ಎಲ್ಲಾ ಕಾಯಕಕ್ಕಿಂತ ರೈತರ ಕಾಯಕ ಸರ್ವಶ್ರೇಷ್ಠ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ
ಮಂಡ್ಯ

ಎಲ್ಲಾ ಕಾಯಕಕ್ಕಿಂತ ರೈತರ ಕಾಯಕ ಸರ್ವಶ್ರೇಷ್ಠ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ

December 25, 2019

ಕೆ.ಆರ್.ಪೇಟೆ, ಡಿ.24- ಪರಿಶ್ರಮದ ಮೂಲಕ ಅನ್ನ ನೀಡುವ ರೈತರ ಕಾಯಕ ಎಲ್ಲಾ ಕಾಯಕಕ್ಕಿಂತ ಸರ್ವಶ್ರೇಷ್ಠ ಕಾಯಕ ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಜಾನಕೀರಾಂ ತಿಳಿಸಿದರು.

ಪಟ್ಟಣದ ತಾಲೂಕು ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ರಾಷ್ಟ್ರೀಯ ರೈತರ, ವಿಶ್ವ ಮಣ್ಣು ದಿನಾಚರಣೆ ಹಾಗೂ ಆತ್ಮ ಯೋಜನೆಯಡಿ ಪ್ರಗತಿಪರ ರೈತರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂ ಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆವರು ಹರಿಸಿ ಭೂ ತಾಯಿ ಸೇವೆ ಮಾಡುವ ರೈತರ ಕಾಯಕ ಸರ್ವಶ್ರೇಷ್ಠ ಕಾಯಕ. ಪಟ್ಟಣ ನಿವಾಸಿಗಳಂತೆ ರೈತನೂ ಗರಿ ಗರಿ ಬಟ್ಟೆ ಹಾಕಿಕೊಂಡು ಶೋಕಿ ಮಾಡುತ್ತಾ ಬೇಸಾಯದಿಂದ ದೂರ ಉಳಿದರೆ ಎಲ್ಲರೂ ಊಟಕ್ಕಾಗಿ ಪರದಾಡ ಬೇಕಾಗುತ್ತದೆ. ಹೀಗಾಗಿ ರೈತರು ಕೃಷಿ ತಜ್ಞರ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ಪಡೆದು ಕೃಷಿಯಲ್ಲಿ ವೈಜ್ಞಾನಿಕ ಬೇಸಾಯ ಪದ್ಧತಿ ಅಳವಡಿಸಿಕೊಂಡು ಹೆಚ್ಚಿನ ಇಳು ವರಿ ಪಡೆದು ಕೃಷಿಯನ್ನು ಲಾಭದಾಯಕ ವನ್ನಾಗಿಸಿಕೊಳ್ಳಬೇಕು ಎಂದರು.

ಪ್ರಗತಿಪರ ರೈತ ಶ್ರೀನಿವಾಸಮೂರ್ತಿ ಮಾತನಾಡಿ, ನಮ್ಮ ರೈತರು ಹೆಚ್ಚಿನ ಇಳು ವರಿಗಾಗಿ ರಾಸಾಯನಿಕ ಗೊಬ್ಬರ ಹಾಗೂ ಕ್ರ್ರಿಮಿನಾಶಕ ಬಳಸಿ ಬೇಸಾಯ ಮಾಡು ತ್ತಿರುವುದರಿಂದ ಭೂಮಿ ಫಲವತ್ತತೆ ಕಳೆದು ಕೊಳ್ಳುತ್ತಿದೆ. ಹೀಗಾಗಿ ಕಾಲ ಕಾಲಕ್ಕೆ ರೈತರು ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಸಾರಕ್ಕೆ ಅನುಗುಣವಾಗಿ ಮಿಶ್ರ ಬೆಳೆ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆ ಬೆಳೆದರೆ ರೈತನ ಬದುಕು ಬಂಗಾರವಾಗುತ್ತದೆ. ಭೂ ತಾಯಿ ನಂಬಿ ಬೇಸಾಯ ಮಾಡಿದರೆ ಭೂತಾಯಿ ತನ್ನನ್ನು ನಂಬಿದ ರೈತರನ್ನು ಕೈ ಬಿಟ್ಟ ಉದಾಹರಣೆ ಇಲ್ಲ. ಸರ್ಕಾರದ ಕಾರ್ಯಕ್ರಮಗಳಲ್ಲಿ ರೈತ ರನ್ನು ತೊಡಗಿಸಿಕೊಂಡರೆ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಬರುತ್ತದೆ ಎಂದರು.

ಇದೇ ವೇಳೆ ಪ್ರಗತಿಪರ ರೈತರಾದ ಯಶೋಧಮ್ಮ, ಡಿ.ಪಿ.ಮೋಹನ್, ಶಂಭು ಲಿಂಗಪ್ಪ, ಎಂ.ಜೆ.ಯೋಗೇಶ್ ಮತ್ತು ನರಸಿಂಹೇಗೌಡರಿಗೆ ತಾಲೂಕು ಮಟ್ಟದ ಉತ್ತಮ ಕೃಷಿಕ ಪ್ರಶಸ್ತಿ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ. ಈಶ್ವರಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿ ದರು. ತಾಲೂಕು ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ನಾರಾಯಣಗೌಡ, ನಿರ್ದೇಶಕ ರಾದ ನಾರಾಯಣ್, ತಾಲೂಕು ಒಕ್ಕಲಿ ಗರ ಸಂಘದ ಅಧ್ಯಕ್ಷ ಶಿವರಾಮೇಗೌಡ, ಕೃಷಿ ಅಧಿಕಾರಿಗಳಾದ ಶ್ರೀಧರ್, ಜಯ ಶಂಕರ ಆರಾಧ್ಯ, ಆನಂದಕುಮಾರ್, ಎಂ. ಮಾನಸ, ಜಿ.ಎಸ್.ಸತೀಶ್, ಅಭಿಷೇಕ್ ಗೌಡ, ಪಿ.ಮಾಧುರಿ, ಹಾಗೂ ಆತ್ಮಾ ಯೋಜನೆ ಸಿಬ್ಬಂದಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Translate »