ಜರ್ಮನಿ ಪ್ರಜೆಗಳಿಗೆ ಪರೀಕ್ಷೆ
ಮೈಸೂರು

ಜರ್ಮನಿ ಪ್ರಜೆಗಳಿಗೆ ಪರೀಕ್ಷೆ

March 27, 2020

ಮೈಸೂರು,ಮಾ.27(ಎಂಟಿವೈ) – ಕಲಾಮಂದಿರ ಆವರಣದಲ್ಲಿ ಶುಕ್ರವಾರ ಜರ್ಮನಿ ಪ್ರಜೆಗಳನ್ನು ಆರೋಗ್ಯ ಒಳಪಡಿಸಲಾಯಿತು.

ದಕ್ಷಿಣ ‘ಭಾರತದಲ್ಲಿರುವ ಎಲ್ಲಾ ಜರ್ಮನಿ ಪ್ರಜೆಗಳನ್ನು ಅವರ ನಾಡಿಗೆ ಅವರ ಮರಳಿ ಕಳುಹಿಸುವ ಸಲುವಾಗಿ ದಕ್ಷಿಣ ಭಾರತದ ಎಲ್ಲಾ ರಾಜ್ಯದಲ್ಲಿರುವ ಪ್ರಜೆಗಳನ್ನು ಹುಡುಕಿ ತಪಾಸಣೆಗೆ ಒಳಪಡಿಸಿ ಜರ್ಮನಿ ರಾಯಬಾರಿ ಕಚೇರಿ ಮೂಲಕ ಅವರ ದೇಶಕ್ಕೆ ವಾಪಸ್ಸು ಕಳುಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ನೆಲಸಿರುವ ಜರ್ಮನಿ ಪ್ರಜೆಗಳನ್ನು ಹುಡುಕಿ ಕಲಾಮಂದಿರ ಆವರಣದಲ್ಲಿ ತಪಾಸಣೆ ಒಳಪಡಿಸಲಾಯಿತು.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಎಚ್.ಪಿ.ಜನಾ‘ರ್ನ್, ದಕ್ಷಿಣ ‘ಭಾರತದ ಕರ್ನಾಟಕ, ತಮಿಳುನಾಡಿ, ಆಂಧ್ರ, ತೆಲಂಗಾಣ, ಕೇರಳದಲ್ಲಿರುವ 180 ಜರ್ಮನಿ ಪ್ರಜೆಗಳನ್ನು ವಾಪಸ್ಸು ಕಳುಹಿಸುವ ಸಲುವಾಗಿ ಆರೋಗ್ಯ ತಪಾಸಣೆ ನಡೆಸುತ್ತಿದ್ದೇವೆ. ಮೈಸೂರಿನಲ್ಲಿ 20 ಮಂದಿಯನ್ನು ಮತ್ತೆ ಹಚ್ಚಿ ಅವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿದ್ದೇವೆ. ಅವರಿಗೆ ಯಾವುದೇ ಕೋವಿಡ್-19 ಲಕ್ಷಣಗಳಿಲ್ಲ ಎಂದು ತಿಳಿಸಿದರು.

ದಕ್ಷಿಣ ‘ಭಾರತದಲ್ಲಿ ಹೀಗೆ ಗುರುತಿಸಿರುವ ಜರ್ಮನಿ ಪ್ರಜೆಗಳನ್ನು ಬೆಂಗಳೂರಿಗೆ ಕಳುಹಿಸಲಾಗುತ್ತದೆ. ಅಲ್ಲಿ ಖಾಸಗಿ ಹೋಟೆಲ್‌ನಲ್ಲಿ ತಂಗಲಿದ್ದಾರೆ. ಬಳಿಕ ಜರ್ಮನಿ ರಾಯಬಾರಿ ಕಚೇರಿಯ ಸಹಾಯದ ಮೂಲಕ ಜರ್ಮನಿಯ ವಿಶೇಷ ವಿಮಾನದ ಮೂಲಕ ತಮ್ಮ ನಾಡಿಗೆ ತೆರಳಿದ್ದಾರೆ ಎಂದು ಜನಾ‘ರ್ನ್ ತಿಳಿಸಿದ್ದಾರೆ.

Translate »