SSLC ದುರಂತ: ಮಗಳ ಸಾಧನೆಯ ಖುಷಿಯಲ್ಲಿ ಸ್ವೀಟ್ ತರುವಾಗ ಅಪ್ಪ ಅಪಘಾತದಲ್ಲಿ ಸಾವು
ಮೈಸೂರು

SSLC ದುರಂತ: ಮಗಳ ಸಾಧನೆಯ ಖುಷಿಯಲ್ಲಿ ಸ್ವೀಟ್ ತರುವಾಗ ಅಪ್ಪ ಅಪಘಾತದಲ್ಲಿ ಸಾವು

May 1, 2019

ಚಿತ್ರದುರ್ಗ:ಮಗಳು ಎಸ್‍ಎಸ್‍ಎಲ್‍ಸಿಯಲ್ಲಿ ತೇರ್ಗಡೆ ಹೊಂದಿದ್ದರಿಂದ ಆ ಖುಷಿಯಲ್ಲಿ ಸ್ವೀಟ್ ತರಲು ಹೋದ ತಂದೆ ಅಪಘಾತದಲ್ಲಿ ಸಾವಿಗೀಡಾದ ದುರಂತ ಚಿತ್ರ ದುರ್ಗ ಜಿಲ್ಲೆ ಬೆಳಗಟ್ಟದಲ್ಲಿ ಸಂಭವಿಸಿದೆ.

ಸಿದ್ದೇಶ್(45) ಮೃತ ದುರ್ದೈವಿ. ಮಗಳು ಎಸ್‍ಎಸ್‍ಎಲ್‍ಸಿ ಪಾಸಾದ ಖುಷಿಯಲ್ಲಿದ್ದ ತಂದೆ ಸ್ವೀಟ್ ತರಲು ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಸಿದ್ದೇಶ್ ತಮ್ಮ ಮಗಳ ಸಾಧನೆಯನ್ನು ಸಂಭ್ರಮಿಸುವ ಖುಷಿಯಲ್ಲಿದ್ದರು. ಆದರೆ ಜವರಾಯ ಅದಾಗಲೇ ಕಾದು ಕುಳಿತಿದ್ದ. ಚಿತ್ರದುರ್ಗದಿಂದ ಸ್ವೀಟ್ ತೆಗೆದುಕೊಂಡು ಕಡಬನಕಟ್ಟೆಗೆ ಹೋಗುವಾಗ ಅವರ ಬೈಕ್‍ಗೆ ಟೆಂಪೋ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತುರುವನೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Translate »