ಅರಸೀಕೆರೆಗೆ ಉತ್ತಮ ಫಲಿತಾಂಶ
ಹಾಸನ

ಅರಸೀಕೆರೆಗೆ ಉತ್ತಮ ಫಲಿತಾಂಶ

May 1, 2019

ಅರಸೀಕೆರೆ: ರಾಜ್ಯ ಹಾಸನ ಜಿಲ್ಲೆಯು ಎಸ್‍ಎಸ್ ಎಲ್‍ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದು, ಜಿಲ್ಲೆಯ ತಾಲೂಕುವಾರು ಫಲಿತಾಂಶದಲ್ಲಿ ಅರಸೀಕೆರೆ ತಾಲೂಕು ನಾಲ್ಕನೇ ಸ್ಥಾನ ಪಡೆದಿದೆ.

ಪತ್ರಿಕೆಯೊಂದಿಗೆ ಕ್ಷೇತ್ರ ಸಮನ್ವಯಾಧಿಕಾರಿ ಗಂಗಾಧರ್ ಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಮೊರಾರ್ಜಿ ವಸತಿ ಶಾಲೆಗಳು ಸೇರಿದಂತೆ ಒಟ್ಟು 87 ಪ್ರೌಢಶಾಲೆಗಳ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದಿದ್ದರು.

87 ಶಾಲೆಗಳ ಪೈಕಿ 33 ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಯಶಸ್ಸು ಸಾಧಿಸಿದ್ದಾರೆ. ಈ ಪರೀಕ್ಷೆಯಲ್ಲಿ 3,569 ಪರೀಕ್ಷಾರ್ಥಿಗಳು ಭಾಗ ವಹಿಸಿದ್ದು, ಅವುಗಳಲ್ಲಿ 3,033 ವಿದ್ಯಾರ್ಥಿಗಳು ತೇರ್ಗಡೆಯಾಗಿ ದ್ದಾರೆ. ಮುರುಂಡಿ ಗ್ರಾಮದ ಸರ್ಕಾರಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ನೂರಕ್ಕೆ ನೂರಷ್ಟು ಫಲಿತಾಂಶ ದೊರೆತಿದೆ. ಒಟ್ಟು ಅರಸೀಕೆರೆ ತಾಲೂಕಿನಲ್ಲಿ ಶೇ.84.98 ರಷ್ಟು ತೇರ್ಗಡೆ ಫಲಿತಾಂಶ ಬಂದಿದೆ. ತಾಲೂಕಿನ ಸಂಪೂರ್ಣ ಫಲಿತಾಂಶ ಚಿತ್ರಣ ಬುಧವಾರ ಅಧಿಕೃತವಾಗಿ ದೊರೆಯಲಿದ್ದು, ತಾಲೂಕಿ ನಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಅಧಿಕೃತ ವಾಗಿ ಘೊಷಣೆ ಮಾಡಲಾಗುವುದು ಎಂದು ಹೇಳಿದರು.

ನಗರದ ಆದಿಚುಂಚನಗಿರಿ ಪ್ರೌಢಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ: ನಗರದ ಶ್ರೀನಿವಾಸ ನಗರದಲ್ಲಿರುವ ಆದಿಚುಂಚನ ಗಿರಿ ಇಂಗ್ಲೀಷ್ ಪ್ರೌಢಶಾಲೆಯಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಬಂದಿದ್ದು, ಒಟ್ಟು 112 ವಿದ್ಯಾರ್ಥಿಗಳಲ್ಲಿ 112 ವಿದ್ಯಾರ್ಥಿಗಳು ಸಂಪೂರ್ಣ ತೇರ್ಗಡೆ ಯಾಗಿದ್ದಾರೆಂದು ಪ್ರಾಂಶುಪಾಲ ಲಿಂಗರಾಜು ತಿಳಿಸಿದ್ದಾರೆ.

Translate »