ಮಂಡ್ಯ, ಡಿ.29(ನಾಗಯ್ಯ)- ಕನ್ನಡ ಸಾರಸತ್ವ ಲೋಕವನ್ನು ಇಡೀ ವಿಶ್ವದಾ ದ್ಯಂತ ಪಸರಿಸುವಲ್ಲಿ ವಿಭಿನ್ನ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯದ ಮೇರು ಶಿಖರವಾಗಿ ನಿಂತಿ ದ್ದಾರೆ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಬಣ್ಣಿಸಿದರು. ನಗರದ ರೈತ ಸಭಾಂಗಣದಲ್ಲಿ ಬೆಳಕು ಸಾಹಿತ್ಯ ಸಾಂಸ್ಕøತಿಕ ಸಂಘಟನೆ ಆಯೋ ಜಿಸಿದ್ದ ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಹಿತ್ಯದ ಮೂಲಕ ಕನ್ನಡದ ಧ್ವನಿ ಗಟ್ಟಿಗೊಳಿಸಿದ ಮಹಾನ್ ಮಾನವತಾ ವಾದಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಾಕಾರದಲ್ಲೂ ಸಹ…
ವಿಶ್ವಮಾನವ ಸಂದೇಶ ಒಂದು ವರ್ಗಕ್ಕೆ ಸೀಮಿತವಲ್ಲ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಅಭಿಮತ
December 30, 2019ಮಂಡ್ಯ, ಡಿ.29(ನಾಗಯ್ಯ)- ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಒಂದು ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕ್‍ನಲ್ಲಿ ಕರುನಾಡ ಸೇವಕರು-ಕನ್ನಡಪರ ಸಂಘಟನೆ ಗಳ ಒಕ್ಕೂಟ ಏರ್ಪಡಿಸಿದ್ದ ವಿಶ್ವಮಾನವ ಕುವೆಂಪು ಜನ್ಮದಿನದ ಪ್ರಯುಕ್ತ ಕುವೆಂಪು ಕನ್ನಡ ಹಬ್ಬ ಮತ್ತು ಜಾನಪದ ಜಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಮಂತ್ರ ಮಾಂಗಲ್ಯ ಅಳವಡಿಸಿಕೊಳ್ಳಬೇಕು. ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಮನುಜಮತ ವಿಶ್ವಪಥ, ವಿಶ್ವಮಾನವರಾಗಿ ಎಂಬ ಸಂದೇಶ ಸಾರಿದವರು ಕುವೆಂಪು ಅಂತಹವರನ್ನು…
ಮಾಹಿತಿ ನೀಡದ ತಹಶೀಲ್ದಾರ್‍ಗೆ 15 ಸಾವಿರ ದಂಡ
December 30, 2019ಮಂಡ್ಯ, ಡಿ.29(ನಾಗಯ್ಯ)- ಸಾರ್ವಜನಿಕ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಕೋರಿ ಸಲ್ಲಿಸಿದ್ದ ಅರ್ಜಿಗೆ ಮಾಹಿತಿ ನೀಡದ ಲೋಪದ ಮೇಲೆ ಮದ್ದೂರು ತಹಸೀಲ್ದಾರ್‍ಗೆ 15 ಸಾವಿರ ದಂಡವಿಧಿಸಿ ಮಾಹಿತಿ ಹಕ್ಕು ಆಯೋಗವು ಆದೇಶಿಸಿದೆ. ಈ ಹಿಂದೆ ಮದ್ದೂರಿನಲ್ಲಿ ಕಾರ್ಯ ನಿರ್ವಹಿಸಿದ್ದ ಹಾಲಿ ಹೊಸಕೋಟೆ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಗೀತಾ ಅವರಿಗೆ ಮಾಹಿತಿ ಆಯೋಗ 15 ಸಾವಿರ ರೂ.ದಂಡ ವಿಧಿಸಿದೆ. ಏನಿದು ಪ್ರಕರಣ: ಮದ್ದೂರು ತಾಲೂಕು ತಹಶೀಲ್ದಾರ್ ಆಗಿ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಗೀತಾ ರವರಿಗೆ ಎನ್.ಶಿವರಾಮು ಎಂಬುವರು…
ಚುನಾವಣೆಗಳಲ್ಲಿ ಜೆಡಿಎಸ್ ಸೋಲಿಗೆ ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯವೇ ಕಾರಣ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ
