ವೈದ್ಯಕೀಯ, ಅರೆ ವೈದ್ಯಕೀಯ ಶಿಕ್ಷಣಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಬಲು ಪ್ರಯೋಜನಕಾರಿ
ಮೈಸೂರು,ಮಾ.14(ಎಂಟಿವೈ)- ವೈದ್ಯ ಕೀಯ ಶಿಕ್ಷಣದಲ್ಲಿ ಪರಿಣಾಮಕಾರಿ ಕಲಿ ಕೆಗೆ ಹಾಗೂ ಅತ್ಯುತ್ತಮ ಪ್ರಾಯೋಗಿಕ ಅನು ಭವ ಪಡೆಯಲು ಅನುಕೂಲವಾಗುವಂತೆ `ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆಮಿ’ಯು ಜೆಎಸ್‍ಎಸ್ ಆಸ್ಪತ್ರೆಯ ಹಳೆ ಕಟ್ಟಡದಲ್ಲಿ ಸ್ಥಾಪಿಸಿರುವ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ ವನ್ನು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಪ್ರಧಾನ ಕಾರ್ಯದರ್ಶಿ ಡಾ.ರಾಕೇಶ್ ಕುಮಾರ್ ವತ್ಸ್ ಶನಿವಾರ ಉದ್ಘಾಟಿಸಿದರು.
ಆಸ್ಪತ್ರೆಯ ಹಳೆ ಕಟ್ಟಡದ 3ನೇ ಮಹಡಿ ಯಲ್ಲಿ ಹವಾನಿಯಂತ್ರಿತ ಸೌಲಭ್ಯದೊಂ ದಿಗೆ ಅತ್ಯಾಧುನಿಕ ಯಂತ್ರೋಪಕರಣ ಗಳನ್ನು ಒಳಗೊಂಡಿರುವ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ದಲ್ಲಿ ಹೆರಿಗೆ ಮಾಡಿ ಸುವ ಬಗೆ, ಹೃದಯಾಘಾತಕ್ಕೆ ಒಳಗಾದವ ರಿಗೆ ತುರ್ತು ಚಿಕಿತ್ಸೆ ನೀಡುವ ವಿಧಾನ ಸೇರಿದಂತೆ ವಿವಿಧ ಅಂಗಾಂಗಗಳ ತಪಾಸ ಣೆಯ ಪ್ರಾತ್ಯಕ್ಷಿಕೆಯನ್ನು ವೈದ್ಯಕೀಯ ವಿದ್ಯಾರ್ಥಿಗಳು ಪಡೆಯಬಹುದಾಗಿದೆ.
ಶನಿವಾರ ಬೆಳಿಗ್ಗೆ ನಡೆದ ಸರಳ ಕಾರ್ಯ ಕ್ರಮದಲ್ಲಿ `ಸ್ಕಿಲ್ ಅಂಡ್ ಸಿಮ್ಯುಲೇಷನ್ ಕೇಂದ್ರ’ವನ್ನು ಉದ್ಘಾಟಿಸಿದ ಡಾ.ರಾಕೇಶ್ ಕುಮಾರ್ ವತ್ಸ್ ಮಾತನಾಡಿ, ವ್ಯಕ್ತಿಯೊಬ್ಬ ಹೃದ್ರೋಗದಿಂದ ದಿಢೀರ್ ಕುಸಿದುಬಿದ್ದಾಗ ಜೀವ ಉಳಿಸಲು ತಕ್ಷಣ ಕೈಗೊಳ್ಳಬೇಕಾದ ಚಿಕಿತ್ಸಾ ವಿಧಾನಗಳ ಬಗ್ಗೆ ವೈದ್ಯಕೀಯ ಶಿಕ್ಷಣಾ ರ್ಥಿಗಳಿಗೆ ಈ ಕೇಂದ್ರದಲ್ಲಿ ತರಬೇತಿ ನೀಡ ಲಾಗುವುದು. ಅರೆ ವೈದ್ಯಕೀಯ ಕೋರ್ಸ್ ಗಳ ವಿದ್ಯಾರ್ಥಿಗಳಿಗೂ ಈ ಕೇಂದ್ರ ಅನು ಕೂಲಕಾರಿ. ಈಗಾಗಲೇ ವೈದ್ಯರಾಗಿರು ವವರೂ ಇಲ್ಲಿನ ಯಾಂತ್ರಿಕ ಕೌಶಲವನ್ನು ಬಳಸಿಕೊಂಡು ಹೆಚ್ಚಿನ ಅಧ್ಯಯನ ಮಾಡಬಹುದು ಎಂದರು.
ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಅತ್ಯಾಧುನಿಕ ಉಪಕರಣ ಗಳ ಸೌಲಭ್ಯ ಹೊಂದಿರುವುದರಿಂದ ಇಲ್ಲಿ ದೊರೆಯುವ ಶಿಕ್ಷಣ ಪರಿಣಾಮಕಾರಿ. ಇಲ್ಲಿ ರೂಪುಗೊಳ್ಳುವ ವೈದ್ಯ ಪದವೀಧರರ ಜ್ಞಾನದ ಮಟ್ಟ ಉನ್ನತ ಎಂದು ಪ್ರಶಂಸಿಸಿದರು.
ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಎಂಸಿಐ ಸೂಚನೆ ಯಂತೆ ಜೆಎಸ್‍ಎಸ್ ವೈದ್ಯಕೀಯ ಕಾಲೇ ಜಿನ ಭಾಗವಾಗಿ ಈ ಸಿಮ್ಯುಲೇಷನ್ ಕೇಂದ್ರ ಆರಂಭಿಸಲಾಗಿದೆ. ನಮ್ಮ ವಿದ್ಯಾರ್ಥಿಗಳಷ್ಟೇ ಅಲ್ಲದೇ ಇತರೆ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳೂ ಈ ಸೌಲಭ್ಯ ಬಳಸಿಕೊಳ್ಳ ಬಹುದು ಎಂದರು. ಸಿಮ್ಯುಲೇಶನ್ ಸೆಂಟರ್‍ನ ಸಂಯೋಜಕಿ ಡಾ.ಎಸ್.ಅರ್ಚನಾ ಮಾತ ನಾಡಿ, ಎಂಸಿಐ ವೈದ್ಯಕೀಯ ಕಾಲೇಜು ಗಳಲ್ಲಿ ಇಂತಹ ಕೇಂದ್ರ ಇರಬೇಕಾದ್ದನ್ನು ಕಡ್ಡಾಯ ಗೊಳಿಸಿದೆ. ಅಂತಾರಾಷ್ಟ್ರೀಯ ಗುಣ ಮಟ್ಟಕ್ಕೆ ಅನುಗುಣವಾಗಿಯೇ ಈ `ಸ್ಕಿಲ್ ಅಂಡ್ ಸಿಮ್ಯುಲೇಶನ್ ಸೆಂಟರ್’ ಕಾರ್ಯಾರಂಭ ಮಾಡಿದೆ ಎಂದರು.
ವೈದ್ಯ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿ ಕೆಗೆ ಇದು ಬಹಳ ಪ್ರಯೋಜನಕಾರಿ. ರೋಗ ತಪಾಸಣೆ ವಿಧಾನ ಸರಿಯಿಲ್ಲದಿ ದ್ದರೆ ಯಂತ್ರವೇ ಆ ತಪ್ಪಿನತ್ತ ಗಮನ ಸೆಳೆ ಯುತ್ತದೆ. ನಮ್ಮ ಕಾಲೇಜಿನ ವಿದ್ಯಾರ್ಥಿ ಗಳಿಗೆ ಇಲ್ಲಿ ತರಬೇತಿ ಉಚಿತ. ಬೇರೆ ವೈದ್ಯ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ವೃತ್ತಿಪರರಿಗೆ ತರಬೇತಿ ಪಡೆಯಲು ಶುಲ್ಕ ನಿಗದಿ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ತರಬೇತಿದಾರರು ಇಲ್ಲಿ ತರಬೇತಿ ನೀಡುತ್ತಾರೆ. ಸದ್ಯ 10 ತರಬೇತುದಾರ ರಿದ್ದಾರೆ ಎಂದರು. ಜೆಎಸ್‍ಎಸ್ ಮಹಾ ವಿದ್ಯಾಪೀಠದ ಸಿಇಒ ಡಾ.ಸಿ.ಜಿ.ಬೆಟ ಸೂರಮಠ್, ಜೆಎಸ್‍ಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್. ಬಸವನಗೌಡಪ್ಪ, ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋ ಧನಾ ಅಕಾಡೆ ಮಿಯ ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಡಾ.ಸುರೀಂದ್ರ ಸಿಂಗ್, ಕುಲ ಸಚಿವ ಡಾ.ಬಿ.ಮಂಜುನಾಥ ಮತ್ತಿತರರಿದ್ದರು.
`ಕೊರೊನಾ: 1 ವಾರ ಕಾರ್ಯಕ್ರಮಗಳಿಂದ ದೂರ’
ದೇಶಾದ್ಯಂತ ಕೊರೊನಾದಂತಹ ಅಪಾಯಕಾರಿ ವೈರಸ್ ಹಾವಳಿ ಇದೆ. ಹಿಂದೆ ಕಾಲರಾ ಬಂದು ಜನರು ಬಹಳ ಭಯಗೊಂಡಿದ್ದರು. ಈಗಲೂ ಅದೇ ಬಗೆಯ ಸಂದರ್ಭ ಎದುರಾಗಿದೆ. ಕೊರೊನಾ ವೈರಸ್ ವಿಚಾರದಲ್ಲಿ ಭಾರೀ ಮುಂಜಾಗ್ರತೆ ಅಗತ್ಯ. ಉದಾಸೀನ ಮಾಡದೆ ಸರಕಾರ ಹಾಗೂ ಆರೋಗ್ಯ ಇಲಾಖೆಯ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ನಾವೂ ಒಂದು ವಾರÀ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಿದ್ದೇವೆ.
-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸುತ್ತೂರು ಕ್ಷೇತ್ರ