ಜಿಲ್ಲಾದ್ಯಂತ ಸಂಭ್ರಮದ ‘ಕ್ರಿಸ್‍ಮಸ್’
ಮಂಡ್ಯ

ಜಿಲ್ಲಾದ್ಯಂತ ಸಂಭ್ರಮದ ‘ಕ್ರಿಸ್‍ಮಸ್’

December 26, 2019
  • ಕ್ರೈಸ್ತ ಬಾಂಧವರಿಂದ ವಿಶೇಷ ಪ್ರಾರ್ಥನೆ
  • ವಿಶೇಷ ದೀಪಾಲಂಕಾರದಿಂದ ಕಂಗೊಳಿಸಿದ ಚರ್ಚ್‍ಗಳು
  • ಸಿಹಿ ವಿತರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಕ್ರೈಸ್ತ ಬಾಂಧವರು

ಮಂಡ್ಯ, ಡಿ.25(ನಾಗಯ್ಯ)- ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಏಸು ಕ್ರಿಸ್ತನ ಜನ್ಮದಿನ, ಕ್ರಿಸ್‍ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಬುಧವಾರ ಜಿಲ್ಲಾದ್ಯಂತ ಆಚರಿಸಿದರು.ಮಂಡ್ಯ, ಮದ್ದೂರು, ಮಳವಳ್ಳಿ, ಪಾಂಡವ ಪುರ, ಕೆ.ಆರ್.ಪೇಟೆ, ಶ್ರೀರಂಗಪಟ್ಟಣ, ನಾಗ ಮಂಗಲ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗಳಲ್ಲಿ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಿದ ಬಗ್ಗೆ ವರದಿಯಾಗಿದೆ.

ಮಂಡ್ಯ ನಗರದ ಆರ್.ಪಿ.ರಸ್ತೆಯ ಸಾಡೆ ಸ್ಮಾರಕ ಚರ್ಚ್, ಎಂ.ಸಿ.ರಸ್ತೆಯ ಸಂತ ಜೋಸೆಫ್ ಚರ್ಚ್ ಸೇರಿದಂತೆ ವಿವಿಧ ಪ್ರಾರ್ಥನಾ ಮಂದಿರಗಳಲ್ಲಿ ಕ್ರಿಸ್‍ಮಸ್ ಹಬ್ಬದ ಹಿನ್ನೆಲೆಯಲ್ಲಿ ಕ್ರೈಸ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ ಏಸುಕ್ರಿಸ್ತನ ಗೀತೆಗಳನ್ನು ಹಾಡಿದರು.

ಧರ್ಮ ಗುರುಗಳು ಕ್ರೈಸ್ತ ಬಾಂಧವರಿಗೆ ಆರ್ಶೀವಚನ ನೀಡಿದರು. ಪ್ರಾರ್ಥನೆಯಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಧರ್ಮ ಗುರುಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಪ್ರತಿಯೊ ಬ್ಬರೂ ಹಬ್ಬದ ಶುಭಾಶಯಗಳನ್ನು ವಿನಿ ಮಯ ಮಾಡಿಕೊಂಡು ಕೇಕ್ ವಿತರಿಸಿ, ಸಂಭ್ರಮಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕ್ರಿಸ್‍ಮಸ್ ಅಂಗವಾಗಿ ಚರ್ಚ್‍ಗಳು ಕ್ರಿಸ್‍ಮಸ್ ನಕ್ಷತ್ರ, ಕ್ರಿಸ್‍ಮಸ್ ಗಿಡ ಹಾಗೂ ವಿಶೇಷ ದೀಪಾಲಂಕಾರಗಳಿಂದ ಝಗ ಮಗಿಸುತ್ತಿದ್ದವು. ಕ್ರೈಸ್ತರ ಮನೆಗಳಲ್ಲಿಯೂ ಅಲಂಕೃತ ನಕ್ಷತ್ರಗಳು ಆಕರ್ಷಿಸುತ್ತಿದ್ದವು. ಪ್ರಾರ್ಥನಾ ಮಂದಿರಗಳಲ್ಲಿ ಸಾಮೂಹಿಕ ಮೇಣದ ಬತ್ತಿ ಬೆಳಗಿಸಿ ಏಸುವಿನ ಹಾಡು ಗಳನ್ನು ಹಾಡಿದರು. ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದವರಿಗೆ ಚರ್ಚ್‍ನ ಧರ್ಮ ಗುರುಗಳು ನೀತಿ, ನ್ಯಾಯ, ಜೀವನ ಹಾಗೂ ಪ್ರಾರ್ಥನೆಯ ಮಹತ್ವವನ್ನು ಬೋಧಿಸಿದರು.

