ಸೌಕರ್ಯ ನೀಡಿದರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಕುಸಿತ
ಮೈಸೂರು

ಸೌಕರ್ಯ ನೀಡಿದರೂ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಫಲಿತಾಂಶ ಕುಸಿತ

December 24, 2019

ಮೈಸೂರು,ಡಿ.23(ಎಂಟಿವೈ)- ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಕಲಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿದ್ದರೂ ಫಲಿತಾಂಶದ ಪ್ರಮಾಣ ಕುಸಿಯುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯ ಬಳಸಿಕೊಂಡು ಉತ್ತಮ ಫಲಿ ತಾಂಶ ನೀಡಬೇಕು. ಇದಕ್ಕೆ ಬೋಧಕ ವರ್ಗದ ಶ್ರಮ ಅಗತ್ಯ ಎಂದು ಶಾಸಕ ಎಲ್.ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕೊಠಡಿ ಉದ್ಘಾಟನೆ ಹಾಗೂ ಸಾಂಸ್ಕøತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಅಧ್ಯಯನಕ್ಕೆ ಬೇಕಾದ ಸೌಲಭ್ಯ ಒದಗಿಸಲು ಸರ್ಕಾರ ವಿವಿಧ ಯೋಜನೆ ಗಳನ್ನು ಜಾರಿಗೊಳಿಸುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಸರಿಸಾಟಿಯಾಗಿ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ನೀಡಲಾಗುತ್ತಿದೆ. ಸುಸಜ್ಜಿತ ಕಟ್ಟಡ, ಪ್ರಯೋಗಾಲಯ, ಮೂಲಭೂತ ಸೌಲ ಭ್ಯವೂ ವಿದ್ಯಾರ್ಥಿಗಳಿಗೆ ದೊರೆಯುತ್ತಿದೆ. ಆದರೆ ಫಲಿತಾಂಶ ಮಾತ್ರ ಸುಧಾರಿಸುತ್ತಿಲ್ಲ ಎಂದು ವಿಷಾದಿಸಿದರು.

ಮೈಸೂರು ಜಿಲ್ಲೆಯಲ್ಲಿ ಪಿಯುಸಿ ಫಲಿ ತಾಂಶ ಶೇ.60ರಷ್ಟಿದೆ. ಎಷ್ಟೆಲ್ಲಾ ಸೌಲಭ್ಯ ನೀಡಿದರೂ ವಿದ್ಯಾರ್ಥಿಗಳು ಮಾತ್ರ ಓದು ವುದರಲ್ಲಿ ಹಿಂದೆ ಬಿದ್ದಿದ್ದಾರೆ. ಪದವಿ ಪೂರ್ವ ಕಾಲೇಜುಗಳಲ್ಲಿ ಕಡ್ಡಾಯವಾಗಿ ಮೊಬೈಲ್ ಬಳಕೆ ನಿಷೇಧಿಸಬೇಕು. ವಿದ್ಯಾರ್ಥಿಗಳ ಬಳಿ ಮೊಬೈಲ್ ಇದ್ದರೆ, ಕಿತ್ತುಕೊಂಡು ಪೋಷ ಕರನ್ನು ಕರೆಸಿ ಮಾಹಿತಿ ನೀಡಲು ಕ್ರಮ ಕೈಗೊಳ್ಳಬೇಕು. ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೋಧಕ ವರ್ಗದ ಮೇಲೂ ಜವಾಬ್ದಾರಿ ಹೆಚ್ಚಾ ಗಿದೆ. ಫಲಿತಾಂಶ ಸುಧಾರಣೆಯಾಗದಿ ದ್ದರೆ, ಬೋಧಕ ವರ್ಗದ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ತಪ್ಪಿಸಿ ಕೊಳ್ಳಲು ಫಲಿತಾಂಶ ಉತ್ತಮಪಡಿಸಿ, ಇಲ್ಲದಿದ್ದರೆ ನಿಮ್ಮ ದಾರಿ ನೀವೇ ಕಂಡುಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಡಾ.ಬಿ.ಎನ್.ನಾಗರತ್ನ ಮಾತ ನಾಡಿ, ಪಿಯುಸಿ ಮುಖ್ಯ ಪರೀಕ್ಷೆಗೆ ಕೇವಲ 2 ತಿಂಗಳಷ್ಟೇ ಇದೆ. ಇನ್ನಾದರೂ ವಿದ್ಯಾರ್ಥಿ ಗಳು ಓದುವುದಕ್ಕೆ ಹೆಚ್ಚಿನ ಸಮಯ ಮೀಸ ಲಿಡಬೇಕು. ಕಾಲೇಜುಗಳಲ್ಲಿ ಅಧ್ಯಯನಕ್ಕೆ ಬೇಕಾದ ಪೂರಕ ಸೌಲಭ್ಯವಿದೆ. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಫಲಿತಾಂಶ ಉತ್ತಮವಾಗಿ ಹೊರಹೊಮ್ಮುವಂತೆ ಮಾಡು ವುದರೊಂದಿಗೆ ತಮ್ಮ ಕಾಲೇಜಿಗೂ ಒಳ್ಳೆ ಹೆಸರು ತರುವಂತೆ ಸಲಹೆ ನೀಡಿದರು.

ಇದೇ ವೇಳೆ ಹೊಸ ಪ್ರಯೋಗಾಲಯದ ಕೊಠಡಿ, ತರಗತಿಗಾಗಿ ನಿರ್ಮಿಸಿರುವ 6 ಹೊಸ ಕೊಠಡಿಗಳನ್ನು ಶಾಸಕರು ಉದ್ಘಾ ಟಿಸಿದರು. ನಂತರ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹು ಮಾನ ವಿತರಿಸಲಾಯಿತು. ಕಾರ್ಯಕ್ರಮ ದಲ್ಲಿ ಪಾಲಿಕೆ ಸದಸ್ಯೆ ನಮ್ರತ ರಮೇಶ್, ಹುಣಸೂರು ಬಾಲಕಿಯರ ಸ.ಪ.ಪೂ ಕಾಲೇಜಿನ ಉಪನ್ಯಾಸಕ ಹೆಚ್.ಬಿ.ವಾಸು, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಡಾ. ಎಸ್.ಬಿ.ಎಂ. ಪ್ರಸನ್ನ, ಸದಸ್ಯ ಶಿವಕುಮಾರ್, ಕಾಲೇಜಿನ ಪ್ರಾಂಶುಪಾಲ ಸಿ.ಚಲುವಯ್ಯ, ಇಂಜಿನಿಯರ್‍ಗಳಾದ ಜಗದೀಶ್, ಮಂಜು ನಾಥ್ ಸೇರಿದಂತೆ ಸ್ಥಳೀಯ ಮುಖಂ ಡರು ಪಾಲ್ಗೊಂಡಿದ್ದರು.

Translate »