Tag: Coronavirus

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್
ಮೈಸೂರು

5ನೇ ದಿನ ಆಹಾರ ವಿತರಣೆ: ಎಂ ಕೆ ಸೋಮಶೇಖರ್

March 28, 2020

ಮೈಸೂರು, ಮಾ.28(SPN)-ಮಾಜಿ ಶಾಸಕ ಎಂ ಕೆ ಸೋಮಶೇಖರ್ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು. ಗುಣಶೇಖರ್, ವಿಶ್ವ,ನಾಗಮಹದೇವ,ರಮೇಶ್,ಗುರು,ರಾಜು ಬಂಡೆಂಪಾ ಕಾಶೆಂಪೂರ್ ಮತ್ತಿತರರು ಉಪಸ್ಥಿತರಿದ್ದರು. ಎಲ್ಲರಿಗೂ ಆರೋಗ್ಯ ಅಧಿಕಾರಿಗಳನ್ನೂ ಕರೆಯಿಸಿ ಕೋವಿಡ್ -19ರ ಬಗ್ಗೆ ಜಾಗೃತಿ ಮೂಡಿಸಿ ಇನ್ನು ಮುಂದೆ ಬೀದಿಗಳಲ್ಲಿ ಊಟ ಕೊಡಲಾಗುವುದಿಲ್ಲ.ಜಿಲ್ಲಾಡಳಿತ,ಪಾಲಿಕೆ ಗುರುತಿಸಿದ ಗಂಜಿ ಕೇಂದ್ರಗಳಲ್ಲಿ ಊಟ ಕೊಡಲಾಗುವುದು ಎಂದು ಮನವರಿಕೆ ಮಾಡಿದರು.200ಕ್ಕೂ ಹೆಚ್ಚು ಜನರನ್ನು…

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ
ಮೈಸೂರು

ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ

March 27, 2020

ಮೈಸೂರು, ಮಾ.27(ಎಸ್ ಬಿಡಿ)- ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಟಿ.ಕೆ.ಲೇಔಟ್, ಗಂಗೋತ್ರಿ ಬಡಾವಣೆಯ ಮಾರುತಿ ದೇವಾಲಯ ರಸ್ತೆಯಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ನೆರವು ಕೇಂದ್ರ ತೆರೆಯಲಾಗಿದ್ದು, ನಿರ್ಬಂಧ ಅವಧಿ ಮುಗಿಯುವವರೆಗೂ ಮುಂದುವರೆಯಲಿದೆ. ಅನಿವಾರ್ಯ ಸಂದರ್ಭ ಹೊರತುಪಡಿಸಿ ಜನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಹೋಟೆಲ್ ಗಳನ್ನೂ ಮುಚ್ಚಿಸಲಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿರಾಶ್ರಿತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ….

ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್
ಮೈಸೂರು

ಕಾಂಗ್ರೆಸ್ ಶಾಸಕರಿಂದ ತಲಾ ಒಂದು ಲಕ್ಷ ರೂ ’ಕರೋನಾ’ ದೇಣಿಗೆ: ಡಿಕೆ ಶಿವಕುಮಾರ್

March 27, 2020

ಬೆಂಗಳೂರು: ಕೊರೋನಾ ಮಹಾಮಾರಿ ಸೋಂಕು ನಿಯಂತ್ರಣಕ್ಕಾಗಿ ಕಾಂಗ್ರೆಸ್ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆಯನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಶಾಸಕ ಅಜಯ್ ಸಿಂಗ್ ಸೇರಿದಂತೆ ಇತರೆ ನಾಯಕರು ಉಪಸ್ಥಿತರಿದ್ದರು. ಸಭೆ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾವು…

