ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ ವಿಜ್ಞಾನ, ಕಲಾ ಪ್ರದರ್ಶನ
ಮೈಸೂರು

ಕೊಡಗು ಮಾಡೆಲ್ ಸ್ಕೂಲ್‍ನಲ್ಲಿ ವಿಜ್ಞಾನ, ಕಲಾ ಪ್ರದರ್ಶನ

December 24, 2019

ಮೈಸೂರು, ಡಿ.23- ಮೈಸೂರಿನ ವಿದ್ಯಾ ಶಂಕರ ಬಡಾವಣೆಯಲ್ಲಿರುವ ಕೊಡಗು ಮಾಡೆಲ್ ಶಾಲೆಯಲ್ಲಿ ಇತ್ತೀಚೆಗೆ ವಿಜ್ಞಾನ ಮತ್ತು ಕಲಾ ಪ್ರದರ್ಶನವನ್ನು ಏರ್ಪಡಿ ಸಲಾಗಿತ್ತು. ಆಲನಹಳ್ಳಿಯ ಕ್ಲಸ್ಟರ್ ಮುಖ್ಯಸ್ಥ ಮಹದೇವಸ್ವಾಮಿ ದೀಪ ಬೆಳಗಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಕೊಡಗು ವಿದ್ಯಾಸಂಸ್ಥೆಯ ಶೈಕ್ಷಣಿಕ ಕಾರ್ಯಕಾರಿ ಮಂಡಳಿಯ ಸದಸ್ಯೆ ಶ್ರೀಮತಿ ನೈನಾ ಅಚ್ಚಪ್ಪ, ಶ್ರೀಮತಿ ರ್ಯಾಲಿ ಗಣಪತಿ ಮತ್ತು ವಿನು ಪೂವಯ್ಯ, ಶ್ರೀ ಕಾವೇರಿ ಕೊಡವ ಅಸೋಸಿಯೇಷನ್‍ನ ಕಾರ್ಯಕಾರಿ ಮಂಡಳಿಯ ಸದಸ್ಯರು ಈ ವೇಳೆ ಹಾಜರಿದ್ದು, ಕಲೆ ಮತ್ತು ಕ್ರೀಡಾ ಕೊಠಡಿಗಳನ್ನು ಉದ್ಘಾಟಿಸಿದರು.

ಶಾಲೆಯ 12 ಕೊಠಡಿಗಳಲ್ಲಿ ವಿಜ್ಞಾನ, ಸಮಾಜ ವಿಜ್ಞಾನ, ಕನ್ನಡ, ಕಲೆ, ಕಂಪ್ಯೂ ಟರ್, ಪರಿಸರ ವಿಜ್ಞಾನ, ಕ್ರೀಡೆ, ಗಣಿತ ಶಾಸ್ತ್ರÀ, ಇಂಗ್ಲಿಷ್, ಹಿಂದಿ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ವರ್ಕಿಂಗ್ ಮಾಡೆಲ್ಸ್ ಸಿದ್ಧಪಡಿಸಿ, ಪ್ರದರ್ಶನದ ಲ್ಲಿಡಲಾಗಿತ್ತು. ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಂಜೆ 5.30 ರವರೆಗೂ ನಡೆಯಿತು. ಪೋಷಕರು, ಸಾರ್ವಜನಿಕರು, ಶಾಲಾ ಮಕ್ಕಳು, ಇತರೆ ಶಾಲೆಗಳ ಆಡಳಿತ ಮಂಡಳಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಪೋಷ ಕರು ಮತ್ತು ಅತಿಥಿಗಳು, ಮೊದಲ ಬಾರಿಗೆ ಶಾಲಾ ಮಕ್ಕಳು ಮಾಡಿರುವ ಸಾಧನೆ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿ ಸಿದರು. ಶಾಲೆಯ ವಿಶೇಷ ಸಲಹೆಗಾರರೂ ಆದ ‘ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕ ರಾದ ಕೆ.ಬಿ.ಗಣಪತಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಕ್ಕಳ ಸುಪ್ತ ಪ್ರತಿಭೆ ಕಲಾಪ್ರದರ್ಶನದ ಮೂಲಕ ಹೊರಹೊಮ್ಮಿದ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ಪ್ರತಿ ವರ್ಷದಂತೆ ಶಾಲೆಯು ಎರಡು ದಿನಗಳ ವಿಜ್ಞಾನ ಪ್ರದರ್ಶನವನ್ನು ಹಮ್ಮಿಕೊಂಡಿದೆ. ಈ ಮೂಲಕ ಮಕ್ಕಳ ಉದಯೋನ್ಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕೆಂದು ಕಿವಿಮಾತು ಹೇಳಿದರು. ಶಾಲೆಯ ಮುಖ್ಯ ಶಿಕ್ಷಕಿ ಮತ್ತು ಇತರೆ ಶಿಕ್ಷಕ ವರ್ಗದವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗ ದರ್ಶನ ಮತ್ತು ಸಹಕಾರ ನೀಡಿದರು.

Translate »