SSLC ಫಲಿತಾಂಶ ಪ್ರಕಟ: ಶೇ.73.70 ತೇರ್ಗಡೆ – ಹಾಸನ ಪ್ರಥಮ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ತೃತೀಯ ಸ್ಥಾನ
ಮೈಸೂರು

SSLC ಫಲಿತಾಂಶ ಪ್ರಕಟ: ಶೇ.73.70 ತೇರ್ಗಡೆ – ಹಾಸನ ಪ್ರಥಮ, ರಾಮನಗರ ದ್ವಿತೀಯ, ಬೆಂಗಳೂರು ಗ್ರಾಮಾಂತರ ತೃತೀಯ ಸ್ಥಾನ

May 1, 2019

ಬೆಂಗಳೂರು: ಕಳೆದ ಮಾರ್ಚ್‍ನಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕರಾವಳಿ, ಮಲೆ ನಾಡು ವಿದ್ಯಾರ್ಥಿಗಳನ್ನು ಬಯಲು ಸೀಮೆಯ ವಿದ್ಯಾರ್ಥಿಗಳು ಹಿಂದಿಕ್ಕಿ ಮೇಲುಗೈ ಸಾಧಿಸಿದ್ದಾರೆ.

ಈ ಬಾರಿ ಹಾಸನ, ರಾಮನಗರ ಹಾಗೂ ಬೆಂಗ ಳೂರು ಗ್ರಾಮಾಂತರ ಶೇಕಡವಾರು ಫಲಿತಾಂಶದಲ್ಲಿ ಅನುಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಬಾಚಿ ಕೊಂಡಿವೆ. ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್ ತಾಲೂಕಿನ ಸೃಜನ ಮತ್ತು ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ನಾಗಾಂಜಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಬಾರಿ 8,25, 468 ವಿದ್ಯಾರ್ಥಿಗಳು ಪರೀಕ್ಷೆ ತೆಗೆದು ಕೊಂಡಿದ್ದು, ಅದರಲ್ಲಿ 6,08,336 ರಷ್ಟು ಅಂದರೆ ಶೇ.73.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷ ಕ್ಕಿಂತ 1.8 ರಷ್ಟು ಫಲಿತಾಂಶ ಹೆಚ್ಚಳವಾಗಿದೆ.

ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲಾ ಮಕ್ಕಳಿಗಿಂತ ಹೆಚ್ಚು ತೇರ್ಗಡೆ ಹೊಂದಿ ದ್ದಾರೆ. ಎಂದಿನಂತೆ ಎಸ್‍ಎಸ್‍ಎಲ್‍ಸಿಯಲ್ಲೂ ಬಾಲಕಿ ಯರೇ ಮೇಲುಗೈ ಸಾಧಿಸಿದ್ದಾರೆ. ಬಾಲಕಿಯರು ಶೇ. 79.59 ರಷ್ಟು ಬಾಲಕರು ಶೇ. 68.46ರಷ್ಟು ತೇರ್ಗಡೆ ಹೊಂದಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಜೂನ್ 21 ರಿಂದ 27ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಕಳೆದ ಬಾರಿ ಮೊದಲ ಸ್ಥಾನ ಗಳಿಸಿದ್ದ ಉಡುಪಿಯನ್ನು ಹಿಂದಿಕ್ಕಿರುವ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದ್ದರೆ, ರಾಮನಗರ ಜಿಲ್ಲೆ 2Àನೇ ಸ್ಥಾನ ಗಳಿಸಿದೆ. ಉಡುಪಿ ಜಿಲ್ಲೆ ಐದನೇ ಸ್ಥಾನಕ್ಕೆ ಕುಸಿದಿದೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. 8.25 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಏ.10ರಿಂದ ಏ.25ರವರೆಗೆ ಮೌಲ್ಯ ಮಾಪನ ನಡೆಸಲಾಗಿತ್ತು.

