ಕುವೆಂಪು ಕನ್ನಡ ಸಾಹಿತ್ಯದ ಸಂಪತ್ತು: ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಸಿಪಿಕೆ ಬಣ್ಣನೆ
ಮಂಡ್ಯ

ಕುವೆಂಪು ಕನ್ನಡ ಸಾಹಿತ್ಯದ ಸಂಪತ್ತು: ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ ಸಿಪಿಕೆ ಬಣ್ಣನೆ

December 30, 2019

ಮಂಡ್ಯ, ಡಿ.29(ನಾಗಯ್ಯ)- ಕನ್ನಡ ಸಾರಸತ್ವ ಲೋಕವನ್ನು ಇಡೀ ವಿಶ್ವದಾ ದ್ಯಂತ ಪಸರಿಸುವಲ್ಲಿ ವಿಭಿನ್ನ ಕೊಡುಗೆ ನೀಡಿದ ರಾಷ್ಟ್ರಕವಿ ಕುವೆಂಪು ಕನ್ನಡ ಸಾಹಿತ್ಯದ ಮೇರು ಶಿಖರವಾಗಿ ನಿಂತಿ ದ್ದಾರೆ ಎಂದು ಸಾಹಿತಿ ಡಾ.ಸಿ.ಪಿ. ಕೃಷ್ಣಕುಮಾರ್ ಬಣ್ಣಿಸಿದರು.

ನಗರದ ರೈತ ಸಭಾಂಗಣದಲ್ಲಿ ಬೆಳಕು ಸಾಹಿತ್ಯ ಸಾಂಸ್ಕøತಿಕ ಸಂಘಟನೆ ಆಯೋ ಜಿಸಿದ್ದ ಪಂಚ ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಸಾಹಿತ್ಯದ ಮೂಲಕ ಕನ್ನಡದ ಧ್ವನಿ ಗಟ್ಟಿಗೊಳಿಸಿದ ಮಹಾನ್ ಮಾನವತಾ ವಾದಿ ಕುವೆಂಪು ಸಾಹಿತ್ಯದ ಎಲ್ಲಾ ಪ್ರಾಕಾರದಲ್ಲೂ ಸಹ ಮೌಲ್ಯಯುತವಾದ ಕೃಷಿ ಮಾಡಿ ಪಂಪನಿಗಿಂತ ಶ್ರೇಷ್ಠವಾಗಿ ನಿಂತ ಕವಿಶ್ರೇಷ್ಠರು ಎಂದರು.

ಪ್ರಸ್ತುತ ತಂತ್ರಜ್ಞಾನದ ದಾಳಿಯಿಂದಾಗಿ ಕನ್ನಡದ ಬಳಕೆ ಕಡಿಮೆಯಾಗಿದೆ. ಇಂಗ್ಲಿಷ್ ವ್ಯಾಮೋಹ ವ್ಯಾಪಕವಾಗಿ ಹಬ್ಬುತ್ತಿರುವುದ ರಿಂದ ಮುಂದೊಂದು ದಿನ ಕನ್ನಡ ನಶಿಸಿ ಹೋಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇಂದು ವಿದೇಶದ ಲ್ಲಿರುವ ಕನ್ನಡಿಗರು ಭಾಷೆಯನ್ನು ಬಳಸು ತ್ತಿದ್ದಾರೆ. ಇದಕ್ಕೆ ಉದಾಹರಣೆ ಸಮ್ಮೇಳನಾ ಧ್ಯಕ್ಷೆ ಡಾ.ಸುಕನ್ಯಾ ಸೂನಗಹಳ್ಳಿ ಅವರು, ಕೀನ್ಯಾ ದೇಶದಲ್ಲಿದ್ದುಕೊಂಡು ಕ್ರಿಯಾಶೀಲ ವಾಗಿ ಕನ್ನಡ ಸಾಹಿತ್ಯ ಸೇವೆಯಲ್ಲಿ ನಿರತ ವಾಗಿರುವುದು ಶ್ಲಾಘನೀಯ ಎಂದರು.

