ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ: ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
ಮೈಸೂರು

ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ: ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ

March 15, 2020

ಬೆಂಗಳೂರು: ಇಂದು ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಇಂದು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಯಾವುದೇ ಹೊಸ ಕೊರೊನಾ ಪಾಸಿ ಟಿವ್ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊಸದಾಗಿ 11 ಮಂದಿ ಸೋಂಕು ಶಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಲಾ ಗಿದೆ. ಒಟ್ಟು 32 ಮಂದಿ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡ ಲಾಗುತ್ತಿದೆ. ಬೆಂಗಳೂರಿನಲ್ಲಿ 9, ಹಾಸನದಲ್ಲಿ 4, ದಕ್ಷಿಣ ಕನ್ನಡ ದಲ್ಲಿ 7 ಮಂದಿ, ಬಳ್ಳಾರಿಯಲ್ಲಿ ಒಬ್ಬರು, ಬೀದರ್ ನಲ್ಲಿ ಇಬ್ಬರು, ಕಲಬುರಗಿಯಲ್ಲಿ ನಾಲ್ಕು, ಚಿಕ್ಕಮಗಳೂರಿನಲ್ಲಿ 2, ಕೊಡಗಿನಲ್ಲಿ 1 ಹಾಗೂ ಉಡುಪಿಯಲ್ಲಿ ಇಬ್ಬರು ಶಂಕಿತ ರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ ಐವರಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕಲಬುರಗಿಯಲ್ಲಿ ಕೊರೋನಾ ವೈರಸ್‍ಗೆ ಬಲಿಯಾದ ವ್ಯಕ್ತಿಯ  ಮಗನ ಸಂದರ್ಶನ ಮಾಡಿದ ಮೂವರು ಪತ್ರಕರ್ತರ ಮೇಲೂ ನಿಗಾ!
ಕಲಬುರಗಿ,ಮಾ.14-ಕರ್ನಾಟಕದ ಕಲಬುರಗಿಯಲ್ಲಿ ಕೊರೋನಾ ವೈರಸ್‍ಗೆ ವೃದ್ಧರೊಬ್ಬರು ಬಲಿ ಯಾಗಿದ್ದರು. ಈ ಹಿನ್ನೆಲೆಯಲ್ಲಿ ಹಲವು ರಾಜ್ಯ, ರಾಷ್ಟ್ರೀಯ ಮಾಧ್ಯಮಗಳು ಮೃತ ವೃದ್ಧನ ಮಗನ ಜೊತೆ ಸಂದರ್ಶನ ನಡೆಸಿದ್ದು ಹೀಗಾಗಿ ಮೂವರು ಪತ್ರಕರ್ತರ ಮೇಲೂ ತೀವ್ರ ನಿಗಾ ವಹಿಸಲಾಗಿದೆ.

ಕಳೆದ ಮಂಗಳವಾರ ರಾತ್ರಿ ಕೋವಿಡ್-19 ನಿಂದ ಮೃತಪಟ್ಟ 76 ವರ್ಷದ ವ್ಯಕ್ತಿಯ ಮಗನನ್ನು ಗುರುವಾರ ಸಂದರ್ಶನ ಮಾಡಿದ್ದಕ್ಕಾಗಿ ಮೂವರು ಪತ್ರಕರ್ತರನ್ನು ಅವರನ್ನು ಗೃಹ ಬಂಧನದಲ್ಲಿಡಲಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್ ತಿಳಿಸಿದ್ದಾರೆ.”ಮುನ್ನೆಚ್ಚರಿಕೆ ಕ್ರಮವಾಗಿ, ಮೂವರು ಮಾಧ್ಯಮ ವ್ಯಕ್ತಿಗಳು ತಮ್ಮ ಮನೆಗಳಲ್ಲಿ ಉಳಿಯುವಂತೆ ನಾವು ಸಲಹೆ ನೀಡಿದ್ದೇವೆ ಮತ್ತು ಮೃತ ವೃದ್ಧನ ಮಗನಿಗೆ ಕೊರೋನಾ ವೈರಸ್ ಸೋಂಕು ತಗುಲಿದೆಯಾ ಎಂಬುದರ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಶರತ್ ಹೇಳಿದರು.

ಪತ್ರಕರ್ತರಿಗೂ ಜಿಲ್ಲಾಧಿಕಾರಿ ಸೂಚನೆ
ಮೈಸೂರು,ಮಾ.14-ಕೊರೊನಾ ಶಂಕಿತ ವ್ಯಕ್ತಿಯ ಸಂದರ್ಶನ ಹಾಗೂ ಫೆÇೀಟೋ/ವೀಡಿಯೋ ಮಾಡಲು ಪತ್ರಕರ್ತರು ತೆರಳಿದರೆ, ಅಂತಹ ಪತ್ರಕರ್ತರನ್ನೂ ಸಹ ಮನೆಯಲ್ಲಿ ದಿಗ್ಬಂಧನ(home quಚಿಡಿಚಿಟಿಣiಟಿe)ದಲ್ಲಿ 14 ದಿನಗಳ ಕಾಲ ಇರಿಸಲಾಗುತ್ತದೆ. ಆದ್ದರಿಂದ ಯಾರೂ ಸಹ ಅಂತಹ ಪ್ರಯತ್ನ ಮಾಡಬಾರದು. ಕೊರೊನಾ ಬಗ್ಗೆ ಯಾವುದೇ ಪ್ರಕರಣ ಪತ್ತೆಯಾದರೂ ಸಹ ಸರ್ಕಾರವೇ ಮಾಹಿತಿ ನೀಡುತ್ತದೆ ಎಂದು ಮೈಸೂರು ಡಿಸಿ ಆದೇಶಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 13 ಮಂದಿಗೆ ಹಂದಿ ಜ್ವರ!
ಕೋಲ್ಕತ್ತಾ: ದೇಶಾದ್ಯಂತ ಕೊರೊನಾ ವೈರಸ್ ಹರಡುವ ಭೀತಿ ಎದುರಾಗಿದ್ದರೆ, ಇತ್ತ ಪಶ್ಚಿಮ ಬಂಗಾಳದಲ್ಲಿ 13 ಮಂದಿಗೆ ಹಂದಿ ಜ್ವರ ಕಾಣಿಸಿ ಕೊಂಡಿದೆ. ಮಣಿಪುರದಲ್ಲಿ ಓರ್ವ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ, ಹೂಗ್ಲಿ ಜಿಲ್ಲೆಯಲ್ಲಿ 10 ವರ್ಷದ ಹುಡುಗಿಗೆ, ಒಡಿಶಾ ಮೂಲದ 23 ತಿಂಗಳ ಹಸುಗೂಸಿಗೆ ಹಂದಿ ಜ್ವರ ಕಾಣಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಲ್ಲಿನ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ ದ್ದಾರೆ. ಇದಷ್ಟೇ ಅಲ್ಲದೇ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ 10 ಜನರಿಗೆ ಹಂದಿ ಜ್ವರ ದೃಢ ಪಟ್ಟಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸ ಲಾಗುತ್ತಿದೆ ಹಾಗೂ ಆರೋಗ್ಯ ಅಧಿಕಾರಿಗಳು ನಿರಂತರ ನಿಗಾ ವಹಿಸಿದ್ದಾರೆ.

Translate »