ಈ ಬಾರಿ ಮೌಲ್ಯಮಾಪನ ಪ್ರಕ್ರಿಯೆ ಡಿಜಿಟಲೀಕರಣಗೊಂಡಿದ್ದು, ನಿರೀಕ್ಷೆಗೂ ಮುನ್ನವೇ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಜ್ಯದ ಸರ್ಕಾರಿ ಶಾಲೆಗಳಿಂದ ಅತ್ಯುತ್ತಮ ಫಲಿತಾಂಶ ಹೊರಬಿದ್ದಿದೆ. ಒಟ್ಟು 5202 ಸರ್ಕಾರಿ ಶಾಲೆಗಳ ಪೈಕಿ ಶೇ.77.84ರಷ್ಟು ಫಲಿತಾಂಶ ದೊರೆತಿದ್ದರೆ, ಅನುದಾನಿತ ಶಾಲೆಗಳಲ್ಲಿ ಶೇ.77.21ರಷ್ಟು ಫಲಿತಾಂಶ ದಾಖಲಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಶೇ. 82.72 ಫಲಿತಾಂಶ ದೊರೆತಿದೆ. ಇದೇ ಮೊದಲ ಬಾರಿಗೆ ಯಾವುದೇ ಸರ್ಕಾರಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದಾಖಲಾಗಿಲ್ಲ. 2017-18ರಲ್ಲಿ 102 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಹೊರಬಿದ್ದಿತ್ತು. ಇದು ಸರ್ಕಾರಿ ಶಾಲೆಗಳು ಸುಧಾರಣೆ ಹೊಂದುತ್ತಿರುವ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಕ್ಕೆ ಸಾಕ್ಷಿ ಎಂದು ಉಮಾಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ, 9 ಅನುದಾನಿತ ಹಾಗೂ 37 ಅನುದಾನ ರಹಿತ ಶಾಲೆಗಳು ಸೇರಿ 46 ಶಾಲೆಗಳಲ್ಲಿ ಶೂನ್ಯ ಫಲಿತಾಂಶ ದೊರೆತಿದೆ. ಈ ಶಾಲೆಗಳ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು ಎಂದರು.

