ರಾಮನಾಥಪುರ: ಬುಧವಾರ ರಾತ್ರಿ ರಾಮನಾಥಪುರ ಹೋಬಳಿಯ ಹಲವು ಗ್ರಾಮಗಳಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದೆ. ಪರಿಣಾಮ ಹೋಬಳಿಯ ಹಲವು ಗ್ರಾಮಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಹೋಬಳಿಯ ರಾಮನಕೊಪ್ಪಲು, ಹಂಡ್ರಂಗಿ, ತರಿಗಳಲೆ, ಕೂಡಲೂರು, ಬಿಳಗುಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬಿರುಗಾಳಿ, ಆಲಿಕಲ್ಲು ಸಮೇತ ಧಾರಾಕಾರ ಸುರಿದ ಮಳೆ ಅಪಾರ ಹಾನಿ ಉಂಟು ಮಾಡಿದೆ. ಹೋಬಳಿಯ ಕೆಲವು ಗ್ರಾಮ ಗಳಲ್ಲಿ ಬಿರು ಗಾಳಿಯ ರಭಸಕ್ಕೆ ಹಲವು ಮನೆಗಳ ಶೀಟ್ ಛಾವಣಿ, ಹೆಂಚುಗಳು…
ಜಿಲ್ಲೆಯಲ್ಲಿ ಮನೆಗಳವು, ವರ್ತಕರ ಲೂಟಿ
May 3, 2019ಹಾಸನ: ರಾಜ್ಯದಲ್ಲಿ ಈಗ ಎಲ್ಲೆಲ್ಲೂ ಸರಗಳವು, ಮನೆಗಳವು ಸುದ್ದಿಗಳೇ ಕೇಳಿಬರುತ್ತಿವೆ. ಮೊನ್ನೆ ಗುರು ವಾರ ಮೈಸೂರಿನಲ್ಲಿ ಮುಂಜಾನೆ ಕೇವಲ ಒಂದೂವರೆ ಗಂಟೆ ಅವಧಿಯಲ್ಲೇ ಪಲ್ಸರ್ ಬೈಕ್‍ನಲ್ಲಿ ಬಂದ ಖದೀಮ ರಿಬ್ಬರು ನಗರದ 5 ಕಡೆ ಸರಗಳವು ನಡೆಸಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿಯೂ ಮನೆಗಳವು, ಸರಗಳವು ಪ್ರಕರಣಗಳು ನಿರಂತರ ನಡೆ ಯುತ್ತಲೇ ಇವೆ. ಅರಸೀಕೆರೆ, ಚನ್ನರಾಯ ಪಟ್ಟಣದಲ್ಲಿ ಈ ವಾರದಲ್ಲಿ 2 ಮನೆಗಳವು ನಡೆದಿದ್ದರೆ, ಮತ್ತೊಂದೆಡೆ ಹಗಲಲ್ಲೇ ಚಿನ್ನ ವರ್ತಕನಿಂದ ಕಳ್ಳರು 15 ಲಕ್ಷ ರೂ. ದೋಚಿದ್ದಾರೆ. ಚ.ಪಟ್ಟಣ:…
ಮನೆ ಬೀಗ ಮುರಿದು 1.22 ಲಕ್ಷ ರೂ. ಕಳವು
May 3, 2019ಅರಸೀಕೆರೆ : ತಾಲೂಕಿನ ಬಾಣಾವರ ಪಟ್ಟಣದ ಕೋಟೆ ಬ್ರಾಹ್ಮಣರ ಬೀದಿಯಲ್ಲಿನ ಶ್ರೀಸಾಯಿಕೃಪ ಮನೆಯ ಬೀಗ ಮುರಿದಿರುವ ಕಳ್ಳರು, ಚಿನ್ನಾಭರಣ, ನಗದು ದೋಚಿಕೊಂಡು ಹೋಗಿದ್ದಾರೆ. ಕೋಟೆ ಬ್ರಾಹ್ಮಣರ ಬೀದಿಯ ಆನಂದ ಅವರ ಪತ್ನಿ ಮಾಧವಿ ಅವರು ಏ.26ರಂದು ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದರು. ಪಕ್ಕದ ಮನೆಯ ಆಶಾ ಅವರು ಮಾಧವಿ ಅವರ ಮನೆಯ ಬಾಗಿಲಿಗೆ ಹೂ ಇಡಲು ಮೇ 1ರಂದು ಹೋದಾಗ ಬಾಗಿಲ ಬೀಗ ಮುರಿದಿರುವುದು ಕಂಡಿದೆ. ಅವರು ತಕ್ಷಣವೇ ಮಾಧವಿ ಅವರಿಗೆ ಫೋನ್ ಮಾಡಿ…
ಟಾಟಾ ಏಸ್ ಡಿಕ್ಕಿ; ಬೈಕ್ ಸವಾರ ಸಾವು
May 3, 2019ಅರಕಲಗೂಡು: ಅರಕಲಗೂಡು ತಾಲ್ಲೂಕಿನಲ್ಲಿ ಹೊಳೆನರಸೀಪುರ ಅರಕಲಗೂಡು ರಸ್ತೆ ಐಟಿಐ ಕಾಲೇಜು ರಸ್ತೆ ಹತ್ತಿರ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಮಲ್ಲಿತಮ್ಮನಹಳ್ಳಿಯ ಸುಬ್ಬೇಗೌಡ(24) ಮೃತರು. ಸುಬ್ಬೇಗೌಡ ಮೇ 1ರಂದು ತಮ್ಮ ಬೈಕ್‍ನಲ್ಲಿ ನಾಗಲಾಪುರದ ರಂಜಿತ್ ಅವರ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ (ಕೆ-55, 4295) ಟಾಟಾ ಏಸ್ ವಾಹನದ ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿಕೊಂಡು ಬಂದು ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಸುಬ್ಬೇಗೌಡ ಅವರು…
