ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಿ: ಸಲಹೆ
ಮಂಡ್ಯ

ಸಾರ್ವಜನಿಕರೊಂದಿಗೆ ಸ್ನೇಹದಿಂದ ವರ್ತಿಸಿ: ಸಲಹೆ

December 25, 2019

ನಾಗಮಂಗಲ, ಡಿ.24- ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಪೊಲೀಸ್ ಸಿಬ್ಬಂದಿ ಸ್ನೇಹದಿಂದ ವರ್ತಿಸಬೇಕು ಎಂದು ಡಿವೈಎಸ್ಪಿ ವಿಶ್ವನಾಥ್ ಸಲಹೆ ನೀಡಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಾಗಮಂಗಲ ಪೊಲೀಸ್ ಉಪವಿಭಾಗದ ಕೆ.ಆರ್.ಪೇಟೆ ಹಾಗೂ ನಾಗಮಂಗಲ ವಲಯದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಆಯೋಜಿಸಿದ್ದ ಒಂದು ದಿನದ ಜನಸ್ನೇಹಿ ಪೊಲೀಸ್ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಸಮಸ್ಯೆಗಳನ್ನು ಹೊತ್ತು ಬರುವÀ ಸಾರ್ವಜನಿಕರ ಮನವಿ ಸ್ವೀಕರಿಸಿ, ಕಾನೂನಿನ ಚೌಕಟ್ಟಿನಲ್ಲಿ ಅವರ ಕೆಲಸ ಮಾಡಿಕೊಡಿ ಎಂದರು.

ಸಿಪಿಐ ರಾಜೇಂದ್ರ ಮಾತನಾಡಿ, ಅಪರಾಧ ನಡೆದಾಗ ಠಾಣೆಗೆ ಬಂದು ದೂರು ಸಲ್ಲಿಸಿದರೆ ತಕ್ಷಣ ಸ್ಪಂದಿಸಿ. ನಂತರ ಮೇಲಧಿಕಾರಿಗಳಿಗೆ ತಿಳಿಸಿ. ನ್ಯಾಯಕ್ಕಾಗಿ ಠಾಣೆಗೆ ಬರುವ ಸಾರ್ವಜನಿಕರೊಂದಿಗೆ ಸ್ನೇಹಿತರಂತೆ ವರ್ತಿಸಿ ಕೆಲಸ ಮಾಡಿಕೊಡÀಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಾಗಮಂಗಲ ಪಟ್ಟಣ ಠಾಣೆ ಎಸ್‍ಐ ರವಿಕಿರಣ್, ಬಿಂಡಿಗನವಿಲೆ ಠಾಣೆ ಬಸವರಾಜು, ನಾಗಮಂಗಲ ಗ್ರಾಮಾಂತರ ಠಾಣೆ ರಾಮಚಂದ್ರು, ಕೆ.ಆರ್.ಪೇಟೆ ಪೆÇಲೀಸ್ ಠಾಣೆ ಲಕ್ಷ್ಮಣ್ ಹಾಗೂ ಶಿವಕುಮಾರ್, ಸಿಬ್ಬಂದಿ ವರ್ಗ ಹಾಜರಿದ್ದರು.

Translate »