ತೇರ್ಗಡೆ ಹೊಂದಿರುವ ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದರೆ, 11 ವಿದ್ಯಾರ್ಥಿಗಳು 624, 19 ವಿದ್ಯಾರ್ಥಿಗಳು 623, 39 ವಿದ್ಯಾರ್ಥಿಗಳು 622, 43 ವಿದ್ಯಾರ್ಥಿಗಳು 621 ಹಾಗೂ 56 ವಿದ್ಯಾರ್ಥಿಗಳು 620 ಅಂಕ ಗಳಿಸಿದ್ದಾರೆ. ಪ್ರಥಮ ಭಾಷೆಯಲ್ಲಿ 8602, ದ್ವಿತೀಯ ಭಾಷೆಯಲ್ಲಿ 3404, ತೃತೀಯ ಭಾಷೆಯಲ್ಲಿ 8138, ಗಣಿತದಲ್ಲಿ 1626, ವಿಜ್ಞಾನದಲ್ಲಿ 226, ಸಮಾಜ ವಿಜ್ಞಾನದಲ್ಲಿ 3141 ವಿದ್ಯಾರ್ಥಿಗಳು ಗರಿಷ್ಠ 100 ಅಂಕ ಗಳಿಸಿದ್ದಾರೆ ಎಂದು ಅವರು ಮಾಹಿತಿ ನಿಡಿದರು. ನಗರ ಭಾಗಕ್ಕೆ ಹೋಲಿಸಿದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ನಗರ ಭಾಗದಲ್ಲಿ ಶೇ.70.05ರಷ್ಟು ಫಲಿತಾಂಶ ದೊರೆತಿದ್ದರೆ, ಗ್ರಾಮೀಣ ಭಾಗದಲ್ಲಿ ಶೇ.76.67ರಷ್ಟು ಫಲಿತಾಂಶ ದಾಖಲಾಗಿದೆ. ಕನ್ನಡ ಮಾಧ್ಯಮದ ಶಾಲೆಗಳಲ್ಲಿ ಶೇ.67.33 ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಶೇ.81.23ರಷ್ಟು ಫಲಿತಾಂಶ ದಾಖಲಾಗಿದೆ. ರಾಜ್ಯಾದ್ಯಂತ ಒಟ್ಟು 3683 ದಿವ್ಯಾಂಗ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 2494 ಅಂದರೆ ಶೇ. 67.71ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ಫಲಿತಾಂಶದಲ್ಲಿ ಬೆಂಗಳೂರು ನಗರಕ್ಕೆ 5, ಮಂಗಳೂರಿಗೆ 4, ಹಾಸನಕ್ಕೆ ಎರಡು ಶ್ರೇಯಾಂಕಗಳು ದೊರೆತಿವೆ. ಬೆಂಗಳೂರು ದಕ್ಷಿಣ ಜಿಲ್ಲೆ ಆನೇಕಲ್ ತಾಲೂಕಿನ ಸಂತ ಫಿಲೋಮಿನಾ ಇಂಗ್ಲಿಷ್ ಹೈಸ್ಕೂಲ್ ಸೃಜನ 625 ಅಂಕಗಳೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರೆ, ಉತ್ತರ ಕನ್ನಡ ಜಿಲ್ಲೆ ಕುಮಟಾದ ನಾಗಾಂಜಲಿ ಪರಮೇಶ್ವರ್ ನಾಯಕ್ ವಿದ್ಯಾರ್ಥಿ ಕೂಡ 625 ಅಂಕ ಗಳಿಸಿದ್ದಾರೆ. ಬೆಂಗಳೂರು ಉತ್ತರ ಜಿಲ್ಲೆಯ ಭಾನವ ಯು.ಎಸ್. (624), ಬೆಂಗಳೂರು ಉತ್ತರದ ಭಾವನಾ ಆರ್. (624) ಬೆಂಗಳೂರು ಉತ್ತರದ ಸಾಯಿರಾಮ್ .ಎಸ್ (624), ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಂಭವಿ ಎಚ್.ವಿ. (624), ತುಮಕೂರಿನ ಹರ್ಷಿತ್.ಸಿ (624), ಮಂಗಳೂರು, ಪುತ್ತೂರಿನ. ಸಿಂಚನಾ ಲಕ್ಷ್ಮೀ (624) ಮಂಗಳೂರು, ಸುಳ್ಯದ ಕೃಪಾ ಕೆ.ಆರ್. (624), ಬಂಟ್ವಾಳದ ಅನುಪಮಾ ಕಾಮತ್ ಹಾಗೂ ಚಿನ್ಮಯಿ (ತಲಾ 624), ಹಾಸನದ ಪ್ರಗತಿ ಎಂ. ಗೌಡ ಹಾಗೂ ಅಭಿನ್ .ಬಿ (ತಲಾ 624) ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಜೂನ್ 21ರಿಂದ 26ರವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ. ಮೇ 2ರಿಂದ 15ರವರೆಗೆ ವಿದ್ಯಾರ್ಥಿಗಳು ಉತ್ತರಪತ್ರಿಕೆಯ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇದೇ ಮೊದಲ ಬಾರಿಗೆ ಶೇಕಡಾವಾರು ಫಲಿತಾಂಶದ ಜೊತೆಗೆ, ವಿವಿಧ ಜಿಲ್ಲೆಗಳ ಗುಣಮಟ್ಟದ ಫಲಿತಾಂಶವನ್ನು ತಾಳೆ ಹಾಕಲಾಗಿದೆ.ಇದರಲ್ಲಿ ಶಾಲೆಗಳ ಒಟ್ಟಾರೆ ಶೇಕಡಾವಾರು ಫಲಿತಾಂಶ, ಸರಾಸರಿ ಫಲಿತಾಂಶ ಹಾಗೂ ಶೇ.60ಕ್ಕಿಂತ ಹೆಚ್ಚಿನ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಪರಿಗಣಿಸಲಾಗಿದೆ. ಈ ಪಟ್ಟಿಯಲ್ಲಿ ಕೂಡ ಹಾಸನ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ಉಡುಪಿ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು ಗ್ರಾಮಾಂತರ ಮೂರನೇ ಸ್ಥಾನದಲ್ಲಿದೆ. ಯಾದಗಿರಿ ಗುಣಮಟ್ಟದ ಶಿಕ್ಷಣದ ಪಟ್ಟಿಯಲ್ಲಿಯೂ ಕೊನೆಯ ಸ್ಥಾನದಲ್ಲಿಯೇ ತೃಪ್ತಿ ಪಟ್ಟುಕೊಂಡಿದೆ.

BSF ಮಾಜಿ ಯೋಧನ ಪುತ್ರಿ ರಾಜ್ಯಕ್ಕೆ ಪ್ರಥಮ
ಕಾರವಾರ:ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ಬಿಎಸ್‍ಎಫ್ ಮಾಜಿ ಯೋಧನ ಪುತ್ರಿ ನಾಗಾಂಜಲಿ ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ನಾಗಾಂಜಲಿ ಅವರು ಕುಮಟಾ ತಾಲೂಕಿನ ಕಲಬಾಗದ ಸಿವಿಎಸ್‍ಕೆ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಅವರ ತಂದೆ ಪರ ಮೇಶ್ವರ ನಾಯ್ಕ್ ಃSಈ ಮಾಜಿ ಯೋಧ. 2006ರಲ್ಲಿ ನಿವೃತ್ತಿ ಹೊಂದಿ, ಈಗ ಟೆಂಪೊ ಇರಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ.

Translate »