ಮೈಸೂರಲ್ಲಿ ವ್ಯಾಪಕವಾಗುತ್ತಿದೆ ನಾಯಿಗಳ ಅಪಹರಣ, ಅಕ್ರಮ ಮಾರಾಟ
ಮೈಸೂರು

ಮೈಸೂರಲ್ಲಿ ವ್ಯಾಪಕವಾಗುತ್ತಿದೆ ನಾಯಿಗಳ ಅಪಹರಣ, ಅಕ್ರಮ ಮಾರಾಟ

December 24, 2019

ಮೈಸೂರು,ಡಿ.23-ಮೈಸೂರಲ್ಲಿ ಬಹು ಬೆಲೆ ಬಾಳುವ ಐಷಾರಾಮಿ ನಾಯಿಗಳ ಅಪಹರಣ ಹೆಚ್ಚಾಗುತ್ತಿದ್ದು, ನಮ್ಮ ನಾಯಿ ಕಳೆದಿದೆ, ಎಲ್ಲೂ ಕಾಣ್ತಿಲ್ಲ, ಎಲ್ಲಿ ಹೋಯ್ತೊ? ಎಂಬ ಪ್ರಶ್ನೆಗಳನ್ನು ಮಾಲೀಕರು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ ಅದಕ್ಕೆ ಮಾಲೀ ಕರಿಗೆ ಸರಿಯಾದ, ಸಮಂಜಸವಾದ ಉತ್ತರ ದೊರಕುತ್ತಿಲ್ಲ. ಅಕ್ರಮ ಸಂತಾನೋತ್ಪತ್ತಿಗಾಗಿ ತಮ್ಮ ನಾಯಿಗಳನ್ನು ಕಳವು ಮಾಡಿರಬಹುದು ಎಂದು ಮಾಲೀಕರು ಆತಂಕಗೊಂಡಿದ್ದಾರೆ. ಇಂತಹ ಕೃತ್ಯಗಳು ಮೈಸೂರು, ಕೊಡಗು, ಬೆಂಗಳೂರು ಮತ್ತು ಊಟಿಗಳಲ್ಲಿ ಹೆಚ್ಚಾಗುತ್ತಿವೆ.

ಅಕ್ರಮ ಸಂತಾನೋತ್ಪತ್ತಿಗಾಗಿ ಪೆಡಿಗ್ರೀ ನಾಯಿ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮತ್ತೊಂದೆಡೆ ನಾಯಿ ಗಳನ್ನು ಮಾರಾಟ ಮಾಡುವ ದೃಷ್ಟಿಯಿಂದ ಅವುಗಳ ಕಳವು ಮಾಡಲಾಗುತ್ತಿದೆ. ಅವುಗಳಲ್ಲಿ ಗೋಲ್ಡನ್ ರಿಟ್ರೀವರ್, ಲ್ಯಾಬ್ರಾಡಾರ್ಸ್ ಮತ್ತು ಜರ್ಮನ್ ಶೆಪಡ್ರ್ಸ್ ಪ್ರಮುಖವಾದವು. ಪೆಡಿಗ್ರೀ ನಾಯಿಗಳಿಗೆ ಸಾವಿರಾರು ರೂ. ಬೆಲೆ. ಕೆಲವು ನಾಯಿಗಳು ಲಕ್ಷಗಟ್ಟಲೆ ಬೆಲೆ ಬಾಳುತ್ತವೆ. ಈ ಒಂದು ಕಾರಣಕ್ಕಾಗಿ ನಾಯಿಗಳನ್ನು ಕಳವು ಮಾಡಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ.

ಅಪರೂಪದ ತಳಿಗಳಾದ ಅಲಾಸ್ಕನ್ ಮಾಲಾ ಮ್ಯೂಟ್, ಪ್ರೀತಿಯಿಂದ `ಸ್ಯಾಮ್‍ಸಂಗ್’ ಎಂದು ಕರೆಯುವ ನಾಯಿಗಳ ಬೆಲೆ ಬರೋಬ್ಬರಿ 8 ಕೋಟಿ ರೂ.ಗಳಾಗುತ್ತದೆ. ಈ ನಾಯಿಯನ್ನು ಬೆಂಗಳೂರಿನ ಕಡಬಮ್ಸ್ ಕೆನ್ನೆಲ್ಸ್ ಮಾಲೀಕರು ಹಾಗೂ ಇಂಡಿಯನ್ ಡಾಗ್ ಬ್ರೀಡರ್ಸ್ ಅಸೋಸಿ ಯೇಷನ್ ಅಧ್ಯಕ್ಷರಾದ ಸತೀಶ್ ಅವರಿಂದ ಕಳವು ಮಾಡಲಾಗಿತ್ತು. ಸತೀಶ್ ಈ ನಾಯಿಯನ್ನು ಎರಡು ವರ್ಷಗಳ ಹಿಂದೆ ಚೈನಾದಿಂದ ಆಮದು ಮಾಡಿಕೊಂಡಿದ್ದರು. ಆಗ ಈ ನಾಯಿಗೆ ಒಂದು ವರ್ಷ ವಯಸ್ಸಾಗಿತ್ತು. ಸ್ಯಾಮ್‍ಸಂಗ್ ನಾಯಿಯ ಬಾಲವನ್ನು ಕತ್ತರಿಸಿ, ಬೆಂಗಳೂರು ಹನುಮಂತ ನಗರದಲ್ಲಿರುವ ಮನೆಯಿಂದ ಕದ್ದೊಯ್ಯಲಾಗಿದೆ. ಎಂಟು ಕೋಟಿ ರೂ. ಮೌಲ್ಯದ ಈ ನಾಯಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿತ್ತು.

