ವಿರಾಜಪೇಟೆಯಲ್ಲಿ ಮಾರಿಯಮ್ಮ ದೇವಿ ಉತ್ಸವ
ಕೊಡಗು

ವಿರಾಜಪೇಟೆಯಲ್ಲಿ ಮಾರಿಯಮ್ಮ ದೇವಿ ಉತ್ಸವ

April 30, 2019

ವಿರಾಜಪೇಟೆ: ವಿರಾಜಪೇಟೆ ಶಿವಕೇರಿಯಲ್ಲಿರುವ ಶ್ರೀ ಆದಿ ದಂಡಿನ ಮಾರಿಯಮ್ಮ ಮತ್ತು ಚಾಮುಂಡಿ[ಚೌಂಡಿ] ದೇವರ ವಾರ್ಷಿಕ ಮಹೋತ್ಸವವು ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.

ಏ.30 ರಂದು ಪ್ರಾತಃಕಾಲ 6 ಗಂಟೆಗೆ ಗಣಪತಿ ಹೋಮ, ಬಳಿಕ 8.30ಕ್ಕೆ ದೇವ ರಿಗೆ ಕಳಸಪೂಜೆ ಹಾಗೂ ವಿಶೇಷ ಪೂಜಾ ಸೇವಾಕಾರ್ಯಗಳು ನಡೆದು ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ಪ್ರಸಾದ ವಿನಿ ಯೋಗದ ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಮಧ್ಯಾಹ್ನ 2.30 ಗಂಟೆಗೆ ದೇವರ ಪಲ್ಲ ಕ್ಕಿಯ ಅಲಂಕೃತ ಮಂಟಪದ ಮೆರವಣಿ ಗೆಯು ಶಿವಕೇರಿಯಿಂದ ಹೊರಟು ಅಪ್ಪಯ್ಯ ಸ್ವಾಮಿ ರಸ್ತೆಯ ಮಾರ್ಗವಾಗಿ ತೆಲುಗರ ಬೀದಿಯಲ್ಲಿರುವ ಶ್ರೀ ಮಾರಿಯಮ್ಮ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೈನರ ಬೀದಿ, ದೊಡ್ಡಟ್ಟಿ ಚೌಕಿ, ಮೂರ್ನಾಡು ರಸ್ತೆ, ಛತ್ರಕೆರೆ, ಚಿಕ್ಕಪೇಟೆ ಮಾರ್ಗವಾಗಿ ಸಾಗಿತು. ಈ ಸಂದರ್ಭ ಆದಿ ದಂಡಿನ ಮಾರಿಯಮ್ಮ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯ ರುಗಳು ಉಪಸ್ಥಿತರಿದ್ದರು. ಉತ್ಸವದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಮೇ 1 ರಂದು ದೇವಾಲಯದಲ್ಲಿ ಬೆಳಿಗ್ಗೆ ಪೂಜೆ, ಮಧ್ಯಾಹ್ನ ಮಹಾಪೂಜೆ, ನೈವೇದ್ಯ ಪೂಜೆ ಮತ್ತು ವಿಶೇಷ ಪೂಜಾ ಕಾರ್ಯ ಕ್ರಮಗಳು ಹಾಗೂ ಮೇ 3 ರಂದು ಶ್ರೀ ಚಾಮುಂಡಿ [ಚೌಂಡಿ] ದೇವರ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯ ಸೇವಾ ಸಮಿತಿ ತಿಳಿಸಿದೆ.

Translate »