ಪಾಂಡವಪುರ ವರದಿ: ಕ್ರೈಸ್ತ ಬಾಂಧವರು ತಮ್ಮ ಮನೆಗಳ ಮುಂಭಾಗ ಗೋದಳಿ ನಿರ್ಮಿಸಿ, ಪ್ರಭು ಏಸು ಕಂದ, ಮೇರಿ ಹಾಗೂ ಜೋಸೆಫ್ ಅವರ ಪ್ರತಿಮೆ ಇಟ್ಟು ಕ್ರಿಸ್ತನ ಜನನದ ನೆನಪಿನಲ್ಲಿ ಪ್ರಾರ್ಥಿಸಿದರು. ಮನೆಗಳ ಮೇಲೆ ನಕ್ಷತ್ರ ಕಟ್ಟಿ ಪರಸ್ವರ ಸಿಹಿ ವಿತರಿಸಿ, ಶುಭಾಶಯ ಕೋರಿದರು.

ಧರ್ಮಗುರುಗಳು ಕ್ರೈಸ್ತ ಕುಟುಂಬದ ಮನೆಗೆ ತೆರಳಿ ಕ್ರಿಸ್ ಮಸ್ ಭಜನೆ ಗೀತೆ ಹಾಗೂ ಪ್ರಭು ಕ್ರಿಸ್ತರ ಜನನದ ಸಂದೇಶ ತಿಳಿಸಿದರು. ಹಬ್ಬದ ದಿನ 200 ವರ್ಷಗಳ ಇತಿಹಾಸವುಳ್ಳ ಸ್ವರ್ಗಾರೋಹಣ ಮಾತೆಯ ಚರ್ಚ್‍ಗೆ ವಿದ್ಯುತ್ ದೀಪಗಳಿಂದ ಸುಂದರ ವಾಗಿ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಹುಲ್ಲಿನಿಂದ ಸುಂದರವಾಗಿ ನಿರ್ಮಿಸಲಾದ ಗೋದಳಿ ಪವಿತ್ರ ಕುಟುಂ ಬದ ಸಂಕೇತವಾದ ಮಾತೆ ಮೇರಿಯಮ್ಮ, ಜೋಸೆಫ್ ಹಾಗೂ ಕಂದ ಏಸುವಿನ ಸ್ವರೂ ಪವು ಭಕ್ತಿ ತರಿಸಿತ್ತು. ಜೊತೆಗೆ ಕುರಿ, ದನ, ಕರು, ಆಡುಗಳ ಪ್ರತಿಮೆಗೆ ಭಕ್ತ ಸಮೂಹ ಜಾತಿ, ಮತ ಭೇದವಿಲ್ಲದೆ ಬಂದು ಹರಕೆ ಸಲ್ಲಿಸಿ ಕ್ಯಾಂಡಲ್ ಹೊತ್ತಿಸಿ ಪ್ರಾರ್ಥಿಸಿದರು.