ಮೈಸೂರಿನಲ್ಲೂ ಹಲವು ಪ್ರಕರಣಗಳು: ಮೈಸೂರಿ ನಲ್ಲೂ ಕೂಡ ನಾಯಿ ಕಾಣೆಯಾದ ಪ್ರಕರಣಗಳು ಸಾಕಷ್ಟು ದಾಖಲಾಗಿದ್ದು, ಅದರಲ್ಲೂ ಕೆನೈನ್ ನಾಯಿಗಳನ್ನು ಕಳವು ಮಾಡಲಾಗಿದೆ. ಕೆಲವು ಮಾಲೀಕರಿಗೆ ಕಳುವಾದ ನಾಯಿಗಳು ಮರಳಿ ದೊರೆತಿವೆ. ಇನ್ನೂ ಕೆಲವು ಮಾಲೀಕರು ನಾಯಿ ಗಳನ್ನು ಹುಡುಕುತ್ತಿದ್ದು, ಅವುಗಳ ಪತ್ತೆಗಾಗಿ ಪತ್ರಿಕೆಗಳಲ್ಲಿ ಜಾಹಿರಾತುಗಳನ್ನು ಕೂಡ ನೀಡಿ, ಉಡುಗೊರೆ ಭರವಸೆಯನ್ನು ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ನಾಯಿಗಳ ಭಾವಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಮೈಸೂರಿನ ಎಲ್ಲಾ ಕೆನ್ನೆಲ್ ಕ್ಲಬ್‍ಗಳಿಗೆ ಭೇಟಿ ನೀಡಿ, ತಮ್ಮ ನಾಯಿಗಳ ಶೋಧ ನಡೆಸುತ್ತಿದ್ದಾರೆ.

ಅನೇಕ ಆನ್‍ಲೈನ್ ಪುಟಗಳಲ್ಲಿ ಕಾಣೆಯಾದ ಅಥವಾ ಕದ್ದ ಸಾಕುಪ್ರಾಣಿಗಳ ಹೃದಯ ಕಲಕುವ ಚಿತ್ರಗಳನ್ನು ಒಳಗೊಂಡಿರುತ್ತವೆ. ನಾಯಿಗಳ ಮಾಲೀಕರು ಅವುಗಳ ಮರಳುವಿಕೆಗಾಗಿ ಪ್ರಾರ್ಥಿ ಸುತ್ತಿದ್ದಾರೆ. ಕೆಲವು ಮಾಲೀಕರು ತಮ್ಮ ಸಾಕು ಪ್ರಾಣಿಗಳನ್ನು ಮರಳಿ ಪಡೆಯುವ ಭರವಸೆ ಯನ್ನು ಕಳೆದುಕೊಂಡಿದ್ದರೆ, ಮತ್ತೆ ಕೆಲವರು ಆಶಾ ಭಾವನೆ ಹೊಂದಿದ್ದಾರೆ. ನಾಯಿಗಳನ್ನು ಕಳವು ಮಾಡುವುದು ಕ್ರಿಮಿನಲ್ ಅಪರಾಧ. ಆದರೆ ಪೊಲೀ ಸರು ಮಾತ್ರ ದೂರು ಸ್ವೀಕರಿಸಲು ನಿರಾಕರಿಸು ವುದರಿಂದ ಈ ಕಾನೂನಿನ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತಿಲ್ಲ. ನಾಯಿಗಳ ಮಾಲೀ ಕರು ಪೊಲೀಸ್ ಠಾಣೆಯಲ್ಲಿ ನಾಯಿ ಕಳವಿನ ಬಗ್ಗೆ ದೂರುಗಳನ್ನು ಸ್ವೀಕರಿಸುತ್ತಿಲ್ಲ ಎಂದು `ಮೈಸೂರು ಮಿತ್ರ’ನಲ್ಲಿ ದೂರುತ್ತಲೇ ಬಂದಿದ್ದಾರೆ.

