ಎಸ್‍ಎಸ್‍ಎಲ್‍ಸಿ: ಕೊಡಗಿಗೆ ಶೇ.78.81 ಫಲಿತಾಂಶ
ಕೊಡಗು

ಎಸ್‍ಎಸ್‍ಎಲ್‍ಸಿ: ಕೊಡಗಿಗೆ ಶೇ.78.81 ಫಲಿತಾಂಶ

April 30, 2019

ಜಾಗೃತಿ ಸುಬ್ಬಯ್ಯ, ಶ್ರಾವಣಿ ಜಿಲ್ಲೆಗೆ ಪ್ರಥಮ

ಮಡಿಕೇರಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕೊಡಗು ಜಿಲ್ಲೆ ಶೇ.78.81ರಷ್ಟು ಫಲಿ ತಾಂಶ ಪಡೆಯುವ ಮೂಲಕ 22ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಜಿಲ್ಲೆಯಲ್ಲಿ ಈ ಬಾರಿಯೂ ಬಾಲಕಿ ಯರೇ ಮೇಲುಗೈ ಸಾಧಿಸಿದ್ದಾರೆ. 2018 ರಲ್ಲಿ ಕೊಡಗು ಜಿಲ್ಲೆ ಶೇ.80.68ರಷ್ಟು ಫಲಿತಾಂಶ ಪಡೆದು 18ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ 4 ಸ್ಥಾನಗಳನ್ನು ಕಳೆದು ಕೊಂಡಿದೆ. ಜಿಲ್ಲೆಯಲ್ಲಿ ಒಟ್ಟು 6987 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 5226 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ಕಳತ್ತಮಾಡು ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಮತ್ತು ಸಂತ ಜೋಸೆಫ್ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರಾವಣಿ ತಲಾ 616 ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನಕ್ಕೆ ಭಾಜನರಾಗಿ ದ್ದಾರೆ. ಶನಿವಾರಸಂತೆಯ ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಇ.ಹೆಚ್. ಕವನ 615 ಅಂಕ ಪಡೆದು ದ್ವಿತೀಯ ಸ್ಥಾನ ಪಡೆ ದುಕೊಂಡಿದ್ದಾಳೆ.

ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯ ಬಿ.ಅಪೇಕ್ಷ, ಸಾಂದೀಪನಿ ಶಾಲೆಯ ಹೆಚ್.ಕೆ. ಚಿನ್ಮಯಿ, ಕಳತ್ತಮಾಡುವಿನ ಲಯನ್ಸ್ ಶಾಲೆಯ ಕೆ.ಎ.ಅನನ್ಯ, ಕುಶಾಲನಗರದ ಫಾತಿಮಾ ಶಾಲೆಯ ಡಿ.ಆರ್. ಶಿವಾನಿ ಹಾಗೂ ಎನ್.ಡಿ. ಹರ್ಷಿಣಿ ಅವರುಗಳು ತಲಾ 612 ಅಂಕ ಗಳನ್ನು ಪಡೆಯುವ ಮೂಲಕ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 20 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದು ಕೊಂಡಿದ್ದು, ಈ ಪೈಕಿ 7 ಸರಕಾರಿ ಶಾಲೆ ಗಳು, 3 ಅನುದಾನಿತ ಹಾಗೂ 10 ಅನು ದಾನ ರಹಿತ ಶಾಲೆಗಳು ಸೇರಿವೆ. ಕನ್ನಡ ಮಾಧ್ಯಮದಲ್ಲಿ ಶೇ.69.26 ಹಾಗೂ ಆಂಗ್ಲ ಮಾಧ್ಯಮದಲ್ಲಿ ಶೇ.89.05 ಫಲಿತಾಂಶ ದಾಖಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಶೇ. 84.64, ಮಡಿಕೇರಿ 73.58 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 68.12ರಷ್ಟು ಫಲಿತಾಂಶ ಕಂಡು ಬಂದಿದೆ.

ಸೋಮವಾರಪೇಟೆ ವರದಿ: ತಾಲೂ ಕಿನ ಪ್ರಸಕ್ತ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಯಲ್ಲಿ 2869 ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದು, 1956 ವಿದ್ಯಾರ್ಥಿಗಳು ತೇರ್ಗ ಡೆಹೊಂದಿ ಶೇ.68.18 ಫಲಿತಾಂಶ ದೊರೆತಿದೆ.

ತಾಲೂಕಿನ ಕಿರಗಂದೂರು, ನಿಡ್ತ ಹಾಗೂ ಹಂಡ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಕೊಡಗರಳ್ಳಿಯ ಶಾಂತಿನಿಕೇತನ ವಿದ್ಯಾ ಸಂಸ್ಥೆ ಶೇ.100 ಫಲಿತಾಂಶ ಪಡೆದಿದೆ. ಶನಿವಾರಸಂತೆಯ ಸೇಕ್ರೆಡ್‍ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಈ.ಎಚ್.ಕವನ 615 ಅಂಕಗಳೋಂದಿಗೆ ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನವನ್ನು ನಾಲ್ವರು ವಿದ್ಯಾರ್ಥಿ ಗಳು ಹಂಚಿಕೊಂಡಿದ್ದಾರೆ. ಶನಿವಾರಸಂತೆ ಸೇಕ್ರೆಡ್‍ಹಾರ್ಟ್ ಅಂಗ್ಲ ಮಾದ್ಯಮ ಶಾಲೆಯ ಬಿ. ಅಪೇಕ್ಷ, ಕುಶಾಲ ನಗರದ ಫಾತೀಮ ಪ್ರೌಢಶಾಲೆಯ ಡಿ.ಆರ್. ಶಿವಾನಿ ಮತ್ತು ಎನ್.ಡಿ. ಹರ್ಷಿನಿ ತಲಾ 612 ಅಂಕ ಗಳನ್ನು ಪಡೆದಿದ್ದಾರೆ.