ಎಸ್‍ಎಸ್‍ಎಲ್‍ಸಿ: ರಾಜ್ಯಕ್ಕೆ ಹಾಸನ ಪ್ರಥಮಶೇ 89.75ರಷ್ಟು ಫಲಿತಾಂಶ, ಬಾಲಕಿಯರೇ ಮೇಲುಗೈ
May 1, 2019ಹಾಸನ: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶ ಪ್ರಕಟ ಗೊಂಡಿದ್ದು, ಹೊಯ್ಸಳರ ನಾಡು ಹಾಸನ ಜಿಲ್ಲೆ ಶೇ. 89.75ರಷ್ಟು ಫಲಿತಾಂಶದೊಂದಿಗೆ ರಾಜ್ಯದ 34 ಜಿಲ್ಲೆಗಳಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಳೆದ ಶೈಕ್ಷಣಿಕ ವರ್ಷದ ಫಲಿತಾಂಶ ಪಟ್ಟಿಯಲ್ಲಿ ಜಿಲ್ಲೆಯು 7ನೇ ಸ್ಥಾನ ಪಡೆದಿತ್ತು. ಆಗ ಶೇ 84.68ರಷ್ಟು ಫಲಿತಾಂಶ ದೊರಕಿತ್ತು. ಈ ಬಾರಿ ಶೇ 89.75ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷ ಜಿಲ್ಲೆಯಲ್ಲಿ 19,709 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 17,689 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಯ ಒಟ್ಟು 512 ಸರ್ಕಾರಿ,…
ಅರಸೀಕೆರೆಗೆ ಉತ್ತಮ ಫಲಿತಾಂಶ
May 1, 2019ಅರಸೀಕೆರೆ: ರಾಜ್ಯ ಹಾಸನ ಜಿಲ್ಲೆಯು ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಜಿಲ್ಲೆಯ ತಾಲೂಕುವಾರು ಫಲಿತಾಂಶದಲ್ಲಿ ಅರಸೀಕೆರೆ ತಾಲೂಕು ನಾಲ್ಕನೇ ಸ್ಥಾನ ಪಡೆದಿದೆ. ಪತ್ರಿಕೆಯೊಂದಿಗೆ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ್ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 87 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು. 87 ಶಾಲೆಗಳ ಪೈಕಿ 33 ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಈ ಪರೀಕ್ಷೆಯಲ್ಲಿ 3,569 ಪರೀಕ್ಷಾರ್ಥಿಗಳು…
ಕರಿಯಮ್ಮ, ಮಲ್ಲಿಗೆಯಮ್ಮ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ
May 1, 2019ಅರಸೀಕೆರೆ: ನಗರದ ಅಧಿದೇವತೆ ಕರಿಯಮ್ಮ ಹಾಗೂ ಮಲ್ಲಿಗೆಮ್ಮ ದೇವಿಯವರ 50ನೇ ವರ್ಷದ ಜಾತ್ರಾ ಮಹೋ ತ್ಸವಕ್ಕೆ ಸೋಮವಾರ ಸಂಜೆ ಸಹಸ್ರಾರು ಭಕ್ತರು ಸಮ್ಮುಖದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ಜಾತ್ರಾ ಮಹೋತ್ಸವದ ಮೊದಲನೇ ದಿನ ಊರ ಒಳಗಿನ ಮಲ್ಲಿಗೆಮ್ಮ ದೇವಾಲಯದಲ್ಲಿ ಮಲ್ಲಿಗೆಮ್ಮ ದೇವಿಗೆ ಮಹಾರುದ್ರಾ ಭಿಷೇಕ, ಅಂಕುರಾರ್ಪಣೆ ಸೇರಿದಂತೆ ಹಲವು ಅಭಿಷೇಕಗಳು ಹಾಗೂ ಅರ್ಚನೆಗಳು ಧಾರ್ಮಿಕ ಕೈಂಕರ್ಯಗಳಂತೆ ನೆರವೇರಿತು. ಸುಮಂಗಲಿಯರು ಅಮ್ಮನಿಗೆ ತಂಬಿಟ್ಟಿನಾರತಿ ಜೊತೆಗೆ ಹೋಳಿಗೆ ಪಾಯಸ ಹೀಗೆ ನಾನಾ ಬಗೆಯ ನೈವೇದ್ಯವನ್ನ ಶ್ರದ್ಧಾಭಕ್ತಿಯಿಂದ ದೇವಿಗೆ ಅರ್ಪಿಸಿದರು. ಸಂಜೆ…
