ವ್ಯವಸ್ಥಿತವಾಗಿ ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಸೂಚನೆ
ಹಾಸನ

ವ್ಯವಸ್ಥಿತವಾಗಿ ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಗೆ ಸೂಚನೆ

May 1, 2019

ಹಾಸನ: ನಗರದ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ನಡೆದ ಆಲೂಗಡ್ಡೆ ಬಿತ್ತನೆ ಬೀಜ ದಾಸ್ತಾನು ಮತ್ತು ಮಾರಾಟ ಕುರಿ ತಂತೆ ಅಧಿಕಾರಿಗಳು, ವರ್ತಕರು ಹಾಗೂ ರೈತರ ಸಭೆಯಲ್ಲಿ ವ್ಯವಸ್ಥಿತವಾದ ವಿತ ರಣೆಗೆ ಹಲವು ಮಹತ್ವದ ಸಲಹೆ ಸೂಚನೆ ಗಳನ್ನು ನೀಡಲಾಯಿತು.

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿ ಕಾರಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಅವಕವಾಗಿರುವ ಆಲೂಗಡ್ಡೆ ಬಿತ್ತನೆಗೆ ಉತ್ತಮವಾಗಿದೆಯೇ ಎಂಬುದರ ಗುಣ ಮಟ್ಟ ಖಾತರಿಯಾಗಬೇಕು. ಸೋಮನ ಹಳ್ಳಿ ಆಲೂಗಡ್ಡೆ ಸಂಶೋಧನಾ ಕೇಂದ್ರ ರೋಗಮುಕ್ತ ಪರೀಕ್ಷೆಗಳನ್ನು ನಡೆಸುವಂತೆ ಹಾಗೂ ಬನ್ನೇರುಘಟ್ಟ ಸಂಶೋಧನಾ ಕೇಂದ್ರಗಳ ಮೂಲಕ ನಡೆಸುವಂತೆ ಜಿಲ್ಲಾ ಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಪ್ರದೇಶ ಅಗತ್ಯ ಪ್ರಮಾಣದ ಬಿತ್ತನೆ ಬೀಜವನ್ನು ಅಂದಾಜಿಸಿ ಅದಕ್ಕೆ ಪೂರಕವಾಗಿ ಬಿತ್ತನೆ ಬೀಜ ಮತ್ತು ಔಷಧಿ, ರಸಗೊಬ್ಬರ ದಾಸ್ತಾನು ಲಭ್ಯವಿದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಿ ಎಂದು ಅವರು ತೋಟ ಗಾರಿಕೆ ಇಲಾಖೆ ಉಪನಿರ್ದೇಶಕರು ಹಾಗೂ ಕೃಷಿ ಮಾರಾಟ ಇಲಾಖೆ ಉಪ ನಿರ್ದೇಶಕರಿಗೆ ತಿಳಿಸಿದರು.
ರೋಗ ಪತ್ತೆ ಪರೀಕ್ಷೆಗಳು ನಡೆಸಿದ ನಂತರ ಬಿತ್ತನೆ ಬೀಜದ ಮಾರಾಟ ದಿನಾಂಕ ನಿಗದಿಪಡಿಸಿ ರೈತರಿಗೆ ಸೂಕ್ತ ಮಾಹಿತಿ ನೀಡಿ, ಅದೇ ರೀತಿ ಸಬ್ಸಿಡಿ ನೀಡಿಕೆಗೆ ಮಾರ್ಗ ಸೂಚಿ ಹಾಕಿಕೊಂಡು ಮಾರಾಟ ದರವನ್ನು ತೋಟಗಾರಿಕಾ ನಿರ್ದೇಶನಾಲಯದ ಮೂಲಕ ಮಾಡಿ ಕೊಳ್ಳಬೇಕಿದೆ, ಒಂದು ವೇಳೆ ದುಬಾರಿ ಬೆಲೆಗೆ ಮಾರಾಟವಾಗುವ ಸಂದರ್ಭ ಬಂದಲ್ಲಿ ಜಿಲ್ಲಾಡಳಿತ ಮದ್ಯ ಪ್ರವೇಶಿಸ ಲಿದೆ ಎಂದು ಹೇಳಿದರು.

ರೈತರಿಗೆ ಬಿತ್ತನೆಗಾಗಿ ಮಾರಾಟ ಮಾಡುವ ಆಲೂಗಡ್ಡೆಯ ಗುಣಮಟ್ಟ ಖಾತರಿ ಹಾಗೂ ಪೂರಕ ಪರಿಶೀಲನೆ ಬಗ್ಗೆ ತೋಟಗಾರಿಕೆ, ಎಪಿಎಂಸಿ ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಗಳು ಮುಂಜಾಗ್ರತೆ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಆಲೂಗಡ್ಡೆ ಬೇಸಾಯಕ್ಕೆ ಅಗತ್ಯ ಪರಿಕರ ಗಳಾದ ಗೊಬ್ಬರಗಳು ಹಾಗೂ ಸಸ್ಯ ಸಂರ ಕ್ಷಣಾ ಔಷಧಿ ವಿತರಣೆ ಬೀಜೋಪಚಾರ ಗಳ ಬಗ್ಗೆ ರೈತರಿಗೆ ಹೆಚ್ಚಿನ ಪ್ರಚಾರ ನೀಡು ವಂತೆ ಅವರು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಯವರು ರೈತ ಪ್ರತಿನಿಧಿಗಳು ಹಾಗೂ ವರ್ತಕರೊಂದಿಗೆ ಮಾತನಾಡಿ ಅಭಿಪ್ರಾಯಗಳನ್ನು ಕೇಳಿದರು.

ತೋಟಗಾರಿಕೆ ಉಪನಿರ್ದೇಶಕ ಬಿ. ಮಂಜುನಾಥ್ ಮಾಹಿತಿ ನೀಡಿ ಈ ವರ್ಷ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 18 ಸಾವಿರ ರೈತರು ಆಲೂ ಗಡ್ಡೆ ಬಿತ್ತನೆ ಮಾಡುವ ನಿರೀಕ್ಷೆ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಹಾಸನ ತಾಲೂ ಕಿನ ರೈತರಿಗಾಗಿ 6 ಹಾಗೂ ಇತರ ತಾಲೂಕು ರೈತರಿಗೆ 5 ಖರೀದಿ ಕೇಂದ್ರಗಳನ್ನು ಮೀಸ ಲಿರಿಸಲಾಗುವುದು ಹಾಗೂ ಅರ್ಜಿಗಳ ಸ್ವೀಕಾರ, ಗೊಬ್ಬರ, ಔಷದೋಪಚಾರ ಗಳ ವಿತರಣೆಗೆ ಪ್ರತ್ಯೇಕ ಕೌಂಟರ್ ತೆರೆಯ ಲಾಗುತ್ತದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ಮಧುಸೂಧನ್, ಕೃಷಿ ಉತ್ಪನ್ನ ಮಾರಾಟ ಇಲಾಖೆ ಉಪನಿರ್ದೇಶಕ ಶ್ರೀಹರಿ, ವರ್ತಕರ ಸಂಘದ ಅಧಿಕಾರಿ ಗಳಾದ ಗೋಪಾಲ್, ರೈತ ಪ್ರತಿನಿಧಿ ಗಳಾದ ದೇವೇಗೌಡ ಮತ್ತಿ ತರರು ಹಾಗೂ ವಿವಿಧ ಇಲಾಖೆಯ ಅಧಿಕಾರಿ ಗಳು ಹಾಜರಿದ್ದರು.

Translate »