ಜರ್ಮನಿ ಪ್ರಜೆಗಳಿಗೆ ಪರೀಕ್ಷೆ
ಮೈಸೂರು

ಜರ್ಮನಿ ಪ್ರಜೆಗಳಿಗೆ ಪರೀಕ್ಷೆ

March 27, 2020

ಮೈಸೂರು,ಮಾ.27(ಎಂಟಿವೈ) – ಕಲಾಮಂದಿರ ಆವರಣದಲ್ಲಿ ಶುಕ್ರವಾರ ಜರ್ಮನಿ ಪ್ರಜೆಗಳನ್ನು ಆರೋಗ್ಯ ಒಳಪಡಿಸಲಾಯಿತು. ದಕ್ಷಿಣ ‘ಭಾರತದಲ್ಲಿರುವ ಎಲ್ಲಾ ಜರ್ಮನಿ ಪ್ರಜೆಗಳನ್ನು ಅವರ ನಾಡಿಗೆ ಅವರ ಮರಳಿ ಕಳುಹಿಸುವ ಸಲುವಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯದಲ್ಲಿರುವ ಪ್ರಜೆಗಳನ್ನು ಹುಡುಕಿ ತಪಾಸಣೆಗೆ ಒಳಪಡಿಸಿ ಜರ್ಮನಿ ರಾಯಬಾರಿ ಕಚೇರಿ ಮೂಲಕ ಅವರ ದೇಶಕ್ಕೆ ವಾಪಸ್ಸು ಕಳುಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನೆಲಸಿರುವ ಜರ್ಮನಿ ಪ್ರಜೆಗಳನ್ನು ಹುಡುಕಿ ಕಲಾಮಂದಿರ ಆವರಣದಲ್ಲಿ ತಪಾಸಣೆ ಒಳಪಡಿಸಲಾಯಿತು. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ…

ಕೊರೊನಾ ಭೀತಿ: ಕೊನೆಗೂ ಎಚ್ಚೆತ್ತ ಗ್ರಾಮಸ್ಥರು
ಮೈಸೂರು

ಕೊರೊನಾ ಭೀತಿ: ಕೊನೆಗೂ ಎಚ್ಚೆತ್ತ ಗ್ರಾಮಸ್ಥರು

March 27, 2020

ಗ್ರಾಮಕ್ಕೆ ದಿಗ್ಭಂದನ ಹೊಸಬರಿಲ್ಲ ಪ್ರವೇಶ ಇಸ್ಪೀಟ್ ಆಡಿದರೆ ಸಾವಿರ ದಂಡ ಮೈಸೂರು,ಮಾ.27( ಎಂಟಿವೈ)- ಮಹಾಮಾರಿ ಕೊರೊನಾ ಭೀಕರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮಸ್ಥರು ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಕೊನೆಗೂ ಮುಂಜಾಗ್ರತಾ ಕ್ರಮಕೈಗೊಂಡು ಗ್ರಾಮಕ್ಕೆ ದಿಗ್ಭಂದನ ವಿದಿಸಿದ್ದಾರೆ. ವಿವಿದ ಕೆಲಸ ಅರಸಿ ಬೆಂಗಳೂರು ಸೇರಿದಂತೆ ನಗರ , ಪಟ್ಟಣಕ್ಕೆ ವಲಸೆ ಹೋಗಿದ್ದ ಹಲವು ಕುಟುಂಬಗಳು ನೊವೆಲ್ ಕೊರೊನಾ ವೈರಸ್ ಗೆ ಹೆದರಿ ಕುಟುಂಬದ ಸದಸ್ಯರೊಂದಿಗೆ ಮರಳಿ ಗ್ರಾಮಗಳತ್ತ ಮುಖಮಾಡುತ್ತಿದ್ದಾರೆ. ಹೊರಗಿನಿಂದ ಬಂದವರು ಕೊರೊನಾ…

