶ್ವಾಸದ ಶಕ್ತಿ ಯೊಂದಿದ್ದರೆ ಸಾಕು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಓರಿಗಾಮಿ ಕಲಾವಿದ ಹೆಚ್. ವಿ. ಮುರ ಳೀಧರ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಗಣಿತ ಶಿಕ್ಷಕ ಬಿ. ಐ. ಅನಿಲ್ ಕುಮಾರ್ ಅವರು ಪೈ ದಿನಾಚರಣೆಯ ಹಿನ್ನಲೆಯಲ್ಲಿ ಗಣಿತದೊಡನೆ ಅವಿನಾ ಭಾವ ಸಂಬಂಧ ಹೊಂದಿರುವ ಪೈ ಪ್ರಮೇ ಯದ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ.ಕಾವೇರಿಯಮ್ಮ ಮಾತನಾಡಿ ವಿದ್ಯಾರ್ಥಿಗಳು ಓದಿನಷ್ಟೇ ಅರೋಗ್ಯ ಕಾಪಾಡಿಕೊಳ್ಳುವುದರತ್ತ ಹೆಚ್ಚಿನ ನಿಗಾ ವಹಿಸಬೇಕೆಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಹೆಚ್.ಎಸ್.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಹೊಮ್ಮ ಮಂಜುನಾಥ್, ಶಿಕ್ಷಕರಾದ ಹೆಚ್.ಪಿ. ಹರೀಶ್, ಶ್ರೀನಿವಾಸಮೂರ್ತಿ, ಎಂ. ರಮೇಶ್, ಕೆ.ಎಂ.ಮಂಗಳಗೌರಮ್ಮ ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಸಿದ್ದರಾಗಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಲೇಖನ ಸಾಮಗ್ರಿಗಳನ್ನು ವಿತರಿಸಿ ಶುಭಕೋರಲಾಯಿತು.

Translate »