ಸರ್ವೋದಯ ವಿದ್ಯಾಸಂಸ್ಥೆಗೆ ಶೇ. 100ರಷ್ಟು ಫಲಿತಾಂಶ
ಹಾಸನ

ಸರ್ವೋದಯ ವಿದ್ಯಾಸಂಸ್ಥೆಗೆ ಶೇ. 100ರಷ್ಟು ಫಲಿತಾಂಶ

May 1, 2019

ಬೇಲೂರು: ಪಟ್ಟಣದ ಸರ್ವೋ ದಯ ವಿದ್ಯಾ ಸಂಸ್ಥೆಯ ಪ್ರೌಢಶಾಲಾ ವಿಭಾಗವು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದಿದೆ. ಶಾಲೆಯ ವಿದ್ಯಾರ್ಥಿಗಳಾದ ಕೆ.ವಿನಯ(620), ಪ್ರತಿಜ್ಞಾ ಪ್ರಕಾಶ್(619) ಉತ್ತಮ ಅಂಕಗಳಿಕೆಯೊಂದಿಗೆ ತಾಲೂಕಿನ ಪ್ರಥಮ ಹಾಗೂ ದ್ವಿತೀಯ ಸ್ಥಾನ ಅಲಂ ಕರಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

ಶಾಲೆಯಿಂದ ಪರೀಕ್ಷೆಗೆ ಹಾಜರಾದ 53 ವಿದ್ಯಾರ್ಥಿ ಗಳಲ್ಲಿ 30 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಯಲ್ಲಿ ಉತ್ತೀರ್ಣರಾಗಿದ್ದಾರೆ. ಎಲ್ಲಾ ವಿದ್ಯಾರ್ಥಿ ಗಳನ್ನು ಸಂಸ್ಥೆಯಿಂದ ಅಭಿನಂದಿಸಲಾಯಿತು.

Translate »