ಮಳೆಗಾಳಿ ಅರ್ಭಟಕ್ಕೆ ಮನೆಗಳಿಗೆ ಹಾನಿ, ಅಪಾರ ನಷ್ಟ
ಕೊಡಗು

ಮಳೆಗಾಳಿ ಅರ್ಭಟಕ್ಕೆ ಮನೆಗಳಿಗೆ ಹಾನಿ, ಅಪಾರ ನಷ್ಟ

April 30, 2019

ಕುಶಾಲನಗರ: ಕುಶಾಲನಗರ ಸುತ್ತಮು ತ್ತಲ ಪ್ರದೇಶಗಳಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮಾರುಕಟ್ಟೆ ಬಳಿಯ ಕೆಇಬಿ ಮಂಟಿ ನಿವಾಸಿ ಮಂಜುನಾಥ್ ಎಂಬುವರ ಮನೆಯ ಶೀಟ್‍ಗಳು ಸಂಪೂರ್ಣ ನೆಲಕಚ್ಚಿವೆ.

ಮಂಜುನಾಥ್ ತಮ್ಮ ಮನೆಗೆ ಕೆಲವು ದಿನಗಳ ಹಿಂದೆಯಷ್ಟೆ 27 ಹೊಸ ಶೀಟ್‍ಗಳನ್ನು ಅಳವಡಿಸಿ ದ್ದರು. ದುರಾದೃಷ್ಟವಶಾತ್ ಸೋಮವಾರ ರಾತ್ರಿ ಸುರಿದ ಮಳೆಗೆ ಈ ಎಲ್ಲಾ ಶೀಟ್‍ಗಳು ನೆಲಕಚ್ಚಿದ್ದು, ಮನೆ ಯೊಳಗಿದ್ದ ಗೃಹೋಪಯೋಗಿ ವಸ್ತುಗಳು ಹಾನಿಗೊಳ ಗಾಗಿದೆ ಎಂದು ಮಂಜುನಾಥ್ ತಮ್ಮ ಅಳಲು ತೋಡಿ ಕೊಂಡಿದ್ದಾರೆ. ಅದೃಷ್ಟವಶಾತ್ ಮನೆಯೊಳಗಿದ್ದವರಿಗೆ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ. ಸ್ಥಳಕ್ಕೆ ಪಪಂ ಸದಸ್ಯ ಪ್ರಮೋದ್ ಮುತ್ತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಷ್ಟವನ್ನು ಭರಿಸಿಕೊಡುವಂತೆ ಸಂಬಂಧ ಪಟ್ಟವರಲ್ಲಿ ಮಂಜುನಾಥ್ ಆಗ್ರಹಿಸಿದ್ದಾರೆ. ಕುಶಾಲನಗರ ನಾಡಕಛೇರಿ ಆವರಣದಲ್ಲಿರುವ ಬೃಹತ್ ಗಾತ್ರದ ಮರವೊಂದು ಸಾರ್ವಜನಿಕ ಶೌಚಾಲಯ ಕಟ್ಟಡದ ಮೇಲೆ ಉರುಳಿ ಬಿದ್ದಿದೆ.

ಡಿವೈಎಸ್ಪಿ ಕಛೇರಿ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ್ದ ಸಾರ್ವಜನಿಕ ಶೌಚಾಲಯ ಕಟ್ಟಡದ ಮೇಲೆ ಮರ ಬುಡ ಸಹಿತ ಉರುಳಿ ಬಿದ್ದ ಹಿನ್ನಲೆಯಲ್ಲಿ ಕಟ್ಟಡದ ಮೇಲ್ಚಾವಣಿಗೆ ಹಾನಿಯುಂಟಾಗಿರುವುದು ಕಂಡುಬಂದಿದೆ.

ರಾಯಚೂರು ವಿದ್ಯಾರ್ಥಿನಿ ಕೊಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಆಗ್ರಹ
ವಿರಾಜಪೇಟೆ: ರಾಯಚೂರಿನಲ್ಲಿ ಇಂಜಿನಿ ಯರ್ ವಿದ್ಯಾರ್ಥಿನಿ ಮಧುಪತ್ತಾರ್ ಮೇಲಿನ ಅತ್ಯಾ ಚಾರ ಕೊಲೆ ಕೃತ್ಯವನ್ನು ತೀವ್ರವಾಗಿ ಖಂಡಿಸುವುದಾಗಿ ವಿರಾಜಪೇಟೆ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ತಿಳಿಸಿದ್ದಾರೆ.

ಈ ಘಟನೆಯಲ್ಲಿ ಶಾಮೀಲಾಗಿರುವ ಎಲ್ಲರನ್ನು ಶಿಕ್ಷಿಸಬೇಕು, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಪ್ರಭಾವಗಳಿಗೆ ಒಳಗಾಗದೆ ಸೂಕ್ತ ತನಿಖೆ ನಡೆಸಬೇಕು, ಅಮಾನವೀಯವಾಗಿ ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ನಡೆಸಿ ಕೊಲೆ ಮಾಡಿರುವುದು ಕ್ಷಮೆಗೆ ಅರ್ಹವಾದ ಕೃತ್ಯವಲ್ಲ. ಇಡೀ ನಾಗರಿಕ ಸಮಾಜ ಇದರಿಂದ ತಲೆ ತಗ್ಗಿಸುವಂತಾಗಿದೆ. ಹೇಯ ಕೃತ್ಯವಾ ಗಿದ್ದು, ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಲೋಕೇಶ್ ಆಗ್ರಹಿಸಿದರು. ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಈಶ್ವರ ಅಚಾರ್ಯ ಹಾಗೂ ಸಹ ಕಾರ್ಯ ದರ್ಶಿ ಮಂಜುನಾಥ್ ಟಿ.ಎಸ್. ಉಪಸ್ಥಿತರಿದ್ದರು.

Translate »