ಚರ್ಚ್‍ನಲ್ಲಿ ಡಿ. 24ರ ರಾತ್ರಿ 11 ಗಂಟೆ ಯಿಂದ ಮಧ್ಯರಾತ್ರಿಯವರೆಗೆ ಕ್ರೈಸ್ತರು ಕ್ರಿಸ್‍ಮಸ್ ಪ್ರಾರ್ಥನೆ ಸಲ್ಲಿಸಿದರು. ಮೈಸೂರು ಧರ್ಮಕ್ಷೇತ್ರದ ಫಾದರ್ ಸಿ.ರಾಯಪ್ಪ ಮಾತನಾಡಿ, ಮನುಕುಲದ ರಕ್ಷಕ ಏಸು ಕ್ರಿಸ್ತರ ಜನನದಿಂದ ವಿಶ್ವದಲ್ಲಿ ಶಾಂತಿ, ಪ್ರೀತಿ, ನೆಮ್ಮದಿ, ಭಾವೈಕ್ಯತೆ ನೆಲೆಸಲಿ, ಕ್ರಿಸ್ತರ ನಿರೀಕ್ಷೆಯಲ್ಲಿ ಇರುವುದಕ್ಕಿಂತ ಕ್ರಿಸ್ತಏಸು ವನ್ನು ಹುಡುಕಬೇಕು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಬೇಕು. ಪ್ರತಿ ಕುಟುಂಬ ದಲ್ಲಿ ಪ್ರೀತಿ, ಸಾಮರಸ್ಯ ಇದ್ದಾಗ ಕಂದಏಸು ಎಲ್ಲರ ಮನೆಗಳಲ್ಲೂ, ಮನಗಳಲ್ಲೂ ಜನಿಸು ತ್ತಾನೆ ಎಂಬ ಹಲವು ಉದಾಹರಣೆ ಯೊಂದಿಗೆ ತಿಳಿಸಿದರು.

ಡಿ. 25ರಂದು ಬೆಳಿಗ್ಗೆ ಧರ್ಮಗುರು ಟಿ. ವಿನ್ಸಂಟ್‍ರವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ ಕ್ರಿಸ್‍ಮಸ್ ಆಚರಣೆಯ ಪ್ರಯುಕ್ತ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಭಕ್ತರು ಚರ್ಚ್‍ಗೆ ಭೇಟೆ ನೀಡಿದರು. ಸಾಂತಾಕ್ಲಾಸ್ ರೈಲಿನಲ್ಲಿ ಬರುವ ಅಣಕು ಪ್ರದರ್ಶನ ಆಕರ್ಷಣೆಯಾಗಿತ್ತು.

ಮದ್ದೂರು ವರದಿ: ಸಮೀಪದ ಬೋರಾ ಪುರ ಗೇಟ್‍ನಲ್ಲಿರುವ ಆಶ್ರಯಧಾಮ ಅನಾಥಶ್ರಮದಲ್ಲಿ ಕ್ರಿಸ್‍ಮಸ್ ಅಂಗವಾಗಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ಬುಧವಾರ ನಡೆಯಿತು.

ಮಕ್ಕಳು ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಹಾಡು, ನೃತ್ಯಗಳನ್ನು ಪ್ರದರ್ಶಿಸಿದರು. ಏಸುವಿನÀ ಕುರಿತು ಪ್ರಾರ್ಥನೆ ಮಾಡಿದರು. ಕ್ರಿಸ್‍ಮಸ್ ಅಂಗವಾಗಿ ಮಕ್ಕಳಿಗೆ ಹಾಗೂ ಸಾರ್ವಜನಿಕ ರಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.

ಶ್ರೀರಂಗಪಟ್ಟಣ ವರದಿ: ಪಟ್ಟಣದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸ ಲಾಯಿತು. ಪಟ್ಟಣದ ಗಂಜಾಮ್‍ನಲ್ಲಿರುವ ಅಬ್ಬೆದುಬ್ವಾ ಚರ್ಚ್‍ನಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆಸಲಾಯಿತು. ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಕ್ರೈಸ್ತ ಬಾಂಧವರು ಪೂಜೆ ಪ್ರಾರ್ಥನೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು. ಧರ್ಮಗುರು ಫಾದರ್ ಫೌಲುಸ್ ಥಾಮಸ್ ಬೋಧನೆ ಮಾಡಿದರು. ಗೋದಳಿಯಲ್ಲಿ ಬಾಲಏಸು ಮೂರ್ತಿ ಇಡಲಾಗಿತ್ತು.

Translate »