ಮೈಸೂರಲ್ಲಿ 3ನೇ ಕೊರೊನಾ ಧೃಡ: ಕಾರ್ಮಿಕರಿಗೆ ಹೊರಬಾರದಂತೆ ಸೂಚನೆ
ಮೈಸೂರು

ಮೈಸೂರಲ್ಲಿ 3ನೇ ಕೊರೊನಾ ಧೃಡ: ಕಾರ್ಮಿಕರಿಗೆ ಹೊರಬಾರದಂತೆ ಸೂಚನೆ

March 27, 2020

ಮೈಸೂರು, ಮಾ.27(ಆರ್ ಕೆಬಿ)- ಮೈಸೂರಲ್ಲಿ 3ನೇ ವ್ಯಕ್ತಿಗೆ ಕೊರೋನಾ ವೈರಸ್ ಧೃಡವಾಗಿದ್ದು, ಆತ ಕೆಲಸ ಮಾಡುತ್ತಿದ್ದ ಕಾರ್ಖಾನೆಯಲ್ಲಿ ಇತರ ಕಾರ್ಮಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ಕಾರ್ಮಿಕರನ್ನು ಮನೆಯಿಂದ ಹೊರಬಾರದಂತೆ ನಿರ್ಬಂಧಿಸಲಾಗಿದೆ. ಕೊರೋನಾ ವೈರಸ್ ಪತ್ತೆಯಾದ ಮೂರನೇ ವ್ಯಕ್ತಿ ನಂಜನಗೂಡಿನ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜುಬೀಲಿಯಂಟ್ ಕಾರ್ಖಾನೆಯಲ್ಲಿ ಸುಮಾರು ವರ್ಷಗಳಿಂದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಹಾಗೂ ಕಾರ್ಖಾನೆಯ ಔಷಧಿ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರಿಂದ ಸೋಂಕು ತಗುಲಿರಬಹುದು ಎನ್ನಲಾಗಿದೆ. ಈತ ಔಷಧಿ ಕಂಪನಿಯ…

4ನೇ ದಿನ ಆಹಾರ ವಿತರಣೆ
ಮೈಸೂರು

4ನೇ ದಿನ ಆಹಾರ ವಿತರಣೆ

March 27, 2020

ಮೈಸೂರು, ಮಾ.27: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಮೈಸೂರು ರೈಲ್ವೆ ನಿಲ್ದಾಣದ ಬಳಿ 500 ಕ್ಕೂ ಹೆಚ್ಚಿನ ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ ಉಚಿತ ನೀರು ಊಟ ಮಾಸ್ಕ್ ವಿತರಣೆ ಮಾಡಲಾಯಿತು. ಗುಣಶೇಖರ್,ವಿಶ್ವ,ಅರ್ಜುನ್,ನಾಗಮಹದೇವ,ರಮೇಶ್,ಗುರು,ಅರ್ಜುನ,ಶಂಕರ್,ಕೆ ಬ್ಲಾಕ್ ಪಾಪು ಮತ್ತಿತರರು ಪಾಲ್ಗೊಂಡಿದ್ದರು. ಹಾಗೂ ಮೈಸೂರಿನ ಯೂತ್ ಹಾಸ್ಟೆಲ್ ನಲ್ಲಿ ತಂಗಿದ್ದ 50ಕ್ಕೂ ಹೆಚ್ಚು ಜನರಿಗೆ ಮಾಸ್ಕ್ ಊಟ ನೀರು ವಿತರಿಸಲಾಯಿತು.

ಮಾನ್ಯ ಮುಖ್ಯಮಂತ್ರಿ ಗಳ ವಿಡಿಯೋ ಕಾನ್ಪೆರೆನ್ಸ್ ನ‌ ಮುಖ್ಯಂಶಗಳು
ಮೈಸೂರು

ಮಾನ್ಯ ಮುಖ್ಯಮಂತ್ರಿ ಗಳ ವಿಡಿಯೋ ಕಾನ್ಪೆರೆನ್ಸ್ ನ‌ ಮುಖ್ಯಂಶಗಳು

March 26, 2020

ಬೆಂಗಳೂರು ಮಾರ್ಚ್ 26: ಮಾನ್ಯ ಪ್ರಧಾನ ಮಂತ್ರಿ‌ ಅವರ ಸೂಚನೆಯಂತೆ 21 ದಿನಗಳ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ‌ ನೀಡಲಾಯಿತು. ಲಾಕ್ ಡೌನ್ ಮೀರಿ ಹೊರ‌ಬರುವವರನ್ನು ಅರೆಸ್ಟ್ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲೆಯ ಬಾರ್ಡರ್ ಗಳನ್ನು ಸೀಲ್ ಮಾಡುವಂತೆ ಸೂಚನೆ ನೀಡಿಲಾಗಿದೆ. ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಡಿಸ್ಟಲರಿ‌ ಕಂಪನಿಗಳ ಜೊತೆ ಸ್ಯಾನಿಟೈಸರ್ ಉತ್ಪಾದನೆ‌ ಮಾಡಲು ಸೂಚನೆ ನೀಡಲಾಗಿದ್ದು ಕೆಲವು…