December 30, 2019ಕೆ.ಆರ್.ಪೇಟೆ, ಡಿ.29- ರಾಜ್ಯದಲ್ಲಿ ಅಧಿಕಾರ ನಡೆಸಿದ ಜೆಡಿಎಸ್ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಗಳನ್ನು ನಿರ್ಲಕ್ಷಿಸಿದ್ದರಿಂದ ಜಿಲ್ಲೆಯ ಮತ ದಾರರು ಲೋಕಸಭೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅನ್ನು ತಿರಸ್ಕ ರಿಸಿದ್ದಾರೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಜಯಮ್ಮ-ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಉಪ ಚುನಾವಣೆ ಆತ್ಮಾವಲೋಕನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಗೆಲ್ಲುವ ಭರವಸೆ…
ಜಿಲ್ಲಾದ್ಯಂತ ಸಂಭ್ರಮದ ‘ಕ್ರಿಸ್‍ಮಸ್’
December 26, 2019ಕ್ರೈಸ್ತ ಬಾಂಧವರಿಂದ ವಿಶೇಷ ಪ್ರಾರ್ಥನೆ ವಿಶೇಷ ದೀಪಾಲಂಕಾರದಿಂದ ಕಂಗೊಳಿಸಿದ ಚರ್ಚ್‍ಗಳು ಸಿಹಿ ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಕ್ರೈಸ್ತ ಬಾಂಧವರು ಮಂಡ್ಯ, ಡಿ.25(ನಾಗಯ್ಯ)- ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮದಿನ, ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಬುಧವಾರ ಜಿಲ್ಲಾದ್ಯಂತ ಆಚರಿಸಿದರು.ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗ ಮಂಗಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿದ ಬಗ್ಗೆ ವರದಿಯಾಗಿದೆ. ಮಂಡ್ಯ ನಗರದ ಆರ್.ಪಿ.ರಸ್ತೆಯ ಸಾಡೆ…
ಕೇಂದ್ರದಿಂದ ದೇಶದೆಲ್ಲೆಡೆ ಭಯದ ವಾತಾವರಣ ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪ
December 26, 2019ಭಾರತೀನಗರ, ಡಿ.25(ಅ.ಸತೀಶ್)- ಕೇಂದ್ರ ಸರ್ಕಾರ ದೇಶದೆಲ್ಲೆಡೆ ಭಯದ ವಾತಾವರಣ ಸೃಷ್ಟಿ ಮಾಡಿದೆ ಎಂದು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಆರೋಪಿಸಿದರು. ಇಲ್ಲಿನ ಕೇಂಬ್ರಿಡ್ಜ್ ಶಾಲಾ ಆವರಣದಲ್ಲಿ ಬುಧವಾರ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗವಾಗಿ ಆಯೋಜಿಸಿದ್ದ ‘ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಹಿಟ್ಲರ್, ಮುಸಲೋನಿಯಂತೆ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ಸರ್ವಾ ಧಿಕಾರಿ ಧೋರಣೆಯ ಪರಿಣಾಮ ದೇಶದಲ್ಲಿ ಸಂವಿಧಾನದ ಆಶಯಗಳಿಗೆ ಬೆಲೆ…
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ
December 26, 2019ಕೆ.ಆರ್.ಪೇಟೆ, ಡಿ.25- ಪೌರತ್ವ ತಿದ್ದು ಪಡಿ ಕಾಯ್ದೆಯಿಂದ ದೇಶದ ಮುಸ್ಲಿಂ ಬಾಂಧವರಿಗೆ ತೊಂದರೆಯಾಗಲಿದೆ. ಹಾಗಾಗಿ ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆ ಯನ್ನು ಕೈಬಿಟ್ಟು ಬಹುಜನರ ಭಾವನೆ ಗಳಿಗೆ ಗೌರವ ನೀಡಬೇಕು ಎಂದು ಒತ್ತಾ ಯಿಸಿ ಪಟ್ಟಣದಲ್ಲಿ ಬುಧವಾರ ವಿವಿಧ ಪಕ್ಷಗಳು ಹಾಗೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಿತು. ಪಟ್ಟಣದಲ್ಲಿ 144 ನಿಷೇಧಾಜ್ಞೆಯ ನಡುವೆಯೂ ಪೌರತ್ವ ತಿದ್ದುಪಡಿ ಕಾಯ್ದೆ- 2019 ಮತ್ತು ಎನ್‍ಆರ್‍ಸಿ ವಿರುದ್ಧ ಕಾಂಗ್ರೆಸ್, ಜೆಡಿಎಸ್, ರೈತ ಸಂಘ, ಬಿಎಸ್‍ಪಿ ಸೇರಿ ದಂತೆ ಮತ್ತಿತರ ಪಕ್ಷಗಳು ಪಟ್ಟಣದ…
