ಸರಕು ವಾಹನಗಳಲ್ಲಿ ಜನ ಸಾಗಿಸಿದರೆ ಕ್ರಮ
ಮೈಸೂರು

ಸರಕು ವಾಹನಗಳಲ್ಲಿ ಜನ ಸಾಗಿಸಿದರೆ ಕ್ರಮ

May 1, 2019

ಬೆಂಗಳೂರು: ಸರಕು ಸಾಗಾಣೆ ವಾಹನ ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಜನರನ್ನು ಕರೆದೊಯ್ಯುವ ವಾಹನಗಳ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಸರ್ಕಾರ ಆದೇಶಿಸಿದೆ. ಇತ್ತೀಚೆಗೆ ಸರಕು ಸಾಗಾಣಿಕೆ ವಾಹನದಲ್ಲಿ ಜನರನ್ನು ಸಾಗಿಸುವ ಸಂದರ್ಭದಲ್ಲಿ ಅಪಘಾತಗಳು ಹೆಚ್ಚಾಗಿ ಸಾವು ನೋವಿಗೆ ಕಾರಣವಾಗಿದೆ. ಹತ್ತು ಹಲವು ಕಾನೂನುಗಳಿದ್ದರೂ, ಇದನ್ನು ಬದಿ ಗೊತ್ತಿ, ಮಾಲೀಕರು ಇಲ್ಲವೆ ಗುತ್ತಿಗೆದಾ ರರು ಸರಕು ಸಾಗಾಣಿಕೆಯಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ.

ತಕ್ಷಣವೇ ಇದಕ್ಕೆ ಕಡಿವಾಣ ಹಾಕ ಬೇಕೆಂದು ರಾಜ್ಯದ ಮುಖ್ಯ ಕಾರ್ಯ ದರ್ಶಿಗಳು ಸಾರಿಗೆ ಮತ್ತು ಪೊಲೀಸ್ ಇಲಾಖೆಗೆ ಕಟ್ಟಾದೇಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆ ನಡೆಸಿದ ಅವರು, ಈ ಆದೇಶ ನೀಡಿ ರುವುದಲ್ಲದೆ, ಅಗತ್ಯ ಬಿದ್ದರೆ ಶಾಲೆಗಳಿಗೆ, ಗಾರ್ಮೆಂಟ್ಸ್ ಕಂಪನಿ ಗಳಿಗೆ ಕಟ್ಟಡ ನಿರ್ಮಾಣದ ಮಾಲೀಕರುಗಳಿಗೆ, ವಿದ್ಯಾರ್ಥಿ ಗಳು ಮತ್ತು ಜನರನ್ನು ಸಾಗಿಸಲು ಬಸ್ ಅಥವಾ ಮಿನಿ ವಾಹನ ಗಳನ್ನು ಖರೀದಿ ಮಾಡಲು ಅವಕಾಶ ಮಾಡಿಕೊಡಿ ಎಂದು ಸೂಚಿಸಿದ್ದಾರೆ. ಇಂತಹವರಿಗೆ ಖಾಸಗಿ ವಾಹನಗಳನ್ನು ಖರೀದಿ ಸಲು ಲೈಸೆನ್ಸ್ ನೀಡಬೇಕು.ಇಲ್ಲವೇ ರಿಯಾಯ್ತಿ ದರದಲ್ಲಿ ಕೆಎಸ್‍ಆರ್‍ಟಿಸಿ ವತಿ ಯಿಂದಲೇ ಬಸ್ಸುಗಳನ್ನು ನೀಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಶಾಲಾ ಮಕ್ಕಳನ್ನು ಸುಸ್ಥಿತಿಯಲ್ಲಿಲ್ಲದ, ಸರಕು ಸಾಗಾಣೆ ಮಾಡುವ ವಾಹನಗಳಲ್ಲಿ ಶಾಲೆಗೆ ಬಿಡುವ, ಕರೆತರುವ ಕುರಿತು ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಆದರೆ ಇದುವರೆಗೆ ಯಾವ ಕ್ರಮವೂ ಆಗಿಲ್ಲ.ಹೀಗಾಗಿ ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ವಾಗದಂತೆ ನೋಡಿಕೊಳ್ಳಬೇಕು. ಶಾಲಾ ಆಡಳಿತ ಮಂಡಳಿಗಳೇ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು, ಮನೆಗೆ ಬಿಡಲು ತಮ್ಮದೇ ವಾಹನ ಖರೀದಿ ಮಾಡಲು ಬಯಸಿದರೆ
ಅವುಗಳಿಗೆ ಪರವಾನಗಿ ನೀಡಬೇಕು.ಇಲ್ಲವೇ ಕೆಎಸ್‍ಆರ್‍ಟಿಸಿ ಬಸ್ಸುಗಳನ್ನು ರಿಯಾಯ್ತಿ ದರದಲ್ಲಿ ಒದಗಿಸಬೇಕು. ಹಾಗೆಯೇ ಕಟ್ಟಡ ಕಾರ್ಮಿಕರನ್ನು ಸರಕು ಸಾಗಾಣೆ ವಾಹನಗಳು,ಟಾಂ ಟಾಂ,ತೆರೆದ ವಾಹನಗಳು ಸೇರಿದಂತೆ ಹಲವು ವಾಹನಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಕರೆದೊಯ್ಯುವ ಕೆಲಸ ನಡೆಯುತ್ತಿದೆ. ಹಲವು ಬಾರಿ ಇಂತಹ ವಾಹನಗಳು ನಿಯಂತ್ರಣ ತಪ್ಪಿಯೋ, ಅಪಘಾತಕ್ಕೊಳಗಾಗಿಯೇ ಹಲವರು ಮೃತಪಟ್ಟಿದ್ದಾರೆ.

ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಾಗೆಯೇ ಇನ್ನು ಮುಂದೆ ಕಟ್ಟಡ ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವವರು ಅವರ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ನೋಡಿಕೊಳ್ಳಬೇಕು. ಗಾರ್ಮೆಂಟ್ ನೌಕರರ ಪರಿಸ್ಥಿತಿಯೂ ಇದೇ ರೀತಿ ದಯನೀಯವಾಗಿದ್ದು ಅವರು ಕೂಡ ಸಿಕ್ಕ ಸಿಕ್ಕ ವಾಹನಗಳಲ್ಲಿ ಪ್ರಯಾಣ ಮಾಡುವಂತಾಗಿದೆ ಎಂದರು.

Translate »