ದುಬೈ ಕನ್ನಡ ಸಂಘದ ಮಾಜಿ ಅಧ್ಯಕ್ಷ ಜಫ್ರುಲ್ಲಾಖಾನ್ ಮಾತನಾಡಿ, ವಿದೇಶಿಗಳಲ್ಲಿ ನೆಲೆಸಿರುವ ಮಂದಿ ಕನ್ನಡ ಭಾಷೆ, ನೆಲ, ಜಲದ ವಿಚಾರ ಬಂದಾಗ ತೋರುವ ಐಕ್ಯತೆ, ಹೋರಾಟ ಮನೋಭಾವ ಇತ್ತೀಚೆಗೆ ಕನ್ನಡ ನಾಡಿನ ಮಂದಿಯಲ್ಲಿ ಕ್ಷೀಣಿಸುತ್ತಿರು ವುದು ವಿಷಾದನೀಯ. ಪ್ರತಿಯೊಬ್ಬರೂ ಮೊದಲು ಮಾತೃಭಾಷೆ ಪ್ರೀತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಸಮ್ಮೇಳನಾಧ್ಯಕ್ಷೆ ಡಾ.ಸುಕನ್ಯಾ ಸೂನಗಹಳ್ಳಿ ಮಾತನಾಡಿ, ಅಪ್ಪಟ ಕೃಷಿಕರ ಜಿಲ್ಲೆ ಮಂಡ್ಯ ಸೇರಿದಂತೆ ನಾಡಿನ ಅನ್ನದಾತರು ಆತ್ಮಹತ್ಯೆ ಹಾದಿ ಹಿಡಿದಿರುವುದು ವಿಷಾದನೀಯ. ಸರ್ಕಾರ ರೈತರ ಬೆಳೆಗೆ ತಕ್ಕ ಬೆಲೆ ನೀಡಬೇಕು ಎಂದು ರೈತಪರ ಕಳಕಳಿ ವ್ಯಕ್ತಪಡಿಸಿದರು.

ಕುವೆಂಪು ಅವರು ನೇಗಿಲ ಯೋಗಿಯ ಪರವಾಗಿ ನಾಡಗೀತೆ ರಚಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇಂತಹ ಮಹಾನ್ ಕವಿ ಯನ್ನು ಪಡೆದ ಕನ್ನಡ ನಾಡು ನಿಜಕ್ಕೂ ಧನ್ಯ. ಕುವೆಂಪು ಅವರ ಸಾಹಿತ್ಯ ನಿಜ್ಯ ನೂತನ, ಮನುಜ ಮತ ವಿಶ್ವಪಥವನ್ನು ಸಾರಿದ ವಿಶ್ವಮಾನವ ಕುವೆಂಪು ಅವರ ಸಾಹಿತ್ಯವನ್ನು ಅನುಕರಿಸಿದರೆ ಬದುಕು ಸಾರ್ಥಕ ಎಂದರು.

ಮಂಡ್ಯ ಎಂದರೆ ಇಂಡಿಯಾ ಎಂಬ ಮಾತಿದೆ ಇಂಡಿಯಾದ ಎಲ್ಲಾ ವೈಶಿಷ್ಟ್ಯ ಗಳು ಮಂಡ್ಯ ಜಿಲ್ಲೆಯಲ್ಲಿ ಅಡಗಿವೆ ಎಂದರು. ಕನ್ನಡಂಬಾಡಿ ಕಟ್ಟೆ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್‍ಎಂವಿ, ಕೆ.ವಿ. ಶಂಕರಗೌಡ, ಜಿ.ಮಾದೇಗೌಡ, ಡಾ.ಎ. ಎನ್.ಮೂರ್ತಿರಾಯರು, ಬಿಎಂಶ್ರೀ, ಎಚ್.ಎಲ್.ಕೇಶವಮೂರ್ತಿ ಸೇರಿದಂತೆ ಹಲವು ಸಾಹಿತಿಗಳ ಸೇವೆಯನ್ನು ತಮ್ಮ ನುಡಿಯಲ್ಲಿ ಸ್ಮರಿಸಿದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ, ಪಿ. ರವಿಕುಮಾರ್ ಗಣಿಗ, ಮೀರಾಶಿವಲಿಂಗಯ್ಯ, ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ್, ಸಾಹಿತಿ ಸತೀಶ್ ಜವರೇಗೌಡ, ಅಣ್ಣಪ್ಪ ಮೇಟಿಗೌಡ ಅವರು ಕುವೆಂಪು, ಬೆಳಕು ಕಾಯಕರತ್ನ, ಕಲಾ ಸಾಮ್ರಾಟ್, ಮಾಂಡವ್ಯ ಮಹರ್ಷಿ, ಕುವೆಂಪು ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಕಾಯಕ ಯೋಗಿ ಸಂಸ್ಥೆ ಅಧ್ಯಕ್ಷ ಎಂ.ಶಿವಕುಮಾರ್, ರಾಜ್‍ಹಾಲ್ಸ್, ಎಂ.ಗುರುಪ್ರಸಾದ್, ವರದೇಗೌಡ, ರಂಗನಾಥ್ ಮತ್ತಿತರರಿ ದ್ದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ಕಾವ್ಯ ವಾಚನ ಮಾಡಿದರು.

ಸಮ್ಮೇಳನದ ಆರಂಭಕ್ಕೂ ಮುನ್ನ ರೈತಸಭಾಂಗಣದ ಆವರಣದಲ್ಲಿರುವ ಕುವೆಂಪು ಅವರ ಪುತ್ಥಳಿಗೆ ಸಿಪಿಕೆ ಪುಷ್ಪಾ ರ್ಚನೆ ಮಾಡಿದರು. ಜಫ್ರುಲ್ಲಾಖಾನ್ ನಾಡಧ್ವಜಾರೋಹಣ ನೆರವೇರಿಸಿದರು.

Translate »