Tag: Dasara Gajapayana

ಗಜ ಪಯಣಕ್ಕೆ ಅದ್ಧೂರಿ ಚಾಲನೆ
ಮೈಸೂರು

ಗಜ ಪಯಣಕ್ಕೆ ಅದ್ಧೂರಿ ಚಾಲನೆ

September 3, 2018

ಹನಗೋಡು:  ಮಂಗಳವಾದ್ಯ ನಿನಾದ, ಸಹಸ್ರಾರು ಜನರ ಹರ್ಷೋದ್ಘಾರದ ನಡುವೆ ಮೊದಲ ತಂಡದ ಗಜ ಪಯಣ ಅದ್ಧೂರಿಯಾಗಿ ನೆರವೇರಿತು. ಇದರೊಂದಿಗೆ ಮೈಸೂರು ದಸರಾ ಮಹೋತ್ಸವದ ಸಾಂಪ್ರದಾಯಿಕ ಆಚರಣೆಗಳಿಗೂ ವಿಧ್ಯುಕ್ತ ಚಾಲನೆ ದೊರಕಿತು. ಹುಣಸೂರು ತಾಲೂಕಿನ ವೀರನಹೊಸ ಹಳ್ಳಿ ಗ್ರಾಮದ ಸಮೀಪ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಪ್ರವೇಶ ದ್ವಾರದ ಬಳಿ ಅರ್ಜುನ ನೇತೃತ್ವದ ಧನಂಜಯ, ಗೋಪಿ, ವಿಕ್ರಮ ಹಾಗೂ ಸರಳ ಗಜ ಪಡೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಪುಷ್ಪಾರ್ಚನೆ ಮಾಡುವ ಮೂಲಕ ಗಜ ಪಯಣಕ್ಕೆ ಚಾಲನೆ ನೀಡಿದರು….

ಮೊದಲ ತಂಡದ ಗಜಪಡೆಯ ವಿವರ
ಮೈಸೂರು

ಮೊದಲ ತಂಡದ ಗಜಪಡೆಯ ವಿವರ

September 3, 2018

ಮೈಸೂರು: ವಿಶ್ವ ವಿಖ್ಯಾತ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಅರ್ಜುನ ನೇತೃತ್ವದ 6 ಆನೆಗಳ ತಂಡ ಮೈಸೂರಿಗೆ ಆಗಮಿಸಿವೆ. ಇವುಗಳ ನೇತೃತ್ವ ವಹಿಸಿರುವ 58 ವರ್ಷದ ಗಂಡಾನೆ ಅರ್ಜುನ(5870 ಕೆಜಿ) ನನ್ನು 1968ರಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, ಈ ಆನೆ ಕಳೆದ 18 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ಇದನ್ನು ಬಳ್ಳೆ ಆನೆ ಶಿಬಿರದಿಂದ ಮೈಸೂರಿಗೆ ಕರೆ ತರಲಾಗಿದೆ. 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಅರ್ಜುನನನ್ನು ಮಾವುತ ವಿನು ಮತ್ತು…

ಇಂದು ದಸರಾ ಗಜಪಡೆ ಮೊದಲ ತಂಡದ ಪಯಣ
ಮೈಸೂರು

ಇಂದು ದಸರಾ ಗಜಪಡೆ ಮೊದಲ ತಂಡದ ಪಯಣ

September 2, 2018

ಮೈಸೂರು:  ಮೈಸೂರಿನ ದಸರಾ ಮಹೋತ್ಸವದ ಮುನ್ನುಡಿಯಾಗಿರುವ ಗಜ ಪಯಣಕ್ಕೆ ನಾಳೆ(ಸೆ.2) ಚಾಲನೆ ಸಿಗಲಿದೆ. ಹುಣಸೂರು ತಾಲೂಕಿನ ವೀರನಹೊಸ ಹಳ್ಳಿಯಲ್ಲಿ ಬೆಳಿಗ್ಗೆ 10ಕ್ಕೆ, ಅರ್ಜುನನ ನೇತೃತ್ವದಲ್ಲಿ ಆಗಮಿಸುತ್ತಿರುವ 6 ಆನೆಗಳ ಮೊದಲ ತಂಡಕ್ಕೆ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇ ಗೌಡರು ಪೂಜೆ ಸಲ್ಲಿಸುವ ಮೂಲಕ ಗಜ ಪಯಣಕ್ಕೆ ಸಾಂಪ್ರದಾಯಿಕ ಚಾಲನೆ ನೀಡಲಿದ್ದಾರೆ. ಈ ಬಾರಿಯ ಗಜ ಪಯಣ ತಡವಾಗಿರುವ ಹಿನ್ನೆಲೆಯಲ್ಲಿ ಆನೆಗಳನ್ನು ವೀರನಹೊಸಹಳ್ಳಿಯಿಂದ ನೇರವಾಗಿ ಮೈಸೂರಿನ ಅರಣ್ಯ ಭವನದ ಆವರಣಕ್ಕೆ ಕರೆತಂದು, ಮರುದಿನ ಅಂದರೆ ಸೆ.3ರಂದು ಅರಮನೆ…

