ಡಿಜಿಟಲ್ ಯುಗದಲ್ಲೂ ಗ್ರಾಹಕನಿಗೆ ಮಾಹಿತಿ ಕೊರತೆ!
ಹಾಸನ

ಡಿಜಿಟಲ್ ಯುಗದಲ್ಲೂ ಗ್ರಾಹಕನಿಗೆ ಮಾಹಿತಿ ಕೊರತೆ!

December 25, 2019

ಹಾಸನ, ಡಿ.24- ಡಿಜಿಟಲ್ ಯುಗದಲ್ಲೂ ಕೊಳ್ಳುವ ವಸ್ತುಗಳ ಕುರಿತು ಮಾಹಿತಿ ಕೊರತೆ ಇದ್ದು, ಗ್ರಾಹಕ ಎಚ್ಚರಿಕೆ ವಹಿಸಬೇಕು ಎಂದು ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಪಂ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವ ಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮರ್ಪಕ ಶಿಕ್ಷಣ, ನಿರ್ದಿಷ್ಟ ಮಾಹಿತಿ, ವಿಷಯದ ಬಗ್ಗೆ ಅರಿವು ಇದ್ದಾಗ ಗ್ರಾಹಕ ಮೋಸ ಹೋಗಲು ಸಾಧ್ಯವಿಲ್ಲ. ಶಿಕ್ಷಣವಂತರು, ವಿದ್ಯಾರ್ಥಿಗಳು ಕುಟುಂಬದವರು ಹಾಗೂ ನೆರೆ ಹೊರೆಯವರಿಗೆ ಗ್ರಾಹಕರ ಹಕ್ಕುಗಳು, ವಸ್ತುಗಳ ಗುಣಮಟ್ಟ ಕುರಿತಂತೆ ಹೆಚ್ಚಿನ ಮಾಹಿತಿ ನೀಡಿ, ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಧಿಕಾರಿ ಆರ್.ಗಿರೀಶ್, ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋ ಗದ ಅಧ್ಯಕ್ಷ ಎ.ಲೋಕೇಶ್‍ಕುಮಾರ್, ಗ್ರಾಹಕರ ಹಕ್ಕುಗಳ ಕುರಿತು ತಿಳಿಸಿದರು. ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲ ಶೀನಾ ಥಾಮಸ್ ಮಾತನಾಡಿದರು. ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಂಶುಪಾಲ ಡಾ.ಬಿ.ಸಿ. ರವಿಕುಮಾರ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಕೆ.ಶಾಂತಲಾ, ಜಿಲ್ಲಾ ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕ ಅನಿಲ್‍ಕುಮಾರ್, ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕಿ ಪಿ.ಸವಿತಾ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷ ಎಸ್. ಬೋರೇಗೌಡ, ಕಾರ್ಯಾಧ್ಯಕ್ಷ ವೈ.ಎಸ್.ಸಿದ್ದಯ್ಯ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

Translate »