ಬಬ್ಲಿ

ಅದೃಷ್ಟವಶಾತ್ ನನ್ನ ಬಬ್ಲಿ ಮತ್ತೆ ಸಿಕ್ತು: ಮೈಸೂರಿನ ಕೃಷ್ಣಮೂರ್ತಿ ಪುರಂ ನಿವಾಸಿ ಬಿ.ವಿ. ರಾಘವ್ ಅವರಿಗೆ ಸೇರಿದ ಜರ್ಮನ್ ಶೆಪರ್ಡ್ ಏಪ್ರಿಲ್ 12 ರಂದು ಅವರ ಮನೆಯಿಂದ ಕಳುವಾಗಿತ್ತು. ಅದೃಷ್ಟವಶಾತ್ ನಾಯಿ ಮತ್ತೆ ಅವರಿಗೆ ಸಿಕ್ಕಿದೆ. “ನನ್ನ ನಾಯಿ ಯನ್ನು ದುಷ್ಕರ್ಮಿಗಳು ರಾತ್ರಿ ಸಮಯದಲ್ಲಿ ಕಳವು ಮಾಡಿ, ಅದನ್ನು ಐದು ದಿನ ಗಳವರೆಗೆ ಇಟ್ಟುಕೊಂಡಿದ್ದರು. ನಾಯಿಗಳು ಬಹಳ ನಿಷ್ಠಾ ವಂತ ಹಾಗೂ ಕೃತಜ್ಞತೆಯುಳ್ಳ ಪ್ರಾಣಿ. ಕಾರಣ ಅವುಗಳು ಹೊಸಬರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ದುರದೃಷ್ಟವಶಾತ್, ನನ್ನ ನಾಯಿ ಮತ್ತೆ ಸಿಕ್ಕಿದಾಗ ಖದೀಮರು ಅದರ ಕುತ್ತಿಗೆಯ ಬೆಲ್ಟ್ ಬಿಗಿದಿ ದ್ದರು. ನಾನು ತಕ್ಷಣ ಬೆಲ್ಟ್ ಅನ್ನು ಸಡಿಲ ಮಾಡಿದೆ. ನನ್ನ ನಾಯಿ ಕದ್ದವರೊಂದಿಗೆ ಒಗ್ಗಿಲ್ಲ. ಹಾಗಾಗಿ ಅದನ್ನು ತಂದು ಬಿಟ್ಟಿದ್ದಾರೆ ಎಂಬುದು ಆಗ ನನಗೆ ಮನವರಿಕೆಯಾಯಿತು ಎಂದು ಹೇಳಿದರು.

ಕೆನಲ್‍

ಕೆನಲ್‍ನಿಂದ ಗೋಹನ್ ಮತ್ತೆ ಪಡೆಯಲು 5 ಸಾವಿರ ಕೊಟ್ಟೆ: ಮೈಸೂರಿನ ಅಶೋಕ ರಸ್ತೆಯ ನಿವಾಸಿ ಸಿದ್ದಾರ್ಥ ಅವರ ಮನೆ ಯಿಂದ ಡಿಸೆಂಬರ್ 3 ರಂದು ನಾಯಿ ಕಳು ವಾಗಿತ್ತು. ಈ ನಾಯಿಯನ್ನು ಹುಡುಕಿ ಕೊಡುವಂತೆ ಕೆನ್ನೆಲ್ ಮಾಲೀಕರಿಗೆ 5000 ರೂ. ಗಳನ್ನು ನೀಡಿದ್ದೆ. ಅಲ್ಲದೆ ನನ್ನ ನಾಯಿ ಬಗ್ಗೆ ದಿನಪತ್ರಿಕೆಗಳಲ್ಲಿ ಜಾಹಿರಾತು ಕೂಡ ನೀಡಲಾಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣ ಗಳಲ್ಲಿ ಅದರ ಭಾವಚಿತ್ರಗಳನ್ನು ಕೂಡ ಪೋಸ್ಟ್ ಮಾಡಲಾಗಿತ್ತು. ಕೊನೆಗೆ ನನ್ನ ನಾಯಿಯನ್ನೂ ಸಿದ್ದಾರ್ಥ ಬಡಾವಣೆಯಲ್ಲಿರುವ ಒಬ್ಬರಿಗೆ 4,500 ರೂ. ಗಳಿಗೆ ಮಾರಿದ್ದಾರೆ ಎಂದು ತಿಳಿಯಿತು. ಬಳಿಕ ನಾನು 5 ಸಾವಿರ ರೂ.ಗಳನ್ನು ನೀಡಿ ನನ್ನ ನಾಯಿಯನ್ನು ಪಡೆದುಕೊಂಡೆ ಎಂದು ಅವರು ತಿಳಿಸಿದರು.