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್ 15 ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು: ಸಚಿವ ಬಿ.ಸಿ.ಪಾಟೀಲ್
ಮೈಸೂರು

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಏಪ್ರಿಲ್ 15 ರವರೆಗೆ ಲಾಕ್‍ಡೌನ್‍ಗೆ ಸಹಕರಿಸಬೇಕು: ಸಚಿವ ಬಿ.ಸಿ.ಪಾಟೀಲ್

March 26, 2020

ಬೆಂಗಳೂರು, ಮಾ. 26; ರಾಜ್ಯದಲ್ಲಿ ಲಾಕ್‍ಡೌನ್ ಪರಿಸ್ಥಿತಿಯನ್ನು ಯಾರೂ ಸಹ ದುರುಪಯೋಗಪಡಿಸಿಕೊಳ್ಳುವುದಾಗಲೀ ಕಾಳಸಂತೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುವುದಾಗಲಿ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಖಡಕ್ ಸೂಚನೆ ಕೊಟ್ಟಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಗತ್ಯವಸ್ತುಗಳ ಖರೀದಿಗೆ ಹಾಗೂ ತುರ್ತು ಕೆಲಸಕ್ಕೆ ಹೋಗುವವರಿಗೆ ಮತ್ತು ವಾಹನಗಳಿಗೆ ಪರವಾನಿಗೆ ನೀಡಬೇಕು. ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ, ಸ್ಕೇರ್ ಸಿಟಿ ಆಗದಂತೆ ನೋಡಿಕೊಳ್ಳಬೇಕು, ರಾಜ್ಯದ ಜನರಿಗೆ ಮೂಲಭೂತ ಅಗತ್ಯ…

ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ  ಡಿ.ಕೆ. ಶಿವಕುಮಾರ್ ಒತ್ತಾಯ
ಮೈಸೂರು

ಕೊರೊನಾ ನಿಯಂತ್ರಣ: ಸರ್ವ ಪಕ್ಷ ಸಭೆ ಕರೆಯಲು ಬಿಎಸ್‌ವೈಗೆ ಡಿ.ಕೆ. ಶಿವಕುಮಾರ್ ಒತ್ತಾಯ

March 26, 2020

ಬೆಂಗಳೂರು ಮಾರ್ಚ್ 26 (ಕೆಎಂಶಿ): ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ವಪಕ್ಷಗಳ ಸಭೆ ಕರೆಯಬೇಕೆಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಆಗ್ರಹಿಸಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರ ಕರೆ ಮಾಡ್ತಿದ್ದಾರೆ, ಅಲ್ಲದೇ ಅನೇಕ ಸಂಘಟನೆಗಳ ಮುಖ್ಯಸ್ಥರು ಕರೆ ಮಾಡಿ, ಪೊಲೀಸರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವೈರಸ್ ತಡೆಗಟ್ಟಲು ಬದಲು ಸಂಬಂಧಪಟ್ಟ ಸಚಿವರುಗಳಲ್ಲಿ ಸಮನ್ವಯತೆ ಇಲ್ಲದೆ, ಪ್ರಚಾರಕ್ಕಾಗಿ ಪೈಪೋಟಿ ಮಾಡುತ್ತಿದ್ದಾರೆ. ಪ್ರತಿಯೊಬ್ಬ ನಾಗರೀಕ ಕೂಡ ಮನೇಲಿ ಇರಬೇಕು…

1 3 4 5 6 7
Translate »