ಈ ಬಾರಿ ವೀರನಹೊಸಹಳ್ಳಿ ಗೇಟ್‍ನಿಂದ ದಸರಾ ಗಜಪಯಣ
ಮೈಸೂರು

ಈ ಬಾರಿ ವೀರನಹೊಸಹಳ್ಳಿ ಗೇಟ್‍ನಿಂದ ದಸರಾ ಗಜಪಯಣ

August 30, 2018

ಹುಣಸೂರು:  ನಾಡ ಹಬ್ಬ ದಸರಾ ಮಹೋತ್ಸವಕ್ಕೆ ನಾಂದಿ ಹಾಡುವ ಗಜಪಯಣವನ್ನು ಹಿಂದಿನಂತೆ ವೀರನಹೋಸಹಳ್ಳಿ ಗೇಟ್ ಬಳಿಯೇ ಚಾಲನೆ ನೀಡಿ ಸಾಂಪ್ರದಾಯಿಕ ಪದ್ಧತಿ ಮುಂದುವರೆಸುವಂತೆ ಶಾಸಕ ಹೆಚ್. ವಿಶ್ವನಾಥ್ ಅಧಿಕಾರಿಗಳಿಗೆ ಸೂಚಿಸಿದರು. ಇಂದು ಬೆಳಿಗ್ಗೆ ನಾಗರಹೊಳೆ ರಾಷ್ಟ್ರಿಯ ಉದ್ಯಾನವನದ ವೀರನಹೊಸಹಳ್ಳಿ ವಲಯಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 9 ಗಂಟೆಗೆ ನಡೆಯುವ ಗಜಪಯಣದ ಪೂರ್ವ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ರಾಜ ಮಹಾರಾಜರ ಕಾಲದಲ್ಲಿ ದಸರಾ ಮಹೋತ್ಸವ ಮೆರವಣಿಗೆಯ ಕೇಂದ್ರ ಬಿಂದುಗಳಾದ ಆನೆಗಳನ್ನು ಮೈಸೂರಿಗೆ…

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ
ಮೈಸೂರು

ನಾಗಾಪುರ ಹಾಡಿಯಿಂದ ಆ.23ಕ್ಕೆ ದಸರಾ ಗಜಪಯಣ

August 7, 2018

ಮೊದಲ ತಂಡದಲ್ಲಿ ಅರ್ಜುನ ಸೇರಿ ಆರು ಆನೆ ಜಿಲ್ಲಾಡಳಿತದಿಂದ ಆನೆಗಳಿಗೆ ಪೂಜೆಗೆ ಸಿದ್ಧತೆ ಮೈಸೂರು:  ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ 12 ಆನೆಗಳಲ್ಲಿ ಗಜಪಡೆಯ ನಾಯಕ ಅರ್ಜುನ ಸೇರಿದಂತೆ ಆರು ಆನೆಗಳ ಮೊದಲ ತಂಡ ಆ.23ರಂದು ಹುಣಸೂರು ತಾಲೂಕಿನ ನಾಗಾಪುರ ಹಾಡಿಯಿಂದ ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪಯಣ ಆರಂಭಿಸಲಿವೆ. ಪ್ರತಿ ವರ್ಷದಂತೆ ಈ ಬಾರಿಯೂ ನಾಗರಹೊಳೆ ಅಭಯಾರಣ್ಯಕ್ಕೆ ಹೊಂದಿಕೊಂಡಂತಿರುವ ನಾಗಾಪುರ ಹಾಡಿ ಬಳಿಯ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ಆ.23ರಂದು ಬೆಳಿಗ್ಗೆ 11ಕ್ಕೆ ಮೈಸೂರು ಜಿಲ್ಲಾ ಉಸ್ತುವಾರಿ…

Translate »