ಶೇ.85ರಷ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಾಧನೆ
ಕುಶಾಲನಗರ: ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಗೆ ಶೇ.85.41 ರಷ್ಟು ಫಲಿತಾಂಶ ಬಂದಿದೆ. ಶಾಲೆಯ 48 ವಿದ್ಯಾರ್ಥಿಗಳ ಪೈಕಿ 41 ಮಂದಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿ ಸಿ.ಆರ್.ಪುರುಷೋತ್ತಮ್ 550 (ಶೇ.88) ಅಂಕಗಳಿಸಿ ಶಾಲೆಗೆ ಪ್ರಥಮ ಹಾಗೂ ವಿದ್ಯಾರ್ಥಿನಿ ನಿಶ್ಚಿತಾ 542(ಶೇ.86) ಅಂಕಗಳಿಸಿ ದ್ವಿತೀಯ ಸ್ಥಾನ ಪಡೆದಿ ದ್ದಾರೆ. 3 ಮಂದಿ ವಿದ್ಯಾರ್ಥಿಗಳು ಅತ್ಯು ನ್ನತ ಶ್ರೇಣಿಯಲ್ಲಿ, 36 ಮಂದಿ ಪ್ರಥಮ ದರ್ಜೆ ಹಾಗೂ 2 ವಿದ್ಯಾರ್ಥಿಗಳು ದ್ವಿತೀಯ ಸ್ಥಾನಗಳಿಸಿ ಉತ್ತೀರ್ಣರಾಗಿ ದ್ದಾರೆ ಎಂದು ಶಾಲಾ ಪ್ರಾಂಶುಪಾಲ ಪ್ರಕಾಶ್ ತಿಳಿಸಿದ್ದಾರೆ.

ಬಸವನಹಳ್ಳಿ ಮೊರಾರ್ಜಿ ಶಾಲೆಗೆ ಶೇ.85 ಫಲಿತಾಂಶ: ಸಮೀಪದ ಬಸವನ ಹಳ್ಳಿಯಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಶೇ.85 ರಷ್ಟು ಫಲಿತಾಂಶ ಬಂದಿದೆ. 39 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 33 ಮಂದಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿ ಆರ್. ಹರ್ಷಿತ್ 583(ಶೇ.93.2) ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿ ದ್ದಾನೆ. 03 ಮಂದಿ ಅತ್ಯುನ್ನತ ಶ್ರೇಣಿ ಯಲ್ಲಿ, 30 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, 6 ಮಂದಿ ಅನುತ್ತೀ ರ್ಣಗೊಂಡಿದ್ದಾರೆ ಎಂದು ಸಂಸ್ಥೆ ಪ್ರಾಂಶು ಪಾಲ ಚಂದ್ರಶೇಖರ್ ರೆಡ್ಡಿ ತಿಳಿಸಿದ್ದಾರೆ.

ಫಾತಿಮಾ ಶಾಲೆಗೆ ಶೇ.72 ಫಲಿತಾಂಶ: ಇಲ್ಲಿನ ಫಾತಿಮಾ ಪ್ರೌಢಶಾಲೆಗೆ ಶೇ.72 ಫಲಿತಾಂಶ ಬಂದಿದೆ. ಶಾಲೆಯ 113 ವಿದ್ಯಾರ್ಥಿಗಳ ಪೈಕಿ 81 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ವಿದ್ಯಾರ್ಥಿ ನನೀತಾ ಕ್ರಾಸ್ಥ 578 (ಶೇ.93) ಅಂಕಗಳಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ ಎಂದು ಶಾಲಾ ಮುಖ್ಯಶಿಕ್ಷಕಿ ಸವರಿನ್ ಡಿಸೋಜ ತಿಳಿಸಿದ್ದಾರೆ.

ಶಿರಂಗಾಲ ಪ್ರೌಢಶಾಲೆಗೆ ಶೇ.78 ಫಲಿತಾಂಶ: ಸಮೀಪದ ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆಗೆ ಶೇ.78 ಫಲಿತಾಂಶ ಬಂದಿದೆ. ಶಾಲೆಯ 58 ವಿದ್ಯಾರ್ಥಿಗಳ ಪೈಕಿ 45 ವಿದ್ಯಾರ್ಥಿಗಳು ತೇರ್ಗಡೆಯಾ ಗಿದ್ದು, 2 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 26 ಮಂದಿ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ , 12 ವಿದ್ಯಾರ್ಥಿ ಗಳು ದ್ವಿತೀಯ ಹಾಗೂ 5 ಮಂದಿ ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿ ದ್ದಾರೆ. ವಿದ್ಯಾರ್ಥಿ ಸಿ.ಹಿಮಾದ್ರಿ 563 (ಶೇ.90.4) ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾನೆ ಎಂದು ಶಾಲಾ ಮುಖ್ಯಶಿಕ್ಷಕ ಸೋಮಯ್ಯ ತಿಳಿಸಿದ್ದಾರೆ.

Translate »