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಮುಸ್ಲಿಮರಿಗಿಲ್ಲ ತೊಂದರೆ ತಪ್ಪು ಸಂದೇಶಗಳಿಗೆ ಕಿವಿಗೊಡಬೇಡಿ: ಮಾಜಿ ಸಚಿವ ವಿಜಯಶಂಕರ್
December 25, 2019ಮಂಡ್ಯ, ಡಿ.24(ನಾಗಯ್ಯ)- ಪ್ರಸ್ತುತ ಜಾರಿಗೊಳಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಪ್ಪು ತಿಳುವಳಿಕೆಯಿಂದಾಗಿ ವದಂತಿ ಹಬ್ಬಿಸಲಾಗುತ್ತಿದೆ. ಇದಕ್ಕೆ ಭಾರತೀ ಯರು ಆತಂಕ ಪಡುವ ಅವಶ್ಯಕತೆ ಇಲ್ಲ. ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಈ ಕಾಯಿದೆ ತಿದ್ದುಪಡಿಯಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಮಾಜಿ ಸಚಿವ ವಿಜಯಶಂಕರ್ ತಿಳಿಸಿದರು. ನಗರದ ಕರ್ನಾಟಕ ಸಂಘದಲ್ಲಿ ಮಂಗಳ ವಾರ ಜನಜಾಗೃತಿ ವೇದಿಕೆ ಆಯೋಜಿ ಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ-2019 ಕುರಿತ ಸಂವಾದ ಕಾರ್ಯಕ್ರಮ ಉದ್ಘಾ ಟಿಸಿ ಅವರು ಮಾತನಾಡಿದರು. ಪೌರತ್ವ ತಿದ್ದುಪಡಿ ಕಾಯ್ದೆ…
ಸರಣಿ ಅಪಘಾತ: ನಾಲ್ವರಿಗೆ ಗಾಯ
December 25, 2019ಮಂಡ್ಯ/ಶ್ರೀರಂಗಪಟ್ಟಣ, ಡಿ.24- ಬೆಂಗಳೂರು-ಮೈಸೂರು ಹೆದ್ದಾರಿಯ ಶ್ರೀರಂಗ ಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಸರಣಿ ಅಪಘಾತ ನಡೆದು ಸುಮಾರು 8 ವಾಹನಗಳು ಜಖಂಗೊಂಡು ನಾಲ್ವರು ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸು, ಐಚರ್ ಗೂಡ್ಸ್ ವಾಹನ, ಸಿಮೆಂಟ್ ಲಾರಿ ಸೇರಿದಂತೆ ಐದು ಐಷಾರಾಮಿ ಕಾರುಗಳ ನಡುವೆ ಸರಣಿ ಅಪಘಾತ ನಡೆದು ಸವಾರರು ಯಾವುದೇ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಟಿ.ಎಂ.ಹೊಸೂರು ಗೇಟ್ ಬಳಿ ಅಳವಡಿಸಿದ್ದ ಬ್ಯಾರಿಕೇಡ್ ದಾಟುತ್ತಿದ್ದ ಸಿಮೆಂಟ್ ಲಾರಿ ಹಿಂದಿಕ್ಕಲು ವೇಗವಾಗಿ…
ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಿ: ಸಲಹೆ
December 25, 2019ನಾಗಮಂಗಲ, ಡಿ.24- ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಪೊಲೀಸ್ ಸಿಬ್ಬಂದಿ ಸ್ನೇಹದಿಂದ ವರ್ತಿಸಬೇಕು ಎಂದು ಡಿವೈಎಸ್ಪಿ ವಿಶ್ವನಾಥ್ ಸಲಹೆ ನೀಡಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಾಗಮಂಗಲ ಪೊಲೀಸ್ ಉಪವಿಭಾಗದ ಕೆ.ಆರ್.ಪೇಟೆ ಹಾಗೂ ನಾಗಮಂಗಲ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ಜನಸ್ನೇಹಿ ಪೊಲೀಸ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಸಮಸ್ಯೆಗಳನ್ನು ಹೊತ್ತು ಬರುವÀ ಸಾರ್ವಜನಿಕರ ಮನವಿ ಸ್ವೀಕರಿಸಿ, ಕಾನೂನಿನ ಚೌಕಟ್ಟಿನಲ್ಲಿ ಅವರ ಕೆಲಸ ಮಾಡಿಕೊಡಿ ಎಂದರು. ಸಿಪಿಐ ರಾಜೇಂದ್ರ ಮಾತನಾಡಿ, ಅಪರಾಧ ನಡೆದಾಗ ಠಾಣೆಗೆ…