ಕೊನೆಗೂ ನನ್ನ ಅಚ್ಚುಮೆಚ್ಚಿನ ನಾಯಿ ಸಿಗಲೇ ಇಲ್ಲ: ಮೊಹಮ್ಮದ್ ನಯಿಮ್ ಅವರ ಗೋಲ್ಡನ್ ರಿಟ್ರೀವರ್ ಹೆಣ್ಣು ನಾಯಿ ಫೆಬ್ರವರಿ 18 ರಂದು ಬನ್ನಿಮಂಟ ಪದ ಅವರ ನಿವಾಸ ದಿಂದ ಕಳವಾಗಿತ್ತು. ಆದರೆ ಇಷ್ಟು ದಿನಗ ಳಾದರೂ ಅದು ಎಲ್ಲಿದೆ ಎಂದು ತಿಳಿ ಯುತ್ತಿಲ್ಲ. ನಾನೂ ಸುಮಾರು ದಿನ ಹುಡುಕಿದೆ. ನಂತರ ಭಿತ್ತಿ ಪತ್ರಗಳು, ಪೋಸ್ಟರ್ಸ್ ಗಳನ್ನು ಪ್ರಿಂಟ್ ಮಾಡಿ ಅಕ್ಕಪಕ್ಕದ ಬಡಾವಣೆಗಳಲ್ಲಿ ಹಂಚಿದೆ. ದಿನಪತ್ರಿಕೆಗಳಲ್ಲಿ ಜಾಹೀ ರಾತನ್ನು ಪ್ರಕಟಿಸಿದೆ. ಮೈಸೂರಿನ ಎಲ್ಲಾ ಕೆನ್ನೆಲ್ಸ್ ಗಳನ್ನು ಹುಡುಕಿದೆ. ಇದುವರೆಗೂ ಪತ್ತೆಯಾಗಿಲ್ಲ ಎಂದು ಅವರು ಬೇಸರದಿಂದ ನುಡಿದರು.

ಟಿಪ್ಸಿ

ಕಳವಾದ ಆರು ದಿನಗಳ ನಂತರ ನನ್ನ ಟಿಪ್ಸಿ ಮತ್ತೆ ಪಡೆದೆ: ಸುಮಂತ್ ಅವರ ಲ್ಯಾಬ್ರಾ ಡಾರ್ ಟಿಪ್ಸಿಯನ್ನು ಹೆಬ್ಬಾಳಿನ ಇನ್ಫೋಸಿಸ್ ಕ್ಯಾಂಪಸ್ ನಿಂದ ಸೆಪ್ಟೆಂಬರ್ 15 ರಂದು ಕಳವು ಮಾಡ ಲಾಗಿತ್ತು. ಬೈಕ್‍ನಲ್ಲಿ ಬಂದ ಇಬ್ಬರು, ಬಿಸ್ಕೆಟ್ಸ್ ತಿನ್ನಿಸಿ ಅದರ ಕಾಲನ್ನು ಕಟ್ಟಿ ಕಳವು ಮಾಡಿದ್ದರು. ಅದೃಷ್ಟ ವಶಾತ್ ಈ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿತ್ತು. ಇದರ ಫುಟೇಜ್ ಅನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದ್ದೆವು. ನಮ್ಮ ನಾಯಿಯನ್ನು ಹೆಬ್ಬಾ ಳಿನ ಕೆನ್ನೆಲ್‍ಗೆ ಮಾರಾಟ ಮಾಡಲಾಗಿತ್ತು. ಬಳಿಕ ಕೆನ್ನೆಲ್ ಮಾಲೀಕರಿಗೆ ನಾಯಿಯನ್ನು ಹಿಂತಿ ರುಗಿಸುವಂತೆ ಮನವಿ ಮಾಡಿದೆವು. ಕಳವು ಮಾಡಿದ ನಾಯಿಯನ್ನು ಇಟ್ಟುಕೊಳ್ಳುವುದು ಕಾನೂನಿಗೆ ವಿರುದ್ಧ ಎಂದು ತಿಳಿಸಿ ಆರು ದಿನಗಳ ನಂತರ ಟಿಪ್ಸಿಯನ್ನು ಮರಳಿ ಪಡೆದುಕೊಂಡೆವು ಎಂದು ಸುಮಂತ್ ಸಮಾಧಾನ ವ್ಯಕ್ತಪಡಿಸಿದರು.

Translate »