ವ್ಯವಸ್ಥಿತವಾಗಿ ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಸೂಚನೆ
May 1, 2019ಹಾಸನ: ನಗರದ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ನಡೆದ ಆಲೂಗಡ್ಡೆ ಬಿತ್ತನೆ ಬೀಜ ದಾಸ್ತಾನು ಮತ್ತು ಮಾರಾಟ ಕುರಿ ತಂತೆ ಅಧಿಕಾರಿಗಳು, ವರ್ತಕರು ಹಾಗೂ ರೈತರ ಸಭೆಯಲ್ಲಿ ವ್ಯವಸ್ಥಿತವಾದ ವಿತ ರಣೆಗೆ ಹಲವು ಮಹತ್ವದ ಸಲಹೆ ಸೂಚನೆ ಗಳನ್ನು ನೀಡಲಾಯಿತು. ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿ ಕಾರಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಅವಕವಾಗಿರುವ ಆಲೂಗಡ್ಡೆ ಬಿತ್ತನೆಗೆ ಉತ್ತಮವಾಗಿದೆಯೇ ಎಂಬುದರ ಗುಣ ಮಟ್ಟ ಖಾತರಿಯಾಗಬೇಕು. ಸೋಮನ ಹಳ್ಳಿ ಆಲೂಗಡ್ಡೆ ಸಂಶೋಧನಾ ಕೇಂದ್ರ…
ಮೂವರು ಸಿಬ್ಬಂದಿ ಅಮಾನತು
April 30, 2019ಹಾಸನ: ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದ ಮತಗಟ್ಟೆ ಸಂಖ್ಯೆ 244ರಲ್ಲಿ ಅಕ್ರಮ ಮತದಾನ ನಡೆದಿದೆ ಎಂಬ ಬಿಜೆಪಿ ಏಜೆಂಟರುಗಳ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತನಿಖೆ ನಡೆಸಿ ಮತಗಟ್ಟೆಯ ಮೂವರು ಸಿಬ್ಬಂದಿಯನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ. ಮತಗಟ್ಟೆ ಯಲ್ಲಿ ಕಾರ್ಯ ನಿರ್ವಹಿಸಿದ ಯೋಗೇಶ್, ರಾಮಚಂದ್ರ ರಾವ್ ಹಾಗೂ ದಿನೇಶ್ ಅಮಾನತುಗೊಂಡ ಸಿಬ್ಬಂದಿ. ಏನಿದು ಪ್ರಕರಣ?: ಏ.18ರಂದು ಹಾಸನ ಜಿಲ್ಲೆ ಹೊಳೆ ನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮ ದಲ್ಲಿ ಮಾಜಿ ಪ್ರಧಾನಿ…
ಅರಸೀಕೆರೆ ರೈಲ್ವೆ ನಿಲ್ದಾಣದಲ್ಲಿ ಭದ್ರತೆ ಕೊರತೆ..!ಸಿಸಿ ಕ್ಯಾಮರಾ, ಅಗತ್ಯ ಭದ್ರತಾ ಸಿಬ್ಬಂದಿ ನೇಮಕಕ್ಕೆ ಒತ್ತಾಯ
April 30, 2019ಅರಸೀಕೆರೆ: ನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುವ ಅರಸೀಕೆರೆ ರೈಲ್ವೆ ನಿಲ್ದಾಣ ದೇಶದ ವಿವಿಧೆಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಕೇಂದ್ರವಾಗಿದೆ. ಆದರೆ, ಈ ನಿಲ್ದಾಣಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದಿರುವುದು ರೈಲ್ವೆ ಇಲಾಖೆಯ ಕಾರ್ಯವೈಖರಿಗೆ ಕನ್ನಡಿ ಹಿಡಿದಂತಾಗಿದೆ. ಅರಸೀಕೆರೆ ರೈಲ್ವೆ ನಿಲ್ದಾಣವು ಮೈಸೂರು, ಬೆಂಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದ್ದು, ಪ್ರತಿನಿತ್ಯ ಈ ನಿಲ್ದಾಣದಿಂದ ಉತ್ತರ ಭಾರತ ಸೇರಿ